ಶಿವಮೊಗ್ಗ: ಬದುಕು ಸಾರ್ಥಕವಾಗಬೇಕಾದರೆ ನಮ್ಮನ್ನು ನಾವು ಅರಿತುಕೊಳ್ಳಬೇಕು. ಬದುಕಿನಲ್ಲಿ ಅರ್ಥ ಬರಬೇಕಾದರೆ ದುರಾಸೆ, ವ್ಯಾಮೋಹ ಬಿಡಬೇಕು. ಜೀವನದ ಮಹತ್ವ ತಿಳಿದುಕೊಳ್ಳಬೇಕು ಎಂದು ಗೋಣೀಬೀಡಿನ ಶೀಲಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ವಿನೋಬನಗರದ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಉಚಿತ ಯೋಗ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. ನಾವು ಭೂಮಿಗೆ ಬರುವಾಗ ಏನು ತರುವುದಿಲ್ಲ, ಹೋಗುವಾಗಲೂ ಏನು ತೆಗೆದುಕೊಂಡು ಹೋಗುವುದಿಲ್ಲ. ಒಳ್ಳೆಯ ಸತ್ಕಾರ್ಯಗಳನ್ನು ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಮನುಷ್ಯನ ಜೀವನಕ್ಕೆ ಬೆಲ ಕಟ್ಟಲಾಗದು, ಇಂತಹ ಮನುಷ್ಯನ ಜೀವನವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕಾದರೆ, ನಮ್ಮ ಇಡೀ ಬದುಕನ್ನು ಸರ್ವ ಸುಂದರವಾಗಿ ಮಾಡಿಕೊಳ್ಳಬೇಕಾದರೆ ಯೋಗ ಅಭ್ಯಾಸದಿಂದ ಮಾತ್ರ ಸಾಧ್ಯ. ಯೋಗವನ್ನು ಹಿಂದೆ ಋಷಿಮುನಿಗಳು, ಯೋಗಿಗಳು ಮಾತ್ರ ಯೋಗ ಮಾಡುತ್ತಿದ್ದರು. ಇಂದು ಯೋಗ ಪ್ರಪಂಚದ ಎಲ್ಲರಿಗೂ ಅಗತ್ಯವಾಗಿ ಬೇಕಾಗಿದೆ. ಯಾವುದೇ ಔಷಧಿಯಿಂದ ಗುಣಪಡಿಸಲಾಗದ ಕಾಯಿಲೆಯನ್ನು ಯೋಗದಿಂದ ಗುಣಪಡಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಇಂದಿನ ಬದುಕಿನ ಜಂಜಾಟದಲ್ಲಿ ಸ್ವಲ್ಪವಾದರೂ ನೆಮ್ಮದಿ, ಶಾಂತಿ ಹಾಗೂ ಸುಸ್ಥಿರ ಆರೋಗ್ಯ ಸಿಗಬೇಕಾದರೆ ಯೋಗ ಮಾಡಬೇಕು. ಯೋಗ ಇಂದಿಗೂ ಎಂದೆAದಿಗೂ ಸತ್ಯ. ಶಿವಗಂಗಾ ಯೋಗಕೇಂದ್ರವು ಶಿವಮೊಗ್ಗ ನಗರದಲ್ಲಿ ಸಂಜೀವಿನಿಯಾಗಿ ಜನರ ಸೇವೆ ಸಲ್ಲಿಸುತ್ತಿದೆ. ನಗರದ ಸಾರ್ವಜನಿಕರು ಪುಣ್ಯವಂತರು. ಯೋಗಕೇಂದ್ರದ ಸೇವೆ ಪಡೆಯುತ್ತಿದ್ದೀರಿ ಎಂದು ಹೇಳಿದರು.
ಹಿರಿಯ ಪತ್ರಕರ್ತ ಚಂದ್ರಕಾAತ್ ಮಾತನಾಡಿ, ಇವತ್ತು ಶಿವಮೊಗ್ಗದಲ್ಲಿ 28ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಯೋಗ ಅಭ್ಯಾಸ ಉಚಿತವಾಗಿ ನಡೆಯುತ್ತಿದೆ. ಯೋಗ, ಧ್ಯಾನ, ಪ್ರಾಣಾಯಾಮ ಕಲಿಸುವ ಮೂಲಕ ಸಾವಿರಾರು ಜನರ ಆರೋಗ್ಯ ಉತ್ತಮವಾಗಿರುವಂತೆ ಯೋಗ ಕಲಿಕೆ ಸಹಕಾರಿಯಾಗಿದೆ. ಯೋಗಕೇಂದ್ರದ ಸೇವೆ ಪರಿಗಣಿಸಿ ಸರ್ಕಾರವು ಡಾಕ್ಟರೇಟ್ ಪದವಿಯನ್ನು ಸಿ.ವಿ.ರುದ್ರಾರಾಧ್ಯ ಅವರಿಗೆ ನೀಡಬೇಕು ಎಂದು ತಿಳಿಸಿದರು.

ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿದರು. ಯೋಗಾಚಾರ್ಯ ಸಿ.ವಿ.ರುದ್ರರಾಧ್ಯ ಯೋಗ ಕುರಿತು ಮಾಹಿತಿ ನೀಡಿದರು. ಯೋಗಕೇಂದ್ರದ ವಿಜಯ ಬಾಯರ್, ಕಾಟನ್ ಜಗದೀಶ್, ಜಿ.ವಿಜಯ್‌ಕುಮಾರ್, ಡಾ. ನಾಗರಾಜ್ ಪರಿಸರ, ಓಂಕಾರ್, ಮಂಜುನಾಥ್, ಚಂದ್ರಶೇಖರಯ್ಯ ಮತ್ತಿತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…