ಶಿವಮೊಗ್ಗ/ಹಿಮಾಲಯ: ಚುಂಚನಗಿರಿ ಯಲ್ಲಿರುವ ಶ್ರೀ ಆದಿಚುಂಚನಗಿರಿ ಕಾಲಭೈರವೇಶ್ವರ ಸಂಸ್ಕøತ ವೇದ ಆಗಮ ವಿದ್ಯಾಲಯದ ತಪೆÇೀವನದ 50 ವಿದ್ಯಾರ್ಥಿಗಳು ಇಂದು (ಮೇ 17) ಹಿಮಾಚಲ ಪ್ರದೇಶದ ಕುಲು ತಪ್ಪಲಿನಲ್ಲಿರುವ 12 ಸಾವಿರ ಎತ್ತರದಲ್ಲಿರುವ ಚಂದ್ರಕಾಣಿ ಬೇಸ್ ಹಿಮಾಲಯ ಪರ್ವತದಲ್ಲಿ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎನ್ನುವ ಧ್ಯೇಯ ವಾಕ್ಯದ ಸಂಸ್ಕøತ ಧ್ವಜಾರೋಹಣ ಮಾಡಿದರು.

ಮೇ 7 ರಂದು ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಶ್ರೀ  ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಮತ್ತು ಪ್ರಧಾ huನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಸಾಹಸಿ ವಿದ್ಯಾರ್ಥಿಗಳ ತಂಡವನ್ನು ಆಶೀರ್ವದಿಸಿ ಬೀಳ್ಕೊಡುಗೆ ಮಾಡಿದ್ದರು.
ಕುಲು ತಪ್ಪಲಿನಲ್ಲಿ ಇರುವ ಹದಿನೈದನೆಯ ಮೈಲಿಕಲ್ಲಿನಿಂದ ಚಾರಣ ಆರಂಬಿಸಿದ ತಂಡ ಮೊದಲನೇ ದಿನ ರುಮ್ ಸುಮ್ ತಲುಪಿ ಎರಡನೇ ದಿನ ನಯಾತಪ್ರು ತಲುಪಿತ್ತು ಮೂರನೇ ದಿನ ಚಂದ್ರಕಾಣಿ ಬೇಸ್ ತಲುಪಿ ನಯಾತಪ್ರುವಿನಲ್ಲಿ ಧ್ವಜಾರೋಹಣ ಮಾಡಲಾಯಿತು.
ಚಾರಣದ ವ್ಯವಸ್ಥೆಯನ್ನು ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮಾಡಿತ್ತು ಇದರ ರಾಷ್ಟ್ರೀಯ ಅಧ್ಯಕ್ಷ ವೆಂಕಟ್ ನಾರಾಯಣ್, ಚಾರಣ ಶಿಬಿರದ ಪ್ರಮುಖರಾದ ಗೋವಾದ ಮನೋಜ್ ಜೋಷಿ, ಸಿ.ಇ.ಓ, ರೂಪೇಶ್ ಪಾಂಡೆ ಸಾಹಸಿಗಳಿಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.
ವಿದ್ಯಾರ್ಥಿಗಳ ಜೊತೆ  ಶ್ರೀ ಮಠದ ಬ್ರಹ್ಮಚಾರಿಗಳಾದ ಶ್ರೀ ಸಂವಿದಾನಂದನಾಥಜಿ ಮತ್ತು ಶ್ರೀ ರಾಜಶೇಖರನಾಥಜಿ ಹಾಗೂ 09 ಶಿಕ್ಷಕರು ಭಾಗವಹಿಸಿದ್ದರು.

ಈ ಚಾರಣದಲ್ಲಿ ಸಂಸ್ಕøತ ಭಾರತಿ ಶಿವಮೊಗ್ಗ ಕಾರ್ಯಕರ್ತ ಅ.ನಾ.ವಿಜಯೇಂದ್ರ ರಾವ್, ಮತ್ತು ಸಂಘದ ಸಚ್ಚಿದಾನಂದ ಭಾಗವಹಿಸಿದ್ದರು. ಶಿಕ್ಷಕರಾದ, ರಾಘವ, ಬಸವರಾಜ್, ಉದ್ದಣ್ಣ, ರವಿ, ಸಂದೀಪ್, ಚಂದ್ರು, ಧನಂಜಯ, ಮಹಾಲಿಂಗ, ಸನತ್ಕುಮಾರ,  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಧ್ವಜಾರೋಹಣ ಉದ್ಧೇಶ…

ಸಕಲ ಜೀವ ಜಂತುಗಳು ಸಕಲ ದುರಿತಗಳಿಂದ ಬಿಡುಗಡೆ ಹೊಂದಲಿ. ಸಕಲರಿಗೆ ಮಂಗಲಕರವಾದದ್ದು ಅರಿಯುವಂತಾಗಲಿ, ಸಕಲರಿಗೆ ಸದ್ಬುದ್ಧಿ ದೊರೆಯುವಂತಾಗಲಿ. ಸಕಲರು ಸಮಸ್ತ ಸ್ಥಳಗಳಲ್ಲಿ ಸಂತೋಷದಿಂದಿರುವಂತಾಗಲಿ.
ಸಮಸ್ತ ಜನರೂ ಸುಖ-ಸಂತೋಷದಿಂದಿರಲಿ, ಸಮಸ್ತ ಜನರೂ ಆರೋಗ್ಯದಿಂದಿರಲಿ, ಸಮಸ್ತ ಜನರಿಗೆ ಸನ್ಮಂಗಲಕರವಾಗಿರುವುದರ ಅರಿವುಂಟಾಗಲಿ, ಯಾರೂ ಸಹ ದುಃಖಗಳಿಗೆ ಸಿಲುಕದಿರಲಿ.
ಲೋಕ ಕಲ್ಯಾಣಕ್ಕಾಗಿ ಇಂತಹ ಧ್ಯೇಯ ವಾಕ್ಯದ ಪ್ರಾರ್ಥನೆ ಹೊಂದಿದ ಧ್ವಜಾರೋಹಣ ಮಾಡಿದ ವಿದ್ಯಾರ್ಥಿಗಳನ್ನು ಇಲ್ಲಿಯ ಕ್ಯಾಂಪ್ ಲೀಡರ್ ದೀಪಕ್ ಅಭಿನಂದಿಸಿದರು.
ಅಗೋಚರ ದಿವ್ಯಶಕ್ತಿ ಮತ್ತು ಪ್ರಾರ್ಥನೆ ಸ್ವಾರ್ಥತೆಯಿಂದ ಕೂಡಿರದೆ, ವಿಶ್ವ ಭ್ರಾತೃತ್ವವನ್ನು ಪ್ರತಿಬಿಂಬಿಸುವಂತಹ ಮಹಾನ್ ಪ್ರಾರ್ಥನೆಯಾಗಿರಬೇಕು. ಈ ಪ್ರಾರ್ಥನೆಗಳು ಇಂದಿಗೂ ಸಹ ಭಾರತದ ಮೂಲೆ ಮೂಲೆಯಿಂದ ಏಕಪ್ರಕಾರವಾಗಿ ಪ್ರತಿಧ್ವನಿಸುತ್ತಿರುತ್ತದೆ. ಅದೇ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’. ಎನ್ನುವ ಘೋಷಣೆಯ ವಾಕ್ಯದ ಧ್ವಜಾರೋಹಣ ನಡೆಯಿತು.

ವರದಿ ಮಂಜುನಾಥ್ ಶೆಟ್ಟಿ…