ಶಿವಮೊಗ್ಗ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತಕ್ಕೂ ಹೆಚ್ಚು ಮಂದಿಯನ್ನು ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಕರುನಾಡು ಪದ್ಮಶ್ರೀ ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಿತು.

ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಿದ ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ ಕರಿಯಣ್ಣ, ವೈ.ಹೆಚ್. ನಾಗರಾಜ್, ಪ್ರಜಾಶಕ್ತಿ ಸಂಪಾದಕರಾದ ನೂತನ ಮೂಲ್ಯ , ಜಯಕರ್ನಾಟಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಎನ್. ಪ್ರೇಮಾ, ಜಿಲ್ಲಾ ಜಂಟಿ ಕಾರ್ಯದರ್ಶಿ ಮೋಹನ್ ದೇವರಾಜ್,ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನವೀನ್ ಕುಮಾರ್, ಕಾವ್ಯಶ್ರೀ, ಬೆಂಕಿ ಶೇಖರಪ್ಪ, ಕೆ.ಎನ್. ಬಸವರಾಜ್, ಕುಮಾರಸ್ವಾಮಿ, ಕಟ್ಟೆಹಕ್ಕಲು ಸಮಾಜಸೇವಕ ಕೆ.ಎನ್.ವಿಷ್ಟು ಮುಂತಾದವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್, ಪ್ರತಿಯೊಬ್ಬರು ಕಾಯಕವನ್ನು ಮಾಡಿದಾಗ ಜೀವನ ಸಾರ್ಥಕತೆಗೊಂಡು ಪರಿವರ್ತನೆಗೊಳ್ಳುತ್ತದೆ. ಕಾಯಕದ ಮಹತ್ವವನ್ನು ಕಾಯಕವೇ ಕೈಲಾಸ ಎಂಬ ಸಂದೇಶ ಸಾರಿದ ಕರ್ಮಯೋಗಿ ಮಹಾಪುರುಷ ಶ್ರೀ ಬಸವಣ್ಣ ಎಂದರು.

ಪ್ರಜಾಶಕ್ತಿ ಸಂಪಾದಕರಾದ ನೂತನ್ ಮೂಲ್ಯ ಮಾತನಾಡಿ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ನಿರಂತರವಾಗಿ ಕಾಯಕವನ್ನು ಮಾಡಿದಾಗ ಜೀವನದಲ್ಲಿ ಬೆಳಕನ್ನು ಕಾಣಲು ಸಾಧ್ಯ. ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡಿದರೆ ಅದು ತಾತ್ಕಾಲಿಕ ಸುಖವನ್ನು ಕೊಡುತ್ತದೆ. ದುಡಿದು ತಿನ್ನಬೇಕು. ಬಡಿದು ತಿನ್ನಬಾರದು ಎಂದು ತತ್ವ ಜೀವನ ಸಂದೇಶವನ್ನು ಜಗತ್ತಿಗೆ ಸಾರಿದ ಬಸವಣ್ಣ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಡಾ: ಶ್ರೀನಿವಾಸ್‌ ಕರಿಯಣ್ಣ ಮಾತನಾಡಿ, ಸಂಕಷ್ಟದಲ್ಲಿ ಇರುವವರಿಗೆ ವೈದ್ಯಕೀಯ ಆರೋಗ್ಯ ತಪಾಸಣೆಯ ಜೊತೆಗೆ ಹೆಚ್ಚಿನ ಚಿಕಿತ್ಸೆಗೆ ಉಚಿತ ಅಂಬುಲೆನ್ಸ್ ಸೇವೆಯನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ ಎಂದರು.

ಕಡೂರಿನ ಅಂತರರಾಷ್ಟ್ರೀಯ ಯೋಗಪಟು ಬೆಂಕಿ ಶೇಖರಪ್ಪ, ಜಿ.ಆರ್. ಕೇಶವಮೂರ್ತಿ ಮಗಳು ಕಾವ್ಯಶ್ರೀ ಮಾತನಾಡಿದರು.ಸಂಸ್ಥೆಯ ಉಪಾದ್ಯಕ್ಷ ಡಾ: ಪಿ.ಬಾಲಪ್ಪ, ಸ್ವಾಮಿ ವಿವೇಕಾನಂದ ರಾಜ್ಯಯುವ ಪ್ರಶಸ್ತಿ ಪುರಸ್ಕೃತಜಾನಪದಕಲಾವಿದೆ ಏ.ಹೆಚ್.ಶ್ಯಾಮಲಾ, ಸುಮ, ಭವಾನಿ ಶಂಕರ್‌ರಾವ್, ಬೆಂಗಳೂರಿನ ಶ್ರೀ ಗ್ಲೋರಿಯಸ್‌ ಏಜುಕೇಶನ್‌ ಟ್ರಸ್ಟ್ ಮುಖ್ಯ ಶಿಕ್ ಗೀತಾಮೋಹನ್, ಹಾಸನದ ಹರಿಕಥಾ ಕಲಾವಿದ ರಂಗಪ್ಪ ದಾಸ್, ಅಂತರರಾಷ್ಟ್ರೀಯ ಯೋಗಪಟು ಸೃಷ್ಠಿ ಕೆ.ವೈ. ಹರಿಹರ, ಸ್ವರ್ಣಾಶ್ರೀ ಸಿ.ದೇವಾಂಗ, ನಿವೃತ್ತ ತಹಶೀಲ್ದಾರು ರಾಮಚಂದ್ರಪ್ಪ.

ರಾಜ್ಯ ಸಮಿತಿ ಸದಸ್ಯೆ ಕನ್ನಂಗಿ ಕೌಶಲ್ಯ, ಲೋಲಾಕ್ಷಿ, ಸಿ.ಅರ್.ರಘು, ನಾಟಿವೈದ್ಯರಾಜಪ್ಪ, ಪರಿಸರ ಪ್ರೇಮಿಸ್ವಾಮಿ ನಾಯಕ್ ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕಿ ಸುಶೀಲಭವಾನಿಶಂಕರ್‌ರಾವ್ರವರ ಹುಟ್ಟುಹಬ್ಬವನ್ನು ಸಸಿ ವಿತರಿಸಿ ಸಿಹಿ ಹಂಚಿದರು. ಸಮಾರಂಭದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸಿದ್ದರು. ಕಲಾವಿದ ಭವಾನಿಶಂಕರ್‌ರಾವ್ ಪ್ರಾರ್ಥಿಸಿದ್ದರು.ಸ್ವಾಮಿ ವಿವೇಕಾನಂದ ರಾಜ್ಯಯುವ ಪ್ರಶಸ್ತಿ ಪುರಸ್ಕೃತಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಸ್ವಾಗತಿಸಿದರು. ಯೋಜನಾಧಿಕಾರಿ ಟಿ.ಸಿ. ವಿಜಯ ಭಾಸ್ಕರ್ ನಿರೂಪಿಸಿದರು. ವರದಿಗಾರ ರಂಗನಾಥ್ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…