ಸಂಸ್ಕೃತ ವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕಲಿಸಿಕೊಡುವುದರ ಮೂಲಕ ನಮ್ಮಬಾರತೀಯ ಪರಂಪರೆಯನ್ನು ಪರಿಚಯಿಸಿದಂತಾಗುತ್ತದೆ ಎಂದು ಶಿವಮೊಗ್ಗದ ವಾಸವಿ ಅಕಾಡೆಮಿ ಟ್ರಸ್ಟ್‌ ಕಾರ್ಯದರ್ಶಿ ಹಾಗೂ ಶಾಲಾಸು ಸಂಸ್ಕೃತ ಯೋಜನೆಯ ರಾಜ್ಯಾಧ್ಯಕ್ಷರಾದ ಎಸ್.ಕೆ.ಶೇಷಾಚಲ ತಿಳಿಸಿದರು.

ಅವರು ಇಂದು ಹೊನ್ನಾಳಿ ನಗರದ ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ಸಂಸ್ಕೃತ ಕಲಿಕಾ ತರಗತಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ
ನಮ್ಮ ದೇಶದ ಐತಿಹಾಸಿಕ ಘಟನೆಗಳು, ಪುರಾಣ ಪುಣ್ಯಕಥೆಗಳೆಲ್ಲವೂ ಸಂಸ್ಕೃತ ದಲ್ಲಿದೆ, ಸಂಸ್ಕೃತ ದಲ್ಲಿ ವಿಜ್ಞಾನ, ತಂತ್ರಜ್ಞಾನ ಅಡಗಿದೆ, ಸಂಸ್ಕೃತ ವನ್ನು ಕಲಿತರೆ ಇವೆಲ್ಲವನ್ನು ತಿಳಿದಂತಾಗುತ್ತದೆ ಎಂದರು.

ಸಂಸ್ಕೃತ ಒಂದು ವೈಜ್ಞಾನಿಕ ಭಾಷೆ ಇದನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು, ಇದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಚುರುಕಾಗುತ್ತದೆ ಎಂದರು.

ಶಿಶುವಿಹಾರದಿಂದ ಏಳನೇ ತರಗತಿಯವರೆಗೆ ಸಂಸ್ಕೃತ ಭಾರತೀಯವರು ಸಿದ್ಧಪಡಿಸಿದ ಪಠ್ಯ ಕ್ರಮವು ಅತ್ಯಂತ ವೈಜ್ಞಾನಿಕವಾಗಿದೆ ಇದನ್ನು ಹೊನ್ನಾಳಿಯ ಪ್ರೇರಣಾ ಶಾಲೆಯಲ್ಲಿ ಅಳವಡಿಸುತ್ತಿರುವುದು ಸಂತಸವಾಗಿದೆ ಎಂದರು.

ಸಂಸ್ಕೃತ ಎಲ್ಲರ ಭಾಷೆ ಇದನ್ನು ಎಲ್ಲರೂ ಕಲಿಯಬೇಕು, ಇದಕ್ಕೆ ವಯಸ್ಸಿನ ಅಂತರ ಅಡ್ಡಿಬರುವುದಿಲ್ಲ ಎಂದರು.

ಮಕ್ಕಳಿಗೆ ಸಾಂಕೇತಿಕವಾಗಿ ಪುಸ್ತಕವನ್ನು ವಿತರಿಸುತ್ತ ಮಾತನಾಡಿದ ಹೊನ್ನಾಳಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿ ಎಂ, ಮಾತನಾಡುತ್ತ ಎಲ್ಲಾ ಭಾಷೆಗಳಿಗೆ ತಾಯಿ ಸ್ಥಾನದಂತಿರುವ ಸಂಸ್ಕೃತ, ಇಂತಹ ಸಂಸ್ಕೃತದಲ್ಲಿ ಪುರಾತನ ವಾದ ಸಂಸ್ಕೃತಿ ಅಡಗಿದೆ, ಭಗವದ್ಗೀತೆ, ರಾಮಾಯಣ, ಮಹಾಭಾರತ ಇವೆಲ್ಲದರ ಮೂಲ ಸಂಸ್ಕೃತ, ಕೇವಲ ಪುರಾಣ ಪಣ್ಯಕಥೆಗಳಲ್ಲದೆ, ಸಂಸ್ಕೃತ ದಲ್ಲಿ ವಿಜ್ಞಾನ ಇದೆ, ತಂತ್ರಜ್ಞಾನ ಇದೆ, ಭಗವದ್ಗೀತೆ ಯೊಂದೆ ಸಾಕು ನಮ್ನ ಜೀವನ ಉತ್ತಮವಾಗಿರಲು ಎಂದು ಹೇಳಿದರು.

ಸಂಸ್ಕೃತ ಭಾಷೆ ಕಲಿಯುವುದರಿಂದ ಸಂಸ್ಕೃತಿ ಕಲಿತಂತಾಗುತ್ತದೆ, ಸಂಸ್ಕೃತ ಕಲಿಕೆ ನಿರಂತರವಾಗಿರಲಿ ಎಂದು ಮಕ್ಕಳಿಗೆ ಹೇಳಿದರು.

ಸಮಾರಂಭದಲ್ಲಿ ವಾಸವಿ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಶಾಮಸುಂದರ್ ಶಾಲಾ ಕಾರ್ಯದರ್ಶಿ ಪುಟ್ಟಪ್ಪ, ಶಾಲಾ ಮುಖ್ಯೋಪಾಧ್ಯಾಯರಾದ ಕಲಾಶ್ರೀ ಜಯಪ್ಪ, ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರೇರಣಾ ಶಾಲೆಯ ಅಧ್ಯಕ್ಷರಾದ ಆರತಿ ಯೋಗೇಶ್ ವಹಿಸಿದ್ದರು.
ಮಹೇಶ್ ಸ್ವಾಗತಿಸಿದರು, ಶೈಲಜಾ ವಂದಿಸಿದರು, ರೇಣುಕಾ ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ…