ಶಿವಮೊಗ್ಗ: ಸರ್ಕಾರದ ಭರವಸೆಯನ್ನು ನಂಬಿಕೊಂಡು ತಮ್ಮ ಕೆಲಸ ಖಾಯಂ ಗೊಳ್ಳುತ್ತದೆ ಎಂದು ನಂಬಿಕೊಂಡ ಮಹಾನಗರ ಪಾಲಿಕೆಯ ಸ್ವಚ್ಚತಾ ಶ್ರಮಿಕರು ಇದುವರೆಗೂ ಕೆಲಸ ಮಾಡಿಕೊಂಡು ಬಂದಿದ್ದರು.ಆದರೆ ಸರ್ಕಾರ ನೀಡಿದ ಭರವಸೆ ಸುಳ್ಳು ಎಂದು ತಿಳಿಯುತ್ತಿದ್ದಂತೆ, ಕಳೆದ 3 ದಿನಗಳಿಂದ ಸತತವಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ.

ಈ ಹೋರಾಟದಲ್ಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರು, ವಾಹನ ಚಾಲಕರು ಸೇರಿದಂತೆ ನಾನೂರಕ್ಕೂ ಹೆಚ್ಚು ಶ್ರಮಜೀವಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹೋರಾಟದಲ್ಲಿ ಶ್ರಮಿಕ ರೊಂದಿಗೆ ಕೈಜೋಡಿಸಿದ ಏಳುಮಲೈ ಕೇಬಲ್ ಬಾಬು ನಿಮ್ಮ ಈ ನ್ಯಾಯಯುತ ಹೋರಾಟ ದಲ್ಲಿ ಎಎಪಿ ಪಕ್ಷ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಲ್ಲಿದೆ ಎನ್ನುವ ಭರವಸೆಯನ್ನು ಕೊಟ್ಟರು, ಸಾವು ಹಿಂದೆ ಪಾಲಿಕೆಯ ಮೇಯರ್ ಆದ ಸಂದರ್ಭದಲ್ಲಿ ಪೌರ ಕಾರ್ಮಿಕರ ಸಮಸ್ಯೆಯನ್ನು ಅರಿತು ಅವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಗೆಹರಿಸುವ ಪ್ರಯತ್ನವನ್ನು ಮಾಡಿದ್ದೆ.

ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಅಭಿವೃದ್ಧಿಯ ನೆಪದಲ್ಲಿ ಹಾಳುಗೆಡವಿದೆಯೇ ಹೊರತು ಬೇರೇನೂ ಮಾಡಿಲ್ಲ, ಇನ್ನೂ ಪೌರಕಾರ್ಮಿಕರ ವಿಚಾರಕ್ಕೆ ಬಂದರೆ ಅವರನ್ನು ಕೇವಲ ಗುಲಾಮರಂತೆ ನೋಡಿ ಕಂಡಿದೆಯೇ ಹೊರತು ಶ್ರಮಜೀವಿಗಳು ಎಂದು ಇಂದಿಗೂ ಪರಿಗಣಿಸಿಲ್ಲ ಎಂದು ಹೇಳಿದರು.

ಇನ್ನು ಇದೇ ಸಭೆಯಲ್ಲಿ ಪೌರ ಕಾರ್ಮಿಕರ ಮನೋಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸಿದ ಏಳುಮಲೈ ಕೇಬಲ್ ಬಾಬು ಪ್ರತಿಭಟನಾ ನಿರತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ ಹತ್ತು ಸಾವಿರ ಧನಸಹಾಯವನ್ನು ನೀಡಿದ್ದು, ಪೌರಕಾರ್ಮಿಕರ ಮುಖಂಡರ ಪೆಂಚಾಲಯ್ಯ ಇವರ ಕೈಗೆ ಎಲ್ಲರ ಸಮ್ಮುಖದಲ್ಲಿ ನೀಡಿದರು.

ಪ್ರತಿಭಟನೆಯಲ್ಲಿ ಎಎಪಿ ಪಕ್ಷದ ಪರವಾಗಿ ಏಳುಮಲೈ ಕೇಬಲ್ ಬಾಬು ಇವರೊಂದಿದೆ.ಕಿರಣ್.ಕೆ, ಲಕ್ಷ್ಮೀಶ, ವಿಜಯ್ ಆಲ್ಬರ್ಟ್ , ಮುರುಗನ್ ,ಮಾರ್ಕ್ ಹಾಗೂ ಶ್ರೀನಿವಾಸ್ ಸೇರಿದಂತೆ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…