ಶಿವಮೊಗ್ಗ: ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರು ಹಾಗೂ ಪದವಿ ಪೂರ್ವ ಕಾಲೇಜಿನ, (ಡಿಡಿಪಿಐ ಹಾಗೂ ಡಿಡಿಪಿಯು) ಅಧಿಕಾರಿಗಳ ಭೇಟಿ ಮಾಡಿದ ಅಣ್ಣಾ ಹಜಾರೆ ಹೋರಾಟ ಸಮಿತಿಯ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯು ಭ್ರಷ್ಟಾಚಾರ  ನಿರ್ಮೂಲನೆಗೆ ಸಹಕರಿಸಿ, ನಾಮಫಲಕ ಮೇಜಿನ ಮೇಲೆ ಸದಾ ಇರಲಿ ಎಂದು ಅಧಿಕಾರಿಗಳಿಗೆ ಮನವಿ ನೀಡಿದರು.

ಮೈನ್ ಮಿಡ್ಲ್ ಸ್ಕೂಲ್ ಶಾಲೆಯ ಆವರಣದಲ್ಲಿ ನಡೆಯುವ ಘಟನೆಗಳ ಬಗ್ಗೆ ದಿನನಿತ್ಯವೂ ಪತ್ರಿಕೆಯಲ್ಲಿ ಸುದ್ದಿ ನೋಡುತ್ತಿರುತ್ತೇವೆ, ವಿಶಾಲವಾದ ಆವರಣದಲ್ಲಿ ನಾನಾ ಶಾಲಾ ಕಟ್ಟಡ ತಲೆಯೆತ್ತಿವೆ, ಸಣ್ಣ, ಸಣ್ಣ ಮಕ್ಕಳಿಗೆ ಆಟ ವಾಡಲು ಜಾಗ ವಿರದಂತೆ ಸಾರ್ವಜನಿಕರ ವಾಹನ ಪಾಕಿರ್ಂಗ್‍ಗೆ ಅವಕಾಶ ಕಲ್ಪಿಸಿ ಕೊಟ್ಟಿರುವಿರಿ. ಬೆಳಗ್ಗೆ ವಿದ್ಯಾರ್ಥಿಗಳು ಓಡಾಡಲು ಜಾಗ ವಿರದಂತೆ ಪಾಕಿರ್ಂಗ್, ಶಿಕ್ಷಕರಿಗೆ ಪಾಠ ಮಾಡದಂತೆ ವಾಹನಗಳ ಸದ್ದು, ರಾತ್ರಿಯಾದರೆ ಗುಂಡು ತುಂಡುಗಳ ಪಾರ್ಟಿ, ಅನೈತಿಕ ಚಟುವಟಿಕೆ ತಾಣವಾಗಿರುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಕಾಣುತ್ತಿರುವೇವೂ, ಶಾಲಾ ಆವರಣದ ರಕ್ಷಣೆಯ ಗೇಟಿಗೆ ಭದ್ರತೆ ಯಾವಾಗ ಎಂದು ಪ್ರಶ್ನಿಸಿದರು.

ಮಕ್ಕಳು ಶಾಲೆಯ ಒಳಗೆ ಮತ್ತು ಹೊರಗೆ ಹೋಗಲು ಒಂದು ಗೇಟ್ ಯಾವಾಗಲೂ ತೆರೆದಿರುತ್ತದೆ, ಶಾಲಾ ಮತ್ತು ಕಾಲೇಜು ಆರಂಭ ವಾಗುವ ಹಾಗೂ ಶಾಲೆ ಬಿಡುವ ಅರ್ಧ ಘಂಟೆ ಮುಂಚೆ ಗೇಟ್ ತೆರೆದು ಸದಾ ಗೇಟಿಗೆ ಬಿಗಾ ಹಾಕಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಾನ್ಯ ಶ್ರೀ ಪರಮೇಶ್ವರಪ್ಪ ರವರು, ನಾವು ಶಾಲಾ ಆವರಣದಲ್ಲಿ ನಡೆಯುವ ಘಟನೆಗಳ ಬಗ್ಗೆ ಪತ್ರಿಕೆಯಲ್ಲಿ ಓದಿರುತ್ತೇವೆ, ಸದಾ ಗೇಟಿಗೆ ಬಿಗಾ ಹಾಕಿ, ಅದರ ಕೀ, ಎಲ್ಲಾ ಶಾಲಾ, ಕಾಲೇಜು ಪ್ರಾಂಶುಪಾಲರಿಗೆ, ಮುಖ್ಯ ಶಿಕ್ಷಕರಿಗೆ ನೀಡಿ, ಶಾಲಾ ಅವಧಿಯಲ್ಲಿ ಶಿಕ್ಷಕರು ಹೊರಗೆ ಹೋಗುವ ಅನಿವಾರ್ಯತೆ ಇದ್ದರೆ, ಅವರೇ ಗೇಟಿನ ಕೀ ತೆಗೆದು ಹಾಕಬೇಕು, ಇದರ ಬಗ್ಗೆ ಕ್ರಮ ಕೈ ಗೊಳ್ಳಲು ಬಿಇಓ ರವರಿಗೆ ತಿಳಿಸಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಮುಖರಾದ ಶಿವಸ್ವಾಮಿ ಭೂಪಾಳಂ, ಜನಮೇಜಿರಾವ್, ಚಿದಾನಂದ, ಸುಬ್ರಹ್ಮಣ್ಯ, ಶ್ರೀಕಾಂತ್, ಪ್ರೊ. ಕಲ್ಲನ, ಮನೋಹರ್, ಶಿವಕುಮಾರ್ ಕಸಟೆ, ಕೃಷ್ಣಮೂರ್ತಿ, ಚನ್ನವೀರಪ್ಪ ಗಾಮನಗಟ್ಟಿ ಮತ್ತಿತರರು ಹಾಜರಿದ್ದರು

ವರದಿ ಮಂಜುನಾಥ್ ಶೆಟ್ಟಿ…