
ವಿಜಯ ಕರ್ನಾಟಕ ಹಾಗೂ ಟೈಮ್ಸ್ ಗ್ರೂಪ್ ರವರು ನಡೆಸಿರುವ ಆಚೀವರ್ ಆಫ್ ಕರ್ನಾಟಕ ಪ್ರಶಸ್ತಿಗೆ ಶಿವಮೊಗ್ಗದ ಸರ್ಜಿ ಹಾಸ್ಪಿಟಲ್ ಮಾಲೀಕರಾದ ಡಾ. ಧನಂಜಯ್ ಸರ್ಜಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಗರದ ಜೆ ಸಿ ಐ ಶಿವಮೊಗ್ಗ ಮಲ್ನಾಡ್ ಸಂಸ್ಥೆಯು ಡಾ ಧನಂಜಯ ಸಾರ್ಜಿ ರವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರದೀಪ್ ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.