ಜನರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕೆಂದು ಆಗ್ರಹಿಸಿ ಜನಾಗ್ರಹ ಆಂದೋಲನದ ಪ್ರಮುಖರು ಇಂದು ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಅದರಲ್ಲೂ 2ನೇ ಅಲೆಯು ಅಪ್ಪಳಿಸಿ ಜನರ ಬದುಕ್ಕನೇ ನಿವಾಶ ಮಾಡಿದೆ. ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಂಡಿಲ್ಲ. ಜೊತೆಗೆ ಸರ್ಕಾರ ಮಾಡಿದ ಖರ್ಚು ಎಷ್ಟು. ಸಂಪನ್ಮೂಲ ಕ್ರೂಡಿಕರಣಕ್ಕೆ ಇರುವ ಮಾರ್ಗಗಳೇನು ಎಂದು ಹೇಳುತ್ತಲೇ ಪ್ರಶ್ನೆ ಕೇಳುತ್ತಲೇ ಸಲಹೆ ನೀಡುತ್ತಲೇ ಪ್ರತಿಭಟನೆ ಮೂಲಕ ಎಚ್ಚರಿಸುತ್ತಿದ್ದೇವೆ. ಆದರೂ ಕೂಡ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಲಾಕ್‍ಡೌನ್ ಮುಗಿದರೂ ಸಂಕಷ್ಟಗಳು ತಪ್ಪಿದಲ್ಲ. ತಕ್ಷಣವೇ ಎಲ್ಲಾರಿಗೂ ದುಡಿಮೆ ಸಿಕ್ಕುವುದಿಲ್ಲ. ಜನರನ್ನು ಮನೆಯೊಳಗೆ ಕುಡಿಡುವುದು ಅಷ್ಟೆ ಸರ್ಕಾರದ ಕೆಲಸವಲ್ಲ. ಅವರಿಗೆ ನೆರವನ್ನು ನೀಡಬೇಕಾಗಿದೆ. ಇದುವರೆಗೂ ಕೆಲವು ಕೆಲಸಗಳು ಆಗಿರಬಹುದು. ಆದರೆ ಮತ್ತಷ್ಟು ಕೆಲಸ ಆಗಬೇಕಾಗಿದೆ ಎಂದು ಒತ್ತಾಯಿಸಿದರು.
ಬಿಪಿಎಲ್ ಕಾರ್ಡ್ ಹೊಂದಿದ್ದ ಎಲ್ಲಾರಿಗೂ ಸಮಗ್ರ ದಿನಸಿ ಕಿಟ್ ನೀಡಬೇಕು. ಕನಿಷ್ಟ 5 ಸಾವಿರ ರೂ. ಆರ್ಧಿಕ ನೆರವು ನೀಡಬೇಕು. ಅನಾಥ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ರೈತರಿಗೆ ಬೀಜ ಗೊಬ್ಬರಕ್ಕೆ ಸಬ್ಸಿಡಿ ನೀಡಬೇಕು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗಬೇಕು. ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಹಾಕಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜನಾಗ್ರಹ ಆಂದೋಲನದ ಪ್ರಮುಖರಾದ ಹೆಚ್.ಆರ್.ಬಸವರಾಜಪ್ಪ, ಕೆ.ಎಲ್.ಅಶೋಕ್, ಹಾಲೇಶಪ್ಪ, ಹೆಚ್.ಎಂ.ಯೋಗೀಶ್, ಅನನ್ಯ ಶಿವು, ಶಿವಮೂರ್ತಿ, ಚಂದ್ರು, ರಾಘವೇಂದ್ರ ಸೇರಿದಂತೆ ಹಲವರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684