ಕನಕಪುರ ನ್ಯೂಸ್…

ಕನಕಪುರದ ಶ್ರೀ ದೇಗುಲಮಠ ಶ್ರೀ ನಿರ್ವಾಣಸ್ವಾಮಿ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನೋತ್ಸವ ಕಾರ್ಯಕ್ರದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ಶ್ರೀ ಚನ್ನಬಸವಸ್ವಾಮಿಜೀ ರವರು ದೇಶ ಮತ್ತು ದೇಹ ಬೇರೆಯಲ್ಲ, ದೇಹಕ್ಕೆ ಪ್ರತಿ ಅಂಗಾಂಗಗಳು ಹೇಗೆ ಮುಖ್ಯವೊ ಹಾಗೆಯೇ ದೇಶಕ್ಕೆ ಪ್ರತಿ ಸ್ಥಳವೂ ಬಹುಮುಖ್ಯವಾದದ್ದು ಎಂದರು.

ಈ ಕಾರ್ಯಕ್ರಮವು ಎರಡು ಪ್ರಮುಖ ಸದುದ್ದೇಶ ಹೊಂದಿದ್ದು ಮೊದಲನೆಯದಾಗಿ 1999 ರ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ವೀರಾವೇಶದಿಂದ ಹೋರಾಡಿದ ವೀರ ಸೈನಿಕರಿಗೆ ನಮನ ಸಲ್ಲಿಸುವುದು ಮತ್ತು ಈ ದೇಶದ ಪ್ರತಿಯೊಬ್ಬ ಪ್ರಜೆಯು ತಮ್ಮ ಮಕ್ಕಳನ್ನು ಭಾರತೀಯ ಸೈನ್ಯಕ್ಕೆ ಸೇರಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡಗೂಳಿಸುವುದು ಮತ್ತು ಗಡಿ ಭಾಗದಲ್ಲಿ ನಿಂತು ನಮ್ಮ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ನೀಡಲು ವಿಜಯ ದಿನೋತ್ಸವ ನಡೆದಿದೆ ಎಂದು ಆಶೀರ್ವದಿಸಿದರು.

ಅಧ್ಯಕ್ಷ ಭಾಷಣ ಮಾಡಿದ, ವಿವೇಕ ಶಿಕ್ಷಣ ಸಂಸ್ಥೆಯ ನಿತ್ಯಾನಂದ ವಿವೇಕವಂಶಿರವರು
1999 ರ ಸಿಯಾಚಿನ್ ವಿಷಯವಾಗಿ ಭಾರತ ಮತ್ತು ಪಾಕ್ ನಡುವೆ ನಡೆದ ಒಪ್ಪಂದಕ್ಕೆ ಪಾಕ್ ಮಾಡಿದ ನಂಬಿಕೆಹರಣದ ಪರಿಣಾಮ ಕಾರ್ಗಿಲ್ ಯುದ್ಧವಾದರೆ ಭಾರತದ ಸೈನಿಕರಲ್ಲಿನ ಅಜೇಯ ದೇಶಪ್ರೇಮ ಮತ್ತು ಸೈನ್ಯ ನೀತಿಯ ಸಂಕೇತವೇ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಸಿಕ್ಕ ಗೆಲುವು. ಇದರ ಸಂದೇಶವೇನೆದರೆ ನಂಬಿಕೆ ಎನ್ನುವುದು ಒಬ್ಬ ಮನುಷ್ಯನ ವ್ಯಕ್ತಿತ್ವ ನಿದರ್ಶನವಷ್ಠೆ ಅಲ್ಲ ಅದು ಆ ದೇಶದ ಮಣ್ಣಿನ ಗುಣವಾಗಬೇಕು ಎಂದು ತಿಳಿಸಿದರು.

ಮಾಜಿ ಸೈನಿಕರಾದ ಮುನಿಕೃಷ್ಣರವರು ಮಾತನಾಡಿ ತಮ್ಮ ಸುದೀರ್ಘ 24 ವರ್ಷ 22 ದಿನಗಳ ಸೈನಿಕ ಸೇವೆಯ ಅನುಭವ ಸೈನಿಕ ತರಬೇತಿ ಮತ್ತು ಸೈನಿಕರಲ್ಲಿನ ದೇಶಪ್ರೇಮದ ಬಗ್ಗೆ ತಿಳಿಸಿದರು.

ಶಾಲೆಯ ವಿದ್ಯಾರ್ಥಿಯಾದ ಈಶಾನ್ ರಾಮ್. ಎಮ್ ದೇಶದ ಸೈನಿಕರ ಬಗ್ಗೆ ತಿಳಿಸಿದರು ”.
ಶಾಲೆಯ ಮಕ್ಕಳು ಚಿತ್ರ ಬರಹ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ 2021 – 22 ನೇ ಸಾಲಿನ ಸಿಬಿಎಸ್ಇ 10 ನೇ ತರಗತಿಯಲ್ಲಿ ಅತ್ಯುನ್ನತ ಅಂಕ ಗಳಿಸಿ ಶಾಲೆಗೆ ಕೀರ್ತಿತಂದ ಎಲ್ಲಾ ಮಕ್ಕಳಿಗೆ ಶ್ರೀ ಮಠದಿಂದ ಪೂಜ್ಯರು ಸನ್ಮಾನ ನೆರವೇರಿಸಿದರು
ಬಿಜ್ಜಳ್ಳಿ ಸಾಹುಕರ್ ಮಂಜುನಾಥ್‌ರವರ ಕುಟುಂಬದವರು ಹಾಗು ಪ್ರಾಂಶುಪಾಲರು ಮತ್ತು ಶಿಕ್ಷಕರು ಶಾಲಾ ಮಕ್ಕಳ ಪೋಷಕರ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…