ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಯುಗದ ಕವಿ ರಾಷ್ಟ್ರಕವಿ ಕುವೆಂಪು ಅವರನ್ನು ಪಠ್ಯಪುಸ್ತಕ ಪರಿಕ್ಷರಣೆಯಲ್ಲಿ ಅವಮಾನಿಸಿ ಉಲ್ಲೇಖಿಸಿರುವ ರಾಜ್ಯ ಸರ್ಕಾರವೇ ಅಂಗೀಕರಿಸಿ ಅಧಿಕೃತ ಗೊಳಿಸಿರುವ ನಾಡಗೀತೆಯನ್ನು ತಿರುಚಿ ಬರೆದು ವಿಕೃತ ಕಾರಿಯಾಗಿ ನಡೆದುಕೊಂಡಿರುವ ಕೃತಕ ಹಾಗೂ ಕಿಡಿಗೇಡಿ ರೋಹಿತ್ ಚಕ್ರತೀರ್ಥ ನ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ರವರಿಗೆ ಮನವಿ ಸಲ್ಲಿಸಲಾಯಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಕವಿ ಕುವೆಂಪು ರವರನ್ನು ಅವಮಾನಿಸಿ ನಾಡಗೀತೆಗೆ ಅಪಪ್ರಚಾರ ವೆಸಗಿದ ರೋಹಿತ್ ಚಕ್ರತೀರ್ಥರ ಮೇಲೆ ಈ ಕೂಡಲೇ ಪ್ರಥಮ ವರ್ತಮಾನ ವರದಿ ದಾಖಲಿಸಿ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ಸರ್ಕಾರದ ದಾಖಲೆಗಳೆ ಅಧಿಕೃತ ಗೊಳಿಸಿರುವ ಸಮಸ್ತ ನಾಡಿನ ಹೆಮ್ಮೆಯ ನಾಡಗೀತೆಯನ್ನು ತಿರುಚಿ ವಿಕೃತವಾಗಿ ಬರೆದು ರೋಹಿತ್ ಚಕ್ರತೀರ್ಥ ಎಂಬಾತನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದನಲ್ಲದೇ ವಿಕೃತಿ ಮೆರೆದಿದ್ದಾರೆ.
ಹಾಗಾಗಿ ರೋಲ್ ಮಾಡಿ ಅತಿ ವ್ಯಂಗ್ಯವಾಗಿ ಕನ್ನಡಪರ ಹೋರಾಟಗಾರರ ಮೇಲೆ ಲೇಖಕರ ಮೇಲೆ ಕನ್ನಡ ಭಾಷೆಯ ಮೇಲೆ ಇಲ್ಲದ ಸಲ್ಲದ ಬರಹಗಳನ್ನು ಬರೆಯುತ್ತಿದ್ದ ಇವರಿಗೆ ನಮ್ಮ ಮಲೆನಾಡಿನ ಕೀರ್ತಿಯನ್ನು ಜಗದ ಉದ್ದಗಲದಲ್ಲಿ ಸಾರಿದ ಜೀವಪರ ನಾಡಿನ ಮಾನವತಾವಾದಿ ರಾಷ್ಟ್ರಕವಿ ಕುವೆಂಪುರವರನ್ನು ಪಠ್ಯಪುಸ್ತಕ ಪರೀಕ್ಷೆ ಹಣೆಯಲ್ಲಿ ಅವಮಾನಿಸಿ ಉಲ್ಲೇಖಿಸಿರುವ ನಾಡಗೀತೆಗೆ ಗೌರವಿಸಿ ಸಮರ್ಥಿಸಿಕೊಳ್ಳುವ ಇವರ ವರ್ತನೆಯಿಂದ ಮಲೆನಾಡಿಗರಿಗೆ ಹಾಗೂ ನಾಡಿನ ಜನತೆಗೆ ಆತಂಕವನ್ನು ತರಿಸಿದೆ.

