ಶಿವಮೊಗ್ಗ ಜಿಲ್ಲಾಡಳಿತ ಮತ್ತು ಕರ್ನಾಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು ವತಿಯಿಂದ 110 ಸ್ವಯಂ ಸೇವಕರಿಗೆ ಆಪತ್ತು ಮಿತ್ರ ಯೋಜನೆ ಅಡಿಯಲ್ಲಿ ಸೇಂಟ್ ಜೋಸೆಫ್ ಅಕ್ಷರ ದಾಮ ಆವರಣದಲ್ಲಿರುವ ಈಜು ಕೊಳದಲ್ಲಿ ವಿಶ್ವ ಮಾನವ ಸ್ಪೋರ್ಟ್ಸ್ ರವರ ಜೊತೆಗೂಡಿ ಈಜು ತರಬೇತಿ, ಹಾಗೂ ನೀರಿನಲ್ಲಿ ಮುಳುಗಿದಾಗ, ರಕ್ಷಣಾ ಸಲಕರಣೆಗಳಾದ ಲೈಫ್ ಜಾಕ್ಕೇಟ್, ಲೈಫ್ಬಾಯ್, ಗಳನ್ನು ಬಳಸುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಲಾಯಿತು.
ಈ ಕಾರ್ಯಾಗಾರದಲ್ಲಿ, ತಹಶೀಲ್ದಾರ್ ನಾಗರಾಜ್ ಶಿವಮೊಗ್ಗ, ಜಿಲ್ಲಾ ಅಗ್ನಿ ಶಾಮಕ ಜಿಲ್ಲಾಅಧಿಕಾರಿ ಶ್ರೀ ಬಿ. ಆರ್ ಅಶೋಕ್ ಕುಮಾರ್ ರವರು, ಹಾಗೂ ಶ್ರೀ ಕೆ. ಎನ್. ಪ್ರವೀಣ್ ಅಗ್ನಿಶಾಮಕ ಅಧಿಕಾರಿ ಶಿವಮೊಗ್ಗ ಅಗ್ನಿಶಾಮಕ ಠಾಣೆ, ರವರು ಶ್ರೀ ಎನ್. ವಸಂತ ಕುಮಾರ್ ಅಗ್ನಿಶಾಮಕ ಅಧಿಕಾರಿ ಭದ್ರಾವತಿ ಅಗ್ನಿಶಾಮಕ ಠಾಣೆ ರವರು ಮತ್ತು ವಿಶ್ವ ಮಾನವ ಸ್ಪೋರ್ಟ್ಸ್ ಮುಖ್ಯಸ್ಥರಾದ ಶ್ರೀ ಸುರೇಶ್ ಅರಸಾಳು ಹಾಗೂ ಸೇಂಟ್ ಜೋಸೆಫ್ ಚರ್ಚ್ ನ
ಫಾದರ್ ಸಾಜನ್ ರವರು ಭಾಗಿಯಾಗಿದ್ದರು.