ಶಿವಮೊಗ್ಗ: ಬದುಕಿನಲ್ಲಿ ಅನೇಕ ಸವಾಲುಗಳು ಸಹಜವಾಗಿದ್ದು ನಾವು ನಡೆಸುವ ಜೀವನ ಮತ್ತೊಬ್ಬರಿಗೆ ಸ್ಫೂರ್ತಿದಾಯಕವಾಗಿರಲಿ ಎಂದು ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ ಅಭಿಪ್ರಾಯಪಟ್ಟರುಇಂದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಉತ್ತಾನ – 2022’.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಕರ್ಷಣೆ ಸಹಜವಾಗಿದ್ದರೂ ಶೈಕ್ಷಣಿಕ ಕಲಿಕೆಯ ಕುರಿತಾಗಿ ಉದಾಸೀನ ಮಾಡಬೇಡಿ. ನಮ್ಮ ಬೆಳವಣಿಗೆಯಲ್ಲಿ ಪಾಠ ಹೇಳಿಕೊಟ್ಟ ಗುರುಗಳ ಹಾಗೂ ಸ್ನೇಹಿತರ ಪಾತ್ರ ಮಹತ್ವದಾಗಿದ್ದು ಅವರಿಗೆ ಸದಾ ಕೃತಜ್ಞರಾಗಿರಬೇಕಿದೆ ಎಂದರು.ಬದುಕಿನಲ್ಲಿ ಕಾಲೆಳೆಯುವವರು, ಮೂದಲಿಸುವವರ ನಡುವೆಯೇ ಬದುಕಬೇಕಾಗಿದೆ. ಬೇರೆಯವರ ಸ್ಟೇಟಸ್ ನೋಡುವ ಬದಲು ನಮ್ಮ ಸ್ಟೇಟಸ್ ಹೆಚ್ಚಿಸಿಕೊಳ್ಳುವುದರೆಡೆಗೆ ಹೆಚ್ಚು ಗಮನವಹಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಉಪಾಧ್ಯಕ್ಷ ಸಿ.ಆರ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ, ಖಜಾಂಚಿ ಡಿ.ಜಿ. ರಮೇಶ್, ನಿರ್ದೇಶಕರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ. ಶಿವಕುಮಾರ್, ಅಜೀವ ಸದಸ್ಯರಾದ ಟಿ.ಎ. ರಾಮಪ್ರಸಾದ್, ಜೆ.ಎನ್.ಎನ್.ಸಿ.ಇ. ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ. ಮಂಜುನಾಥ. ಪಿ., ಎಂಬಿಎ ವಿಭಾಗದ ನಿರ್ದೇಶಕ ಡಾ.ಸಿ.ಶ್ರೀಕಾಂತ್, ಕಾರ್ಯಕ್ರಮ ಆಯೋಜನಾ ಸಮಿತಿಯ ಸಿ.ಕೆ.ಅನುರಾಧ, ಡಾ.ಸಂತೋಷ, ಬಿ.ಹೆಚ್. ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ಗಾಯನ, ನೃತ್ಯ, ರಸಪ್ರಶ್ನೆ, ಫ್ಯಾಷನ್ ಶೋ ಸೇರಿದಂತೆ ಮುಂತಾದ ಸಾಂಸ್ಕೃತಿಕ ಹಾಗೂ ನಿರ್ವಹಣಾ ಕೌಶಲ್ಯ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು.