ತೆಲಂಗಾಣದಲ್ಲಿ ಜುಲೈ 8 ರಂದು ನೆಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ಸುಲೋಚನ.ಸಿ ರವರು 63ಕೆಜಿ ಮಾಸ್ಟರ್ 1 ವಿಭಾಗದಲ್ಲಿ 390 ಕೆಜಿ ಭಾರ ಎತ್ತಿ 2022 ಮಾಸ್ಟರ್ ಸ್ಟ್ರಾಂಗ್ ವುಮೆನ್ 2 ಬಿರಿದು ಪಡೆದಿದ್ದಾರೆ.

ಇವರು ನೆಹರು ಸ್ಟೇಡಿಯಂ ಜಿಮ್ ಮತ್ತು ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಜಿಮ್ ನಲ್ಲಿ ಅಭ್ಯಾಸ ಪಡೆಯುತ್ತಿದ್ದಾರೆ. ಇವರಿಗೆ ನಾಗರಾಜ ಕೆ.ಎಲ್ ರವರು ತರಬೇತಿ ನೀಡುತ್ತಿದ್ದಾರೆ.

ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಜಿಮ್ ಮಾಲೀಕರು ಶರವಣ ಎ.ಆರ್ ಮತ್ತು ತಂಡದವರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…