“ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್” ಮತ್ತು ಕ್ಷೇಮ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ಸ್ವಚ್ಛತಾ ಕೆಲಸಗಾರರಿಗೆ ಆರೋಗ್ಯದ ಕಿಟ್ ಗಳನ್ನ ವಿತರಿಸಲಾಯಿತು. ಖ್ಯಾತ ಮನೋರೋಗ ತಜ್ಞ ರಾದ ಡಾಕ್ಟರ್. ಕೆ.ಆರ್.ಶ್ರೀಧರ್ ರವರು ಆರೋಗ್ಯದ ಕಿಟ್ ಗಳನ್ನ ವಿತರಿಸಿ ಮಾತನಾಡಿ ಜನ ಸಾಮಾನ್ಯರ ಆರೋಗ್ಯಕ್ಕಾಗಿ, ನಿಮ್ಮ ಹಾಗೂ ಇತರರ ಕ್ಷೇಮಕ್ಕಾಗಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವ ಜತೆಗೆ, ಖಡ್ಡಾಯವಾಗಿ ಮಾಸ್ಕ್ ಧರಿಸಿ ಕರೋನಾ ವನ್ನಾ ಕಟ್ಟಿಹಾಕೊಣ ಎಂದರು. ಇದೇ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಸಂಚಾಲಕರಾದ ಶ್ರೀ ಕೆ.ಸಿ.ಬಸವರಾಜ್ ರವರು ಕಳೆದ 2 ತಿಂಗಳಿಂದ ಶಿವಮೊಗ್ಗ ಜಿಲ್ಲೆಯನ್ನು ಕರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂಬ ಉದ್ದೇಶ ದಿಂದಾಗಿ ನೊಂದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಹಲವು ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಶಿವಮೊಗ್ಗ ಹೆಲ್ಪ್ಂಗ್ ಹ್ಯಾಂಡ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೋವಿಡ್ ಕೇರ್ ಸೆಂಟರ್ ಗಳಲ್ಲಿನ ಕೋವಿಡ್ ರೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಬಡಜನರಿಗೆ , ಗ್ರಾಮೀಣ ಪತ್ರಕರ್ತರಿಗೆ ಉಚಿತವಾಗಿ ಆರೋಗ್ಯದ ಕಿಟ್ ಗಳನ್ನ ವಿತರಿಸಲಾಗಿದೆ , ಜತೆಗೆ ವಿವಿಧ ತಾಲ್ಲೂಕುಗಳ ವಿಕಲ ಚೀತನರು, ವಿಧವೆಯರಿಗೆ, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಮತ್ತು ಸ್ವಯಂ ಸೇವಕರಿಗೆ ಆರೋಗ್ಯ ಕಿಟ್ ಗಳ ಜತೆ ಆಹಾರ ಪದಾರ್ಥಗಳ ಕಿಟ್ ಗಳನ್ನ ಒದಗಿಸಲಾಗಿದೆ ಎಂದರು. ಜಿಲ್ಲೆಯ ಸೊರಬ, ಆನವಟ್ಟಿ, ಭದ್ರಾವತಿ ಸರ್ಕಾರಿ ಆಸ್ಪತ್ರೆಗಳಿಗೆ oxygen concentrators ಒದಗಿಸಲಾಗಿದ್ದು, ಕೋವಿದ್ ರೋಗಿಗಳಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಆಪ್ತ ಸಮಾಲೋಚನೆಯ ನ್ನೂ ಹೆಲ್ಪ್ ಡೆಸ್ಕ್ ಹಾಗೂ ವೆಭಿನಾರ್ ಮೂಲಕ ಮಾಡಲಾಗುತ್ತಿದ್ದು, ಭಾರತೀಯ ವೈದ್ಯಕೀಯ ಸಂಘದ ಸಹಕಾರದಲ್ಲಿ ಉಚಿತವಾಗಿ ವೈದ್ಯಕೀಯ ಸಲಹೆ ನಿರಂತರವಾಗಿ ಒದಗಿಸಲಾಗುತ್ತಿದೆ , ಜಿಲ್ಲೆಯ ಎಲ್ಲಾ ವಿಕಲ ಚೇತನರಿಗೆ ಶೇಖಡಾ ನೂರರಷ್ಟು ಲಸಿಕೆ ಹಾಕಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿಕಲ ಚೇತನರ ಇಲಾಖೆ, ಸಹಕಾರದಲ್ಲಿ ಜಿಲ್ಲಾದ್ಯಂತ ವಿಕಲ ಚೇತನರಿಗೆ ಲಸಿಕೆ ಹಾಕಿಸುವ ಕಾರ್ಯ

“ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್” ಮತ್ತು ಕ್ಷೇಮ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ಸ್ವಚ್ಛತಾ ಕೆಲಸಗಾರರಿಗೆ ಆರೋಗ್ಯದ ಕಿಟ್ ಗಳನ್ನ ವಿತರಿಸಲಾಯಿತು. ಖ್ಯಾತ ಮನೋರೋಗ ತಜ್ಞ ರಾದ ಡಾಕ್ಟರ್. ಕೆ.ಆರ್.ಶ್ರೀಧರ್ ರವರು ಆರೋಗ್ಯದ ಕಿಟ್ ಗಳನ್ನ ವಿತರಿಸಿ ಮಾತನಾಡಿ ಜನ ಸಾಮಾನ್ಯರ ಆರೋಗ್ಯಕ್ಕಾಗಿ, ನಿಮ್ಮ ಹಾಗೂ ಇತರರ ಕ್ಷೇಮಕ್ಕಾಗಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವ ಜತೆಗೆ, ಖಡ್ಡಾಯವಾಗಿ ಮಾಸ್ಕ್ ಧರಿಸಿ ಕರೋನಾ ವನ್ನಾ ಕಟ್ಟಿಹಾಕೊಣ ಎಂದರು. ಇದೇ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಸಂಚಾಲಕರಾದ ಶ್ರೀ ಕೆ.ಸಿ.ಬಸವರಾಜ್ ರವರು ಕಳೆದ 2 ತಿಂಗಳಿಂದ ಶಿವಮೊಗ್ಗ ಜಿಲ್ಲೆಯನ್ನು ಕರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂಬ ಉದ್ದೇಶ ದಿಂದಾಗಿ ನೊಂದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಹಲವು ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಶಿವಮೊಗ್ಗ ಹೆಲ್ಪ್ಂಗ್ ಹ್ಯಾಂಡ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೋವಿಡ್ ಕೇರ್ ಸೆಂಟರ್ ಗಳಲ್ಲಿನ ಕೋವಿಡ್ ರೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಬಡಜನರಿಗೆ , ಗ್ರಾಮೀಣ ಪತ್ರಕರ್ತರಿಗೆ ಉಚಿತವಾಗಿ ಆರೋಗ್ಯದ ಕಿಟ್ ಗಳನ್ನ ವಿತರಿಸಲಾಗಿದೆ , ಜತೆಗೆ ವಿವಿಧ ತಾಲ್ಲೂಕುಗಳ ವಿಕಲ ಚೀತನರು, ವಿಧವೆಯರಿಗೆ, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಮತ್ತು ಸ್ವಯಂ ಸೇವಕರಿಗೆ ಆರೋಗ್ಯ ಕಿಟ್ ಗಳ ಜತೆ ಆಹಾರ ಪದಾರ್ಥಗಳ ಕಿಟ್ ಗಳನ್ನ ಒದಗಿಸಲಾಗಿದೆ ಎಂದರು. ಜಿಲ್ಲೆಯ ಸೊರಬ, ಆನವಟ್ಟಿ, ಭದ್ರಾವತಿ ಸರ್ಕಾರಿ ಆಸ್ಪತ್ರೆಗಳಿಗೆ oxygen concentrators ಒದಗಿಸಲಾಗಿದ್ದು, ಕೋವಿದ್ ರೋಗಿಗಳಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಆಪ್ತ ಸಮಾಲೋಚನೆಯ ನ್ನೂ ಹೆಲ್ಪ್ ಡೆಸ್ಕ್ ಹಾಗೂ ವೆಭಿನಾರ್ ಮೂಲಕ ಮಾಡಲಾಗುತ್ತಿದ್ದು, ಭಾರತೀಯ ವೈದ್ಯಕೀಯ ಸಂಘದ ಸಹಕಾರದಲ್ಲಿ ಉಚಿತವಾಗಿ ವೈದ್ಯಕೀಯ ಸಲಹೆ ನಿರಂತರವಾಗಿ ಒದಗಿಸಲಾಗುತ್ತಿದೆ , ಜಿಲ್ಲೆಯ ಎಲ್ಲಾ ವಿಕಲ ಚೇತನರಿಗೆ ಶೇಖಡಾ ನೂರರಷ್ಟು ಲಸಿಕೆ ಹಾಕಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿಕಲ ಚೇತನರ ಇಲಾಖೆ, ಸಹಕಾರದಲ್ಲಿ ಜಿಲ್ಲಾದ್ಯಂತ ವಿಕಲ ಚೇತನರಿಗೆ ಲಸಿಕೆ ಹಾಕಿಸುವ ಕಾರ್ಯ ನಡೆದಿದ್ದು ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್, ನೇಸರ ಸಂಸ್ಥೆ ವತಿಯಿಂದ ಎರಡು ವಾಹನಗಳನ್ನು ಒದಗಿಸಲಾಗಿದ್ದು ಅದಕ್ಕಾಗಿ ಲಸಿಕಾ ಆಂದೋಲನ ಕೈಗೊಳ್ಳಲಾಗಿದೆ , ಜತೆಗೆ ಇತ್ತೀಚೆಗೆ ರಕ್ತ ದಾನ ಶಿಬಿರವನ್ನು ಸಹ ನಡೆಸಲಾಗಿದೆ ಎಂದರು.. ರೋಟರಿ ಕ್ಲಬ್ ನ ಮಾಜಿ ಸಹಾಯಕ ಗವರ್ನರ್ ಶ್ರೀ ವಿಜಯಕುಮಾರ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾಕ್ಟರ್. ಪರಮೇಶ್ವರ್ ಶಿಗ್ಗಾಂವ ರವರು, ಅಭಿರುಚಿ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್.ಶಿವರಾಮ್ ಕೃಷ್ಣ, ಮಹಾನಗರಪಾಲಿಕೆ ಸದಸ್ಯರಾದ ಶ್ರೀ ನಾಗರಾಜ್ ಕಂಕಾರಿ , ಸಾಹಿತಿ ಶ್ರೀಮತಿ ವಿಜಯಾ ಶ್ರೀಧರ್, ಶ್ರೀ ಜನಾರ್ಧನ ಪೈ , ಶ್ರೀ ದಿಲೀಪ್ ನಾಡಿಗ್ , ಶ್ರೀ ಶೇಷಾದ್ರಿ, ಶ್ರೀ ಶೆಣೈ, ಶ್ರೀ ಮಿತ್ರಾ, ಶ್ರೀ ಪ್ರಭಾಕರ್, ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ನ ಶ್ರೀ ಗುರುಪ್ರಸಾದ್, ಶ್ರೀ ಬಸವನಗೌಡ, ಮುಂತಾದವರು ಉಪಸ್ಥಿತರಿದ್ದರು. ರಾಜೇಂದ್ರ ನಗರ ನಿವಾಸಿಗಳ ಸಂಘದ ಅದ್ಯಕ್ಷರಾದ ಪ್ರೊ. J.L. ಪದ್ಮನಾಭ್ ರವರು ಅಧ್ಯಕ್ಷತೆ ವಹಿಸಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153