ತೀರ್ಥಹಳ್ಳಿ ನ್ಯೂಸ್…

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲ ನಗರದ ಮನೆಯೊಂದರಲ್ಲಿ 5 ರಿಂದ 6 ಜನ ವ್ಯಕ್ತಿಗಳು ಅಕ್ರಮವಾಗಿ ಮಾದಕವಸ್ತು ಗಾಂಜಾವನ್ನು ಸಂಗ್ರಹಿಸಿಟ್ಟುಕೊಂಡು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಡಿಎಸ್.ಪಿ ತೀರ್ಥಹಳ್ಳಿ ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿ ನಂತರ ಆರೋಪಿತರಾದ 1)ಅಲೋಕ್ ಮಂಡಲ್, 34 ವರ್ಷ, ಟೆಂಗಬಾರ, ಗೊಂಗರಾಂಪುರ್, ಮಾಲ್ಡ, ಪಶ್ಚಿಮ ಬಂಗಾಳ, 2)ಶ್ರೀ ಬಾಷ್ ಸರ್ಕಾರ್, 20 ವರ್ಷ, ಪುರ್ಭ ಭೋಗ್ ದಾಬ್ರಿ, ಕೂಚ್ ಬಿಹಾರ್, ಪಶ್ಚಿಮ ಬಂಗಾಳ, 3)ಅಮ್ರಿತ್ ಮಂಡಲ್, 27 ವರ್ಷ, ಉತ್ತರ್ ಸಿಂಗಿಮರಿ, ಕೂಚ್ ಬಿಹಾರ್, ಪಶ್ಚಿಮ ಬಂಗಾಳ, 4)ಸಂಕರ್ ಬ್ಯಾಪಾರಿ, 27 ವರ್ಷ, ಖಲಿಷ, ಗೊಸಾನಿಮರಿ, ಪಶ್ಚಿಮ ಬಂಗಾಳ, 5) ಹರಧನ್ ಮಂಡಲ್, 32 ವರ್ಷ, ದಿನ್ ಹಟ್, ಕೂಚ್ ಬಿಹಾರ್, ಪಶ್ಚಿಮ ಬಂಗಾಳ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರು ಪಶ್ಚಿಮ ಬಂಗಾಳದಿಂದ ತಂದು ತೀರ್ಥಹಳ್ಳಿಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಅಂದಾಜು ಮೌಲ್ಯ 30,000/- ರೂ ಗಳ ಒಟ್ಟು 1 ಕೆಜಿ, 564 ಗ್ರಾಂ ತೂಕದ ಒಣ ಗಾಂಜಾ, 05 ಮೊಬೈಲ್ ಫೋನ್ ಗಳು, ರೂ 3,550/- ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0138/2022 ಕಲಂ 20 (b) (ii)(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ…