ಶಿವಮೊಗ್ಗ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಏಪ್ರಿಲ್ 2022 ರಿಂದ ಜೂನ್ 2022 ರವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸಾಧಿಸಲಾದ ಪ್ರಗತಿಯ ವಿವರವನ್ನು ಇಲಾಖೆಯ ಸಹಾಯಕ ನಿಯಂತ್ರಕರು ಈ ಕೆಳಗಿನಂತೆ ನೀಡಿರುತ್ತಾರೆ.
ತೂಕ, ಅಳತೆ ಸಾಧನಗಳ ಸತ್ಯಾಪನೆ/ಮುದ್ರೆಯಿಂದ ಸಂಗ್ರಹಿಸಿದ ಶುಲ್ಕ ರೂ.40,56,305/- ಆಗಿರುತ್ತದೆ. ತಪಾಸಣೆ ಮಾಡಿರುವ ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳ ಸಂಖ್ಯೆ 546. ತಪ್ಪಿತಸ್ಥರ ಮೇಲೆ ಹೂಡಿರುವ ಮೊಕದ್ದಮೆಗಳ ಸಂಖ್ಯೆ 269 ಆಗಿರುತ್ತದೆ. ರಾಜಿ ಅಭಿಸಂದಾನ ಮಾಡಿರುವ ಮೊಕದ್ದಮೆಗಳ ಸಂಖ್ಯೆ 248. ಮೊಕದ್ದಮೆಗಳನ್ನು ರಾಜಿ ಅಭಿಸಂಧಾನ ಮಾಡಿ ವಿಧಿಸಿದ ದಂಡ ರೂ.5,65,800/- ಆಗಿರುತ್ತದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯ ನಿಯಂತ್ರಕ ಎಸ್.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.