ಶಿವಮೊಗ್ಗ ಜುಲೈ 19 ರಂದು 40 ರಿಂದ 45 ವಯಸ್ಸಿನ ಅನಾಮಧೇಯ ಪುರುಷನ ಶವವು ನಗರದ ಗುಂಡಪ್ಪ ಶೆಡ್ ಹತ್ತಿರವಿರುವ ಮಾಸ್ತಾಂಬಿಕ ದೇವಸ್ಥಾನ ಹಿಂಭಾಗದ ತುಂಗಾನದಿಯ ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಕಂಡು ಬಂದಿದೆ.
ಮೃತ ವ್ಯಕ್ತಿಯು ಸುಮಾರು 5 ಅಡಿ 6 ಇಂಚು ಎತ್ತರವಿದ್ದು, ದುಂಡು ಮುಖ ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕೂದಲು ಇರುತ್ತದೆ. ಮೃತನ ಮೈಮೇಲೆ ಕಪ್ಪು ಗೆರೆ ಇರುವ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಕಲರಿನ ಪ್ಯಾಂಟ್ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.