ಶಿವಮೊಗ್ಗ: ಕೊಯಮತ್ತೂರ್‌ನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಪ್ರಾಂತೀಯ ಸಭೆಯಲ್ಲಿ ದಿ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್ (ಐ.ಐ.ಎಫ್) ಸದರನ್ ರೀಜನ್‌ನ 2022-23ನೇ ಸಾಲಿನ ಗೌರವ ಕಾರ್ಯದರ್ಶಿಯಾಗಿ ವಿಜಯ್ ಟೆಕ್ಕೋಕ್ರಾಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೆಶಕ ಡಿ.ಜಿ.ಬೆನಕಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ.

ಐ.ಐ.ಎಫ್ ಸದರನ್ ರೀಜನ್ ಅತ್ಯಂತ ಸ್ಪಂದನಾಶೀಲ ಮತ್ತು ಕ್ರಿಯಾಶೀಲ ರೀಜನ್ ಆಗಿದ್ದು, ಫೌಂಡ್ರಿ
ಉದ್ಯಮದ ತರಬೇತಿ ಹಾಗೂ ಬೆಳವಣಿಗೆಗೆ ಸಹಕರಿಸುತ್ತಿದೆ. ಈ ರೀಜನ್ ಕರ್ನಾಟಕ, ತಮಿಳುನಾಡು, ಆಂಧ್ರಪದೇಶ ಕೇರಳ ಹಾಗೂ ತೆಲಂಗಾಣ ಸೇರಿದಂತೆ ಒಟ್ಟು 1300 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.
ಐ.ಐ.ಎಫ್-ಸದರನ್ ರೀಜನ್‌ನ ಪ್ರಧಾನ ಕಚೇರಿ ಚೆನ್ನೆöÊನಲ್ಲಿದೆ. ದಕ್ಷಿಣ ಭಾರತದಲ್ಲಿ 8 ಚಾಪ್ಟರ್‌ಗಳನ್ನು
ಹೊಂದಿದೆ. ಇದರಲ್ಲಿ ಕರ್ನಾಟಕದ ಬೆಂಗಳೂರು, ಬೆಳಗಾವಿ ಮತ್ತು ಶಿವಮೊಗ್ಗದ ಚಾಪ್ಟರ್‌ಗಳು
ಒಳಗೊಂಡಿವೆ.

“ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡಿಮೆನ್” ನಲ್ಲಿನ ಮಹೋನ್ನತ ಪದವಿ ಸ್ವೀಕಾರಕ್ಕಾಗಿ
ಡಿ.ಜಿ.ಬೆನಕಪ್ಪ ಅವರಿಗೆ ಐ.ಐ.ಎಫ್-ಶಿವಮೊಗ್ಗ ಚಾಪ್ಟರ್, ಮಾಚೇನಹಳ್ಳಿ ಕೈಗಾರಿಕೆಗಳ ಸಂಘ,
ಸಾಗರ ರಸ್ತೆ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ
ಮತ್ತು ಕೈಗಾರಿಕೆಗಳ ಸಂಘದ ವತಿಯಿಂದ ಅಭಿನಂದನೆ ತಿಳಿಸಿವೆ.

2024-25 ನೇ ಸಾಲಿಗೆ ಐ.ಐ.ಎಫ್ ಸದರನ್ ರೀಜನ್‌ನ (ದಕ್ಷಿಣ ಪ್ರಾಂತ್ಯದ) ಅಧ್ಯಕ್ಷರಾಗಿ ಡಿ.ಜಿ.ಬೆನಕಪ್ಪ ಅವರು ಅಧಿಕಾರವನ್ನು ಶಿವಮೊಗ್ಗದಲ್ಲಿ ಸ್ವೀಕರಿಸಲಿದ್ದಾರೆ.
ವಾರ್ಷಿಕ ಪ್ರಾಂತೀಯ ಸಭೆಯಲ್ಲಿ ಕಾರ್ಯಕ್ರಮದಲ್ಲಿ ಐ.ಐ.ಎಫ್‌ನ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿರುವ ಚಂದ್ರಶೇಖರ್.ಡಿ.ಎಸ್, ಐ.ಐ.ಎಫ್ ಶಿವಮೊಗ್ಗ ಚಾಪ್ಟರ್ ಅಧ್ಯಕ್ಷ ಪರಮಶೇಖರ್.ಟಿ.ಎನ್, ಉಪಾಧ್ಯಕ್ಷ ಅಂಕಿತ್ ದಿವೇಕರ್, ಕಾರ್ಯದರ್ಶಿ ರಾಘವೇಂದ್ರ ಎಂ ವಿ, ಮತ್ತು ಸದಸ್ಯ ಸೋಮಶೇಖರ್.ಪಿ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…