ಶಿವಮೊಗ್ಗ: ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ರೋಟರಿ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷ ಮಂಜುನಾಥ ಕದಂ ಹೇಳಿದರು.
ಶಿವಮೊಗ್ಗ ನಗರದ ಕಂಟ್ರಿ ಕ್ಲಬ್ ಸಭಾಂಗಣದಲ್ಲಿ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಾ ಪರಂಪರೆ ಉಳಿಸಿದರೆ ನಮ್ಮ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ. ಕಲೆ ಸಾಧಕರ ಸ್ವತ್ತು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯು ಕಲೆಗಳ ತವರೂರು. ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಲಾಕ್ಷೇತ್ರಗಳ ಸಾಧಕರು ಇದ್ದು, ರಾಜ್ಯ, ರಾಷ್ಟç ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಎಲ್ಲ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೇರೆಪಿಸಬೇಕು ಎಂದರು.
ಆಕಾಶವಾಣಿ ಕಲಾವಿದರಾದ ವಸಂತ ಮಾದವ ಹಾಗೂ ಮಂಜುಳಾ ಧೃವರಾಜ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಾವಿದ ಜಿ.ವಿಜಯ್‌ಕುಮಾರ್ ಮಾತನಾಡಿ, ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಸುಗಮ ಸಂಗೀತ, ಭಕ್ತಿಗೀತೆ, ಹಳೇ ಚಿತ್ರಗೀತೆಗಳು ಹಾಗೂ ವಿವಿಧ ಗೀತೆಗಳ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಖ್ಯಾತಿ ವಸಂತ ಮಾಧವ ಹಾಗೂ ಮಂಜುಳಾ ಧೃವರಾಜ್ ಅವರದ್ದಾಗಿದೆ. ರೋಟರಿ ಸಂಸ್ಥೆಯು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಮಂಜುನಾಥ ಕದಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳಿಗೆ ಸಹಕರಿಸಿದ ಎಲ್ಲ ರೋಟರಿ ಹಾಗೂ ಇನ್ನರ್‌ವ್ಹೀಲ್ ಸದಸ್ಯರಿಗೂ ಗೌರವಿಸಲಾಯಿತು.
ವಸಂತ ಮಾಧವ ಹಾಗೂ ಮಂಜುಳಾ ಅವರು ಹಳೇ ಚಿತ್ರಗೀತೆಗಳ ಗಾಯನ ಎಲ್ಲರ ಮೆಚ್ಚುಗೆ ಗಳಿಸಿತು.
ವಲಯ 10ರ ಮಾಜಿ ರಾಜ್ಯಪಾಲ ಯು.ರವೀಂದ್ರನಾಥನ ಐತಾಳ್, ವಲಯ ಸೇನಾನಿ ಕೆ.ಪಿ.ಶೆಟ್ಟಿ, ಎ.ಎಸ್.ಗುರುರಾಜ್, ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ, ಕಾರ್ಯದರ್ಶಿ ಕುಮಾರಸ್ವಾಮಿ, ಸೆಂಟ್ರಲ್ ಕ್ಲಬ್ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ಕೆ.ಜಿ.ರಾಮಚಂದ್ರರಾವ್, ಕೃಪಾ ಕದಂ ಹಾಗೂ ಸದಸ್ಯರು ಉಪಸ್ಥಿತರಿದ್ದರು.