ಡಿವಿಎಸ್ ಸಂಜೆ ಕಾಲೇಜಿನಲ್ಲಿ ಪದವಿ ಪ್ರವೇಶ ಆರಂಭ
ಶಿವಮೊಗ್ಗ: ನಗರದ ಡಿವಿಎಸ್ ಸಂಜೆ ಕಾಲೇಜಿನಲ್ಲಿ ಪ್ರಸಕ್ತ ೨೦೨೨-೨೩ನೇ ಸಾಲಿನ ಬಿಎ ಪದವಿ ತರಗತಿಗೆ ಪ್ರವೇಶ ಪ್ರಾರಂಭವಾಗಿದ್ದು. ವಿದ್ಯಾರ್ಥಿಗಳಿಗೆ, ಸರ್ಕಾರಿ ಉದ್ಯೋಗಿಗಳಿಗೆ, ಗೃಹಿಣಿಯರಿಗೆ, ಶಿಕ್ಷಕರಿಗೆ, ಖಾಸಗಿ ಉದ್ಯೋಗಸ್ಥರಿಗೆ ವಿದ್ಯಾಭ್ಯಾಸ ಮು೦ದುವರೆಸಲು ಅವಕಾಶ ಕಲ್ಪಿಸಲಾಗಿದೆ.
೧೯೬೮ರಲ್ಲಿ ಆರಂಭವಾಗಿರುವ ಈ ಕಾಲೇಜು ಸುದೀರ್ಘ ೫೪ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ನ್ಯಾಕ್ ಸಂಸ್ಥೆಯಿಂದ ’ಬಿ”+ ಶ್ರೇಣಿ ಮಾನ್ಯತೆ ಪಡೆದಿರುವ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಏಕೈಕ ಅನುದಾನಿತ ಸಂಜೆ ಕಾಲೇಜು ಎನ್ನುವ ಹೆಗ್ಗಳಿಕೆ ಹೊಂದಿದೆ. ಪಿಯುಸಿ, ಜೆಒಸಿ, ಐಟಿಐ, ಡಿಪ್ಲೊಮೊ ಅಥವಾ ಪ್ಯಾರಮೆಡಿಕಲ್ ಕೋರ್ಸ್ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ವಿದೆ. ಅನುಭವಿ ಮತ್ತು ನುರಿತ ಉಪನ್ಯಾಸಕ ವೃಂದ, ಉತ್ತಮ ಗ್ರಂಥಾಲಯ, ಸುಸಜ್ಜಿತ ಸೆಮಿನಾರ್ ಹಾಲ್, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಇದೆ.
ಎಸ್ಸಿ, ಎಸ್.ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವ್ಯವಸ್ಥೆ, ಉಚಿತ ಕಂಪ್ಯೂಟರ್ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಾಗಾರ ನಡೆಸಲಾಗುವುದು. ಪ್ರವೇಶಕ್ಕೆ ಜು.೩೦ ಕೊನೆದಿನವಾಗಿದ್ದು ಪ್ರವೇಶ ಪಡೆಯುವವರು ಮಧ್ಯಾಹ್ನ ೨.೩೦ ರಿಂದ ರಾತ್ರಿ ೮.೩೦ರ ಅವಧಿಯಲ್ಲಿ ಕಾರ್ಯಾಲಯ ಸಂಪರ್ಕಿಸಬಹುದು. ಆಸಕ್ತರು ವಿವರಗಳಿಗೆ ಪ್ರಾಂಶುಪಾಲ ಡಾ.ಎ.ಟಿ. ಪದ್ಮೇಗೌಡ, ೯೧೪೧೬ ೩೩೪೭೭ ಸಂಪರ್ಕಿಸಬಹುದು.