ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ಪ್ರತಿಷ್ಠಿತ ಶ್ರೀ ವಜ್ರೇಶ್ವರಿ ಕನ್ನಡ ಯುವಕರ ಸಂಘದ ನೂತನ ಕಟ್ಟಡದ ಮೊದಲ ಅಂತಸ್ತಿನ ಸಭಾಭವನ ಕಾಮಗಾರಿಯ ಶಂಕುಸ್ಥಾಪನೆಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ನಗರದ ಶಾಸಕ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ರಾಹುಲ್ ಬಿದರೆ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್, ಪಾಲಿಕೆ ಸದಸ್ಯರಾದ ಸೆಲ್ವಂ, ಮೂರ್ತಿ ಹಾಗೂ ಸಂಘದ ಅಧ್ಯಕ್ಷ ಸೋಮೇಶ್, ಗೌರವ ಅಧ್ಯಕ್ಷ ಶ್ರೀನಿವಾಸ್ ವಿನ್ಯಾಸ್, ಪದಾಧಿಕಾರಿಗಳಾದ ದೇವರಾಜ್, ಸಿ ದಾನೇಶ್,  ಪುರುಷೋತ್ತಮ್,  ರಾಜೇಶ್ ಮಂದಾರ, ಮಂಜಪ್ಪ , ರಘುನಾಥ್, ಮುಖಂಡರಾದ ಕೆ. ರಂಗನಾಥ್, ಸಿ. ರವಿ, ವಿ. ಗೋಪಿಆಚಾರಿ, ಹೇಮರಾಜ್, ಕೇಶವಮೂರ್ತಿ, ಶಿವಕುಮಾರ್, ನಾಗೇಶ್, ಸಂಘದ ಸದಸ್ಯರು ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಯೋಗೀಶ್ .ಉಡುಪ, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಜಿ. ಕಿರಣ್ ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…