ಶಿವಮೊಗ್ಗ : ಅವೈಜ್ಞಾನಿಕ, ಕಳಪೆ, ದೋಷಪೂರಿತ ನೀರಿನ ಪೂರೈಕೆ ಕಾಮಗಾರಿ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಇಂದು ನೀರು ಸರಬರಾಜು ಮಂಡಳಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದಲ್ಲಿ ಮನೆ ಮನೆಗಳಿಗೆ ಸಂಪರ್ಕ ನೀಡುತ್ತಿರುವ ವಿಚಾರವಾಗಿ ನಾವು ಹಲವಾರು ಬಾರಿ , ಹಲವ ವೇದಿಕೆಗಳಲ್ಲಿ , ಈ ಕಾಮಗಾರಿ ಅನೈಜ್ಞಾನಿಕ , ಕಳಪೆ , ದೋಷಪೂರಿತವಾಗಿದೆ ಮತ್ತು ಅವುಗಳ ಬದಲಾವಣೆಗಳಿಗೆ ಆಗ್ರಹಿಸಿದ್ದರೂ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದರು. ನಗರದ ಜನತೆಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸಬೇಕು. ಅವೈಜ್ಞಾನಿಕ , ಕಳಪೆ , ದೋಷರೂರಿತ ಕಾಮಗಾರಿ ಸಮಗ್ರ ಬದಲಾವಣೆಗೆ ಆಗ್ರಹಿಸಿದರು. ಕುಡಿಯುವ ನೀರಿನ ಮನೆ ಸಂಪರ್ಕಗಳಿಗೆ ಬಳಸುವ ಪೈಪುಗಳ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು. ಕಳೆದ 20-25 ವರ್ಷಗಳಿಂದಲೇ ಮನೆಗಳನ್ನು ಕಟ್ಟುವಾಗ ಜಿ . ಐ. ಪೈಪುಗಳನ್ನು ಬಳಸುವುದನ್ನು ನಿಲ್ಲಿಸಲಾಗಿದೆ.
ಅದಕ್ಕೆ ಕಾರಣ ನೀರಿನಲ್ಲಿರುವ ಕೆಲವು ಅಂಶಗಳಿಂದ ತುಕ್ಕು ಹಿಡಿಯುತ್ತವೆ , ಜಿ.ಐ ಪೈಪುಗಳನ್ನು ಗೃಹ ನೀರಿನ ಬಳಕೆಗೆ ಬಳಸದೇ ಇರುವ ವೈಜ್ಞಾನಿಕ ನಿರ್ಧಾರಗಳು ಇರುವಾಗ ನೀರು ಸರಬರಾಜು ಮಂಡಳಿ ಜಿಐ ಪೈಪುಗಳನ್ನು ಅಳವಡಿಸುತ್ತಿರುವುದು ಅವೈಜ್ಞಾನಿಕ ಮತ್ತು ಸಂಪೂರ್ಣ ತಪ್ಪು ನಿರ್ಧಾರ.ಆ ತುಕ್ಕುಗಳು ಕುಡಿಯುವ ನೀರಿನೊಂದಿಗೆ ಬೆರೆಯುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು. ತಕ್ಷಣದಿಂದ 24 * 7 ನೀರು ಸಂಪರ್ಕ ಕೊಡಲು ಬಾಕಿ ಇರುವ ಎಲ್ಲಾ ಮನೆಗಳಿಗೆ ಜಿ.ಐ ಪೈಪುಗಳನ್ನು ಬಳಸಬಾರದು, ಅದರ ಬದಲು ತುಕ್ಕು ಹಿಡಿಯದ ಪೈಪ್ ಗಳನ್ನು ಹಾಕಿಸಲು ತಾವು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಕೆವಿ ವಸಂತಕುಮಾರ್, ಡಾ.ಸತೀಶ್ ಕುಮಾರ್ ಶೆಟ್ಟಿ, ಜನಮೇಜಿರಾವ್, ಸೀತಾರಾಮ್ ಜನಾರ್ಧನ ಪೈ ಮೊದಲಾದವರಿದ್ದರು.