ಶಿವಮೊಗ್ಗ ನಗರದ ಪ್ರಸಿದ್ದ ಹೋಟೆಲ್ ಗಳಲ್ಲಿ ಒಂದಾದ ಹೋಟೆಲ್ ಶುಭಂ ಮತ್ತೊಮ್ಮೆ ಸಾರ್ವಜನಿಕರ ಮೆಚ್ಚುವಂತ ಕೆಲಸ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 CHARLIE ಚಿತ್ರವು ವಿಶ್ವದ್ಯಂತ ಬಿಡುಗಡೆಯಾಗಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ನಗರದ ತಾಯಿ ಮನೆ ಆಶ್ರಮದ 26 ಮಕ್ಕಳಿಗೆ ಹೋಟಲ್ ಶುಭಂ ಸಂಸ್ಥೆಯು ಮಕ್ಕಳಿಗೆ ಉಚಿತವಾಗಿ ಚಿತ್ರ ವೀಕ್ಷಿಸಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. 26 ಮಕ್ಕಳಿಗೆ ಚಿತ್ರದ ಪ್ರವೇಶ ದರವನ್ನು ಶುಭಂ ಸಂಸ್ಥೆ ನೀಡಿದೆ.ಚಿತ್ರವನ್ನು ನೋಡಿದ ಮಕ್ಕಳು ಶುಭಂ ಸಂಸ್ಥೆಗೆ ಧನ್ಯವಾದಗಳು ತಿಳಿಸಿದ್ದಾರೆ.

ಮುಂಚಿನಿಂದಲೂ ಈ ತರದ ಸಮಾಜಮುಖಿ ಕೆಲಸಗಳಲ್ಲಿ ಶುಭಂ ಸಂಸ್ಥೆಯು ಸಮಾಜದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮುಂದಿನ ದಿನದಲ್ಲಿ ಈ ಸಂಸ್ಥೆಯಿಂದ ಇನ್ನಷ್ಟು ಹೆಚ್ಚು ಸಮಾಜಮುಖಿ ಕೆಲಸಗಳು ಮಾಡಲಿ ಎಂದು ಆಶಿಸುತ್ತೇವೆ.

ಈ ಸಂದರ್ಭದಲ್ಲಿ ಹೋಟೆಲ್ ಶುಭಂ ಮಾಲಿಕರಾದ ಉದಯ ಶೆಟ್ಟಿ ಕಡಂಬ , ಚಂದ್ರಹಾಸ್ ಶೆಟ್ಟಿ , ಮಂಜುನಾಥ್ ಶೆಟ್ಟಿ , ಸದಾನಂದ ಶೆಟ್ಟಿ ಮತ್ತು ಹಿರಿಯ ಸಮಾಜ ಸೇವಕರಾದ ಗೋವಿಂದರಾಜು ಹಾಗೂ ಸಮಸ್ತ ಹೋಟೆಲ್ ಶುಭಂ ಬಳಗ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…