ಶಿವಮೊಗ್ಗ: ಅಂಗಾಂಗ ದಾನ ಹಾಗೂ ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಎಂಬ ಘೊಷಣೆಯೊಂದಿಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿರುವ ಅಂತರಾಷ್ಟ್ರೀಯ ಕ್ರೀಡಾಪಟು ಚನ್ನರಾಯಪಟ್ಟಣ ವಿಷನ್ ಕ್ಲಬ್‌ನ ಬರಾಳು ಪ್ರಕಾಶ್ ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಿವಮೊಗ್ಗ ನಗರದ ಎಲ್ಲ ರೋಟರಿ ಕ್ಲಬ್‌ಗಳ ಪದಾಧಿಕಾರಿಗಳು ಅಭಿನಂದಿಸಿದರು.

ಸ್ವಾತಂತ್ರ ಅಮೃತ ಮಹೋತ್ಸವ ಪ್ರಯುಕ್ತ ಸಮಾಜದ ಸ್ಥಾಸ್ಥö್ಯ ಕಾಪಾಡುವ ಸಂದೇಶದ ಜತೆಯಲ್ಲಿ ಅಂಗಾAಗ ದಾನ ಹಾಗೂ ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸುವ ಬಗ್ಗೆಯು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಬರಾಳು ಪ್ರಕಾಶ್.
ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ದಿನನಿತ್ಯ ಜೀವನದಲ್ಲಿ ಎಲ್ಲರೂ ಬಹಳ ಬಳಕೆ ಮಾಡುತ್ತಿದ್ದು, ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲ ಎಂಬAತಾಗಿದೆ. ಇನ್ನಾದರೂ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಉಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಹೇಳಿದರು.

20 ದಿನಗಳಲ್ಲಿ 2500 ಕೀಮಿ ಸಂಚಾರ ಮಾಡಿರುವ ಪ್ರಕಾಶ್ ಅವರು ಎಲ್ಲ ಕಡೆಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಕಾರ್ಯ ಅಭಿನಂದನೀಯ. ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಎಲ್ಲರ ಪಾತ್ರವು ಬಹಳ ಮುಖ್ಯ ಎಂದು ತಿಳಿಸಿದರು.
ಅಂತರಾಷ್ಟಿçