ಲಕ್ ಡೌನ್ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ನಿರಂತರವಾಗಿ ಹಸಿದವರಿಗೆ ಸಹಾಯ ಹಸ್ತ ಚಾಚುತ್ತ ಬಂದಿದೆ. ಲಾಕ್ಡೌನ್ 54 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐ ವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ, ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಹಣ್ಣು ಹಾಗೂ ನೀರನ್ನು ವಿತರಿಸಿದರು.

ಈ ಸಂದರ್ಭ ದಲ್ಲಿ ಯುವ ಕಾಂಗ್ರೆಸ್ ಮುಖಂಡ ಮಧುಸೂದನ್ ,ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನ ಗಿರೀಶ್ D. ರೈ , ಎನ್.ಎಸ್. ಯು.ಐ ಶಿವಮೊಗ್ಗ ನಗರ ಅಧ್ಯಕ್ಷ ವಿಜಯ್ ,ಚಂದೊಜೀ ಹಾಗು ಪ್ರಮುಖರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153