ಶಿವಮೊಗ್ಗ ನಗರದ ಸೈನಿಕ ಪಾರ್ಕ್ ನಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆಯವರು ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಿದರು. ಹೂವು ಗುಚ್ಛಗಳನ್ನು ಸೈನಿಕರ ಪ್ರತಿಮೆಗಳಿಗೆ ಆಕುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತ್ತು.
ಅಧ್ಯಕ್ಷರಾದ ಜೆಸಿ ಸೌಮ್ಯ ಅರಳಪ್ಪ ಅವರು ಕಾರ್ಗಿಲ್ ಯುದ್ದದ ಬಗ್ಗೆ ಮಾತನಾಡಿದರು, ಕಾರ್ಗಿಲ್ ಎಂದ ತಕ್ಷಣ ಪ್ರತಿಯೊಬ್ಬ ಭಾರತೀಯರ ಮೈ ರೋಮಾಂಚಕ ಆಗುತ್ತದೆ. ಮೊದಲು ನಮ್ಮ ಕಣ್ಣ ಮುಂದೆ ಬರುವುದೇ ಭಾರತ-ಪಾಕಿಸ್ತಾನ ಯುದ್ಧ..!!
ಪಾಪಿ ಪಾಪಿಸ್ತಾನ ತನ್ನ ಮೋಸದಿಂದ ಭಾರತದ ಗಡಿ ಆಕ್ರಮಿಸಿದ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯದ ನಗೆ ಬೀರಿದ ಭಾರತೀಯ ಸೈನಿಕರ ತ್ಯಾಗ ಮಾಡಿದ ದಿನವನ್ನು “ಕಾರ್ಗಿಲ್ ವಿಜಯ ದಿನ” ಎಂದು ಕರೆಯುತ್ತಾರೆ.
ಜುಲೈ 26ರಂದು ವಿಜಯ ದಿನವನ್ನು ಎಲ್ಲ ಭಾರತೀಯರು ಸಂಭ್ರಮದಿಂದ ಆಚರಿಸುತ್ತೆವೆ. 1999ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉತ್ತರ ಗಡಿ ಭಾಗದಲ್ಲಿರುವ ಕಾರ್ಗಿಲ್ ಬೆಟ್ಟವನ್ನು ಪಾಪಿ ಪಾಕಿಸ್ತಾನಿ ಯಾರಿಗೂ ಒಂದು ಸುಳಿವು ಸಿಗದ ರೀತಿಯಲ್ಲಿ ಪಾಪಿ ಪಾಕಿಸ್ತಾನದ ಸೈನಿಕರು ವಶಪಡಿಸಿಕೊಂಡಿದ್ದರು.
ಬೆಟ್ಟದ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡ ಪಾಕಿಸ್ತಾನ ಭಾರತ ದೇಶದ ಸಾವಭೌಮತ್ವವನ್ನೇ ಪ್ರಶ್ನೆ ಮಾಡಿತ್ತು. ಅಂತಹ ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಪಾಪಿ ಪಡೆಯನ್ನು ಒದ್ದೋಡಿಸುವುದು ಭಾರತೀಯ ಸೈನಿಕರಿಗೆ ಅಷ್ಟು ಮಾತಾಗಿರಲಿಲ್ಲ. ಸುಧೀರ್ಘ 60 ದಿನಗಳ ಕಾಲ ಶತ್ರುಗಳೊಂದಿಗೆ ಕಾದಾಡಿದ ಭಾರತೀಯ ಸೈನಿಕರು 1999ರ ಜುಲೈ 26ರಂದು ಪಾಕಿಸ್ತಾನದ ಸೈನಿಕರನ್ನು ದೇಶದ ಗಡಿಯಿಂದ ಅಟ್ಟಾಡಿಸಿ ಒದ್ದು ಓಡಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಈ ಯುದ್ಧದಲ್ಲಿ ಭಾರತ ಮಾತೆಯ 527 ವೀರ ಪುತ್ರರು ಯೋಧರು ಹುತಾತ್ಮರಾದರು. ಸಾವಿರಾರು ಜನ ಯೋಧರು ಯುದ್ಧದಲ್ಲಿ ಗಾಯಗೊಂಡರು. ದೇಶದ ನೆಲ, ಜಲದ ವಿಷಯಕ್ಕೆ ಬಂದಾಗ ರಕ್ಷಣೆ ನೀಡುವ ವಿಚಾರದಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುವ ಕರ್ನಾಟಕದ ಹದಿನಾರು ಮಂದಿ ಯೋಧರು ಈ ಯುದ್ಧ ಭೂಮಿಯಲ್ಲಿ ಹುತಾತ್ಮರಾಗಿ ವೀರಸ್ವರ್ಗವನ್ನು ಅಪ್ಪಿದರು ಎಂದು ಅಧ್ಯಕ್ಷೀಯ ಭಾಷಣದಲ್ಲೀ ಮಾತನಾಡಿದರು.
ಜೆಸಿಐ ಶಿವಮೊಗ್ಗ ಶರಾವತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.