ಸಾಗರ ನ್ಯೂಸ್…

ಸಾಗರ: ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಶಿಶುವಿಹಾರದಿಂದಲೇ ಕಲಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ಶಾಲಾ ಸಂಸ್ಕೃತ ಯೋಜನೆಯ ಅಧ್ಯಕ್ಷರಾದ ಎಸ್.ಕೆ. ಶೇಷಾಚಲ ತಿಳಿಸಿದರು ಅವರು ಇಂದು ಸಾಗರದ ಸೇವಾ ಸಾಗರ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಕಲಿಕಾ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತ ಸಂಸ್ಕೃತ ಭಾಷೆ ಇದೊಂದು ವೈಜ್ಞಾನಿಕ ಭಾಷೆ, ಇದನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕಲಿಸಿದರೆ ಅವರಿಗೆ ಇತರೆ ಭಾಷೆಗಳನ್ನು ಅಧ್ಯಯನ ಮಾಡಲು ಸುಲಭವಾಗುತ್ತದೆ ಎಂದರು.

ಎಲ್ಲಾ ಭಾಷೆಗಳಿಗೂ ಆಶ್ರಯವಾದ ಸಂಸ್ಕೃತ ಇಂದು ಜಗತ್ತಿನ ಎಲ್ಲಾ ದೇಶಗಳಲ್ಲಿ ಜನಪ್ರಿಯಗಳಿಸುತ್ತಿದೆ, ಸಂಸ್ಕೃತ ಭಾರತೀಯ ಶ್ರಮದಿಂದ ಭಾರತದಲ್ಲಿ ಸಂಸ್ಕೃತ ಕಲಿಕೆಯ ವೇಗ ಈಗ ಹೆಚ್ಚಾಗಿದೆ ಎಂದು ತಿಳಿಸಿದರು.
ಈ ದೇಶದ ವೈಶಿಷ್ಟ್ಯ ಎರಡು ಅದೇ ಸಂಸ್ಕೃತಿ ಮತ್ತು ಸಂಸ್ಕೃತ, ಸಂಸ್ಕೃತ ಕಲಿಯಲು ಪ್ರಾರಂಬಿಸಿದರೆ ಸಂಸ್ಕೃತಿ ತಾನಾಗಿಯೇ ಬರುತ್ತದೆ ಎಂದು ಹೇಳಿದರು.

ರಾಜ್ಯ ಶಿಕ್ಷಣ ಪ್ರಮುಖರಾದ ಟಿ.ವಿ. ನರಸಿಂಹಮೂರ್ತಿ ಯವರು ಮಾತನಾಡುತ್ತ, ಸಂಸ್ಕೃತ ಕಲಿತ ಮಕ್ಕಳು ಈ ದೇಶದ ಉತ್ತಮ ಪ್ರಜೆಗಳಾಗುತ್ತಾರೆ, ಸಂಸ್ಕೃತದಲ್ಲಿರುವ ಸುಭಾಷಿತ, ಶ್ಲೋಕ, ಇವೆಲ್ಲವೂ ನಮ್ಮ ಜೀವನಕ್ಕೆ ದಾರಿ ದೀಪವಾಗಿರುತ್ತದೆ ಎಂದು ಮಕ್ಕಳಿಗೆ ತಿಳಿಸಿದರು.

ವೆದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಮುಖ್ಯ ಶಿಕ್ಷಕಿ ಮಂಜುಳ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…