ಶಿವಮೊಗ್ಗ: ಜುಲೈ 20: (ಕರ್ನಾಟಕ ವಾರ್ತೆ): ಕರ್ನಾಟಕ ಮರಾಠ ಅಭಿವೃದ್ದಿ ನಿಗಮವು 2022-23 ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಪ್ರವರ್ಗ 3ಬಿ ಅಡಿಯಲ್ಲಿ 2(ಎ) ರಿಂದ 2 (ಎಫ್) ರವರೆಗೆ ಬರುವ ಉಪಜಾತಿಗಳ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ (ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ) ಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಥಿಕ ಚಟುಮಟಿಕೆಗೆ ಅನುಸಾರ ಸೌಲಭ್ಯಗಳಿಗೆ ಸುವಿಧಾ www.suvidha.karnataka.gov.in, ಪೋರ್ಟಲ್‍ನ ಮೂಲಕ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಲ್ಲಿ ಮರಾಠ ಸಮುದಾಯದ ಯುವಜನತೆಯನ್ನು ಕೌಶಲ್ಯ ಅಭಿವೃದ್ಧಿ ಪಡಿಸಿ ಉದ್ಯೋಗಮುಖಿಗಳನ್ನಾಗಿಸಲು ಸರ್ಕಾರದ ತರಬೇತಿ ಸಂಸ್ಥೆಗಳಿಂದ ಅಲ್ಪಾವಧಿ ಕೋರ್ಸ್‍ಗಳ ಮೂಲಕ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಕೌಶಲ್ಯ ಕರ್ನಾಟಕ ಪೋರ್ಟಲ್ www.kaushhl.kar.com, ತಂತ್ರಾಂಶದ ಮೂಲಕ ಅರ್ಜಿಯನ್ನು ದಿ: 19/08/2022 ರೊಳಗಾಗಿ ಸಲ್ಲಿಸುವುದು.