ಸ್ಟಾರ್ ಅಫ್ ಶಿವಮೊಗ್ಗ ಸಂಪಾದಕರ ಜೊತೆಗೂಡಿ ಅಯುಕ್ತರಿಗೆ ಪ್ರಶ್ನೆ.? ನ್ಯಾಯಕೊಡಿ ಎಂದು ಮನವಿ ಮಾಡಲಾಯಿತು. ತಕ್ಷಣವೇ ಸಮಸ್ತ ನೈಜ್ಯ ಅರ್ಥಿಕದಲ್ಲಿ ಕೆಂಗೆಟ್ಟ ಪತ್ರಕರ್ತರಿಗೆ ಲ್ಯಾಪ ಟಾಫ್ ಕೊಡಿ ಎಂದು ಪಾಲಿಕೆ ಆಯುಕ್ತರನ್ನು ಒತ್ತಾಯಿಸಲಾಯಿತು. ನಗರದಲ್ಲಿ ಹಲವಾರು ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ ದಿನಪತ್ರಿಕೆ ವಾರಪತ್ರಿಕೆ ಮಾಸಿಕ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ಕಾರ್ಯನಿರ್ವಹಿಸುತ್ತದೆ. ಕರೋನ ಲಾಕ ಡೌನ್ ನಲ್ಲಿ ಕೂಡ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ತಮ್ಮ ವೃತ್ತಿ ಧರ್ಮಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಮಹಾನಗರ ಪಾಲಿಕೆಯಿಂದ ಇಂಥ ಪತ್ರಕರ್ತರಿಗೆ ಲ್ಯಾಪ್ ಟಾಪ್ ಕೊಡುವ ವಿಷಯ ತುಂಬಾ ಪ್ರಶಂಸನೀಯ. ಎಷ್ಟೋ ಯೋಜನೆಗಳಲ್ಲಿ ಬಲಿಷ್ಠರ ಕಪಿಮುಷ್ಟಿಯಿಂದಾಗಿ ಯೋಜನೆಗಳು ಹಳ್ಳ ಹಿಡಿಯುತ್ತವೆ. ಅದಕ್ಕೊಂದು ಉದಾಹರಣೆ ಈ ಪತ್ರಕರ್ತರ ಲ್ಯಾಪ್ಟಾಪ್ ವಿತರಣೆ. ಆರ್ಥಿಕವಾಗಿ ಬಲಿಷ್ಠರಾಗಿರುವ ಹಾಗೂ ಕೆಲವು ರಾಜಕೀಯ ವ್ಯಕ್ತಿಗಳಿಗೆ ಹತ್ತಿರವಾಗಿರುವ ಪತ್ರಕರ್ತರಿಗೆ ಒಂದನೇ ಅಲೆಯಲ್ಲೂ ಹಾಗೂ ಎರಡೇ ಅಲೆಯಲ್ಲಿ ಅವರಿಗೆ ಲ್ಯಾಪ್ ಟಾಪ್ ನೀಡಲಾಗುವುದೆಂದು ಗಾಳಿ ಸುದ್ದಿ ಇದೆ. ಇಂಥ ಸಬಲ ಪತ್ರಕರ್ತರಿಗೆ ಸಂಕಷ್ಟದಲ್ಲಿರುವ ಸಂಪಾದಕರ ಕಷ್ಟ ಅರ್ಥವಾಗುವುದಿಲ್ಲ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಿಂದ ನೀಡುತ್ತಿರುವ ಈ ಲ್ಯಾಪ್ ಟಾಪ್ ಗಳು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವ ಹಾಗೂ ನಿಜವಾಗಿಯೂ ಅವಶ್ಯಕತೆ ಇರುವ ಪತ್ರಕರ್ತರಿಗೆ ತಲುಪಿದರೆ ಮಾತ್ರ ಈ ಯೋಜನೆ ಸದ್ಬಳಕೆಯಾದಂತೆ. ನಗರದಲ್ಲಿರುವ ಎಷ್ಟೋ RNI ಹೊಂದಿರುವ ವಾರಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳ ಸಂಪಾದಕರನ್ನು ಕಡೆಗಣಿಸಿರುವುದು ಎಷ್ಟು ಸರಿ? RNI ಪಡೆದ ಮೇಲೂ ಸಂಪಾದಕರನ್ನು ವಿಂಗಡಿಸುವುದು ಎಷ್ಟು ಸರಿ ? ಹಾಗಿದ್ದರೆ ವಾರಪತ್ರಿಕೆ ಮಾಸಪತ್ರಿಕೆಗಳ ಸಂಪಾದಕರು , ಸಂಪಾದಕರಲ್ಲವೇ ? ಸರ್ಕಾರದ ಮಾಧ್ಯಮ ಪಟ್ಟಿ RNI ಅನ್ನು ಮೀರಿದುದೆ?

ನಿಜವಾದ ಎಲ್ಲಾ ಪತ್ರಕರ್ತರಿಗೂ ಸವಲತ್ತುಗಳು ಸಿಗಲಿ ಅವರು ಇನ್ನೂ ಸಮಾಜದ ಸಮಸ್ಯೆಗಳನ್ನು ಪ್ರಚುರಪಡಿಸಿ ಆಡಳಿತ ಯಂತ್ರವನ್ನು ತಿದ್ದುವ ಕೆಲಸ ಮಾಡಲಿ ಎಂದು ಆಶಿಸುತ್ತಾ
ಟೀಮ್ ಪ್ರಜಾಶಕ್ತಿ