ಇಂತಹ ದೊಡ್ಡ ಕವಿತೆ ಕೊಟ್ಟ ಕುವೆಂಪುರವರ ಬಗ್ಗೆ ಅವಮಾನಕರವಾಗಿ ನಡೆದುಕೊಳ್ಳುವ ಇವರ ಹಿಂದೆ ಬಹು ದೊಡ್ಡ ಜಾಲವೇ ಇದೆ ಇದನ್ನು ತನಿಖೆ ನಡೆಸಬೇಕು ಹಾಗೂ ಇವರ ಹಿಂದೆ ಇರುವ ಜಾಲವನ್ನು ಬಯಲುಮಾಡಿ ಕೇಸು ದಾಖಲಿಸಬೇಕು ಎಂದು ಈ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವಿನಂತಿ ಮಾಡಿಕೊಳ್ಳುತ್ತದೆ.

ಕನ್ನಡ ನಾಡಿನ ಜನಮಾನಸದ ನಾಡಗೀತೆಯನ್ನು ವಿಕೃತಗೊಳಿಸಿ ನಾಡಗೀತೆಗೆ ಅವಮಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ರೋಹಿತ್ ಚಕ್ರತೀರ್ಥ ಬರಹವನ್ನು ಈಗಾಗಲೇ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ತಾವು ಇದನ್ನು ಪರಿಶೀಲಿಸಬೇಕು.
ಜಯ ಭಾರತ ಜನನಿಯ ತನುಜಾತೆ ಎಂದು ಆರಂಭವಾಗುವ ನಾಡಗೀತೆಯನ್ನು ಬರೆದವರು ರಾಷ್ಟ್ರಕವಿ ಕುವೆಂಪುರವರು ನಾಡಗೀತೆಯಲ್ಲಿ ಕನ್ನಡ ಭಾಷೆ ಕಲೆ ಸಾಹಿತ್ಯ ಜನಜೀವನ ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಅತ್ಯಂತ ಅಭಿಮಾನದಿಂದ ಹಾಡಿ ಹೊಗಳುವ ಗೀತೆ ಇದಾಗಿದೆ.ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡಗೀತೆ ಅಂಗೀಕರಿಸಿದೆ ನಾಡಗೀತೆಯನ್ನು ನಾಡಿನ ಸಕಲರೂ ಅತ್ಯಂತ ಅಭಿಮಾನ ಗೌರವಾದರಗಳೊಂದಿಗೆ ಹಾಡುತ್ತಾರೆ.ಇಂತಹ ನಾಡಗೀತೆ ಅವಮಾನ ಮಾಡಿ ಅಲ್ಲಿಗೆ ಒಳಪಡಿಸಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹಾಗೂ ವಿಶೇಷವಾಗಿ ಹೋರಾಟದ ಜನ್ಮಭೂಮಿ ಸಾಹಿತಿಗಳ ನೆಲೆಬೀಡು ಆಗಿರುವ ಸಹ್ಯಾದ್ರಿ ತಪ್ಪಲಿನ ಸಿಹಿಮೊಗೆಯ ಜನತೆಗೆ ಅಪಾರ ನೋವುಂಟು ಮಾಡಿದೆ.ರಾಜ್ಯಗಳ ಮುಂದೆ ಕನ್ನಡದ ಜನತೆ ತಲೆಯೆತ್ತದಂತೆ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ತಿಳಿಸುತ್ತೇವೆ.

ರಾಷ್ಟ್ರಕವಿ ಮತ್ತು ನಾಡಗೀತೆಯನ್ನು ಅವಮಾನ ಮಾಡಿ ಮಾಡುವುದು ಜನದ್ರೋಹಿ ಮತ್ತು ಅಪ್ಪಟ ಸಮಾಜದ್ರೋಹಿ ಕೃತ್ಯವಾಗಿದೆ.ಆದ್ದರಿಂದ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ತಕ್ಷಣ ಬಂಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಆಗ್ರಹಿಸುತ್ತದೆ.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾ ಅಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ ಮಹಿಳಾ ನಗರ ಅಧ್ಯಕ್ಷರಾದ ಕವಿತಾ ಹಾಗೂ ಜಿಲ್ಲಾ ಖಜಾಂಚಿ ಆದ ಗಣೇಶ್ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…