BREAKING NEWS…

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಹತ್ತಿರ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಟೆಂಪೋ ಟ್ರಾವೆಲರ್ ಬೆಂಗಳೂರಿಂದ ಸಿಗಂದೂರು ದೇವಸ್ಥಾನ ಕಡೆಗೆ ಹೋಗುತ್ತಿದ್ದ ಚಾಲಕನಿಗೆ ಪಿಟ್ಸ್ ಬಂದಿದ್ದು ಗಾಡಿ ಪಲ್ಟಿಯಾಗಿದೆ.

ಟೆಂಪೋ ಟ್ರಾವೆಲರ್ ಒಳಗೆ 8 ಜನರ ಇದ್ದು ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ತುಮರಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳನ್ನು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಾರ್ಗಲ್ ಪೊಲೀಸರು ಬಂದು ಪ್ರಕರಣ ದಾಖಲಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…