ನ್ಯಾಯಬೆಲೆ ಅಂಗಡಿ ಮಾಲೀಕರು ಕೆ . ನಾಗರಾಜ್ ಸ್ಟೋರ್ ನಂಬರ್ 25 ಇವರು ಸರ್ಕಾರ ಬಡವರಿಗಾಗಿ ನೀಡಿದ ಅಕ್ಕಿಯನ್ನು ಕಳ್ಳತನದಿಂದ ಸಾಗಾಟ ಮಾಡುವಾಗ ಆಹಾರ ನಿರೀಕ್ಷರು ಖುದ್ದಾಗಿ ನ್ಯಾಯಬೆಲೆ ಅಂಗಡಿ ಸ್ಥಳಕ್ಕೆ ಬಂದು ಪರಿಶೀಲಿಸಿ 192 ಕ್ವಿಂಟಾಲ್ ಅಕ್ಕಿ ಮತ್ತು 1 ಕ್ವಿಂಟಾಲ್ ಗೋಧಿ ಸಾಗಟ ಮಾಡುತ್ತಿದ್ದನ್ನು ಕಂಡು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಿದರು ಮತ್ತು ಪಡಿತರದಾರರ ಹತ್ತಿರ ಪ್ರವೇಶ ನೀಡುವಾಗ ದೌರ್ಜನ್ಯ ಮಾಡಿ ಒಬ್ಬರಿಗೆ 10 ರೂ ಕೊಡಲೇ ಬೇಕೆಂದು ಒತ್ತಾಯ ಮಾಡಿದರು.
ಸದರಿ ನ್ಯಾಯಬೆಲೆ ಅಂಗಡಿಯಲ್ಲಿ ಅಂತ್ಯೋದಯ ಮತ್ತು ಬಿ.ಪಿ.ಎಲ್ ಕುಟುಂಬ ಸೇರಿ ಒಟ್ಟು 1606 ಪಡಿತರ ಚೀಟಿಗಳಿವೆ .ನ್ಯಾಯಬೆಲೆ ಅಂಗಡಿ ಮಾಲೀಕರು ದಾಸ್ತಾನುಗಳ ವಿವರಗಳನ್ನು ಬರೆದಿರುವುದಿಲ್ಲ ಮತ್ತು ಪ್ರತಿ ತಿಂಗಳು ಪಡಿತರ ದಾರರಿಗೆ ರೇಷನ್ ಕೊಡುವಾಗ ನಿಗದಿತ ಅವಧಿಯಲ್ಲಿ ರೇಷನ್ ವಿತರಿಸುವುದಿಲ್ಲ ಹಾಗೂ ಬರುವ ಪಡಿತರದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕ ನೆಲದ ಮೇಲೆ ಸುರಿದ ಹಕ್ಕಿಯನ್ನು ಸ್ವಚ್ಚತೆ ಕಾಪಾಡದೆ ಹಾಗೆ ಕೊಡುತ್ತಾರೆ ನೆಲದ ಮೇಲೆ ಟಾರ್ಪಲ್ ಹಾಕಿರುವುದಿಲ್ಲ ನ್ಯಾಯಬೆಲೆ ಅಂಗಡಿ ಮಾಲೀಕ ಪ್ರಾಧಿಕಾರದ ಪತ್ರವನ್ನು ಪ್ರವೇಶಿಸುವುದಿಲ್ಲ. ಫುಡ್ ಇನ್ಸ್ ಪೆಕ್ಟರ್ ಮೇಲೆ ಸ್ಟೋರ್ ಮಾಲೀಕ ಮತ್ತು ಅವರ ಮಗ ಜೀವ ಬೆದರಿಕೆಯನ್ನು ಹಾಕಿರುತ್ತಾರೆ ಆದ್ದರಿಂದ ದಯವಿಟ್ಟು ಜಿಲ್ಲಾಧಿಕಾರಿಗಳು ಆರ್ ಎಂಎಲ್ ನಗರ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ಅನ್ನು ರದ್ದು ಮಾಡಬೇಕೆಂದು ಜಿಲ್ಲಾಧಿಕಾರಿಗೆ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಮನವಿ ಮಾಡಿಕೊಂಡರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153