ಶಿವಮೊಗ್ಗ: ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಗಣನೀಯ ಸಾಧನೆ ಮಾಡುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದ್ದು, ನಾಯಕತ್ವ ಗುಣ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸಂಘ ಸಂಸ್ಥೆಗಳು ಸಹಕಾರಿ ಆಗುತ್ತಿವೆ ಎಂದು ಇನ್ನರ್‌ವ್ಹೀಲ್ ಜಿಲ್ಲಾ ಮಾಜಿ ಚರ‍್ಮನ್ ಸುಧಾ ಪ್ರಸಾದ್ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ೨೦೨೨-೨೩ನೇ ಸಾಲಿನ ಪದವಿ ಪ್ರಧಾನ ಸಮಾರಂಭದಲ್ಲಿ ಪ್ರತಿಷ್ಠಾಪನಾಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.

ಮಹಿಳೆಯರು ಅಂತರಾಷ್ಟಿçÃಯ ಸಂಸ್ಥೆ ಇನ್ನರ್‌ವ್ಹೀಲ್ ಕ್ಲಬ್‌ಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಪರಸ್ಪರ ಮುಖಾಮುಖಿಯಾಗುತ್ತದೆ. ಪ್ರೇರಣೆಯಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಹಿಳೆಯರು ಎಲ್ಲರೂ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ತಮ್ಮ ಇಷ್ಟದ ಕ್ಷೇತ್ರಗಳಲ್ಲಿ ಉನ್ನತ ಹಂತಕ್ಕೆ ತಲುಪಬೇಕು ಎಂದು ತಿಳಿಸಿದರು.
ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್ ಕಳೆದ ವರ್ಷದ ಸಮಾಜಮುಖಿ ಕಾರ್ಯಕ್ರಮಗಳ ವಿವರಗಳನ್ನು ವಾಚಿಸಿದರು. ಜಯಂತಿ ವಾಲಿ ಕೃತಜ್ಞತಾ ಭಾಷಣದ ನಂತರ ನೂತನ ಅಧ್ಯಕ್ಷೆ ಮಧುರಾ ಮಹೇಶ್ ಅವರಿಗೆ, ನೂತನ ಕಾರ್ಯದರ್ಶಿ ಉಮಾ ವೆಂಕಟೇಶ್ ಅವರಿಗೆ ಪದವಿ ಹಸ್ತಾಂತರ ಮಾಡಲಾಯಿತು.
ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ನೂತನ ಅಧ್ಯಕ್ಷೆ ಮಧುರಾ ಮಹೇಶ್ ಮಾತನಾಡಿ, ಪ್ರಸ್ತಕ ಸಾಲಿನ ಕಾರ್ಯಯೋಜನೆ ಹಾಗೂ ಸೇವಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದರು. ನೂತನ ಕಾರ್ಯಕಾರಿ ಮಂಡಳಿಯನ್ನು ಘೋಷಿಸಲಾಯಿತು.

ಜಿಲ್ಲಾ ಖಜಾಂಚಿ ಶಬರಿ ಕಡಿದಾಳ್ ಇನ್ನರ್‌ವ್ಹೀಲ್ ಸಂಸ್ಥೆ ನೂರು ವರ್ಷ ನಡೆದುಬಂದ ಹಾದಿ ಬಗ್ಗೆ ಮಾತನಾಡಿದರು. ರಾಜೇಶ್ವರಿ ಪ್ರತಾಪ್, ವಾಗ್ದೇವಿ ಬಸವರಾಜ್, ಶ್ವೇತಾ, ಆಶಾ ಶ್ರೀಕಾಂತ್, ವೀಣಾ ಹರ್ಷ, ವೇದಾ ನಾಗರಾಜ್, ನಿರ್ಮಲಾ ಮಹೇಂದ್ರ, ಶಿಲ್ಪಾ ಗೋಪಿನಾಥ್, ಮಮತಾ ಸುಧೀಂದ್ರ, ಪೂರ್ಣಿಮಾ ನರೇಂದ್ರ, ನಮಿತಾ ಸೂರ್ಯನಾರಾಯಣ, ಸುಮಾ ರವಿ, ಸುನಂದಾ ಜಗದೀಶ್, ವಿಜಯಾ ರಾಯ್ಕರ್, ಸಂಗೀತಾ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…