ಶಿವಮೊಗ್ಗ: ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಉತ್ತರ ವಲಯ ಸಮಿತಿ ಶಿವಮೊಗ್ಗ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಯ್ಯಲಾಲ್ ಹತ್ಯೆ ನೋವು ಉಂಟು ಮಾಡಿದ್ದು, ಪ್ರಸ್ತುತ ಟೈಲರ್ಗಳು ಅಸಂಘಟಿತ ವಲಯದ ಭಾಗವಾಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಟೈಲರ್ಗಳು ರಾಜ್ಯದಲ್ಲಿ ವೃತ್ತಿಯನ್ನು ಮಾಡುತ್ತಿದ್ದಾರೆ ಮತ್ತು ಸರ್ಕಾರದ ವತಿಯಿಂದ ಯಾವುದೆ ಭದ್ರತೆ ಹಾಗೂ ಸೌಕರ್ಯವು ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ಕಾರ ಟೈಲರ್ಗಳಿಗೆ ಆದಷ್ಟು ಬೇಗ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಿ, ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು ಹಾಗೂ ಉದಯಪುರದಲ್ಲಿ ಹತ್ಯೆಗೊಂಡ ಟೈಲರ್ ಕನ್ನಯ್ಯ ಲಾಲ್ ಇವರ ಕುಟುಂಬವು ನ್ಯಾಯೋಜಿತ ಪರಿಹಾರ ಒದಗಿಸಬೇಕು ಹಾಗೂ ಈ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಉತ್ತರ ವಲಯ ಸಮಿತಿ ಅಧ್ಯಕ್ಷ ಜೆ.ಡಿ.ಗಣೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಖಜಾಂಚಿ ಆರ್.ಮಂಜುನಾಥ್, ಗೋಪಾಲ್ ಶೆಟ್ಟಿ ,ನಾಗರಾಜ್, ಚಂದ್ರಕಲಾ, ಅನಿತಾ, ನೂರ್ಮಹಮ್ಮದ್, ವಿನಯ್, ರೂಪೇಶ್, ವಸಂತ್, ನಾಗರಾಜ್, ಚೇತನ್ ಇನ್ನಿತರರು ಭಾಗವಹಿಸಿದ್ದರು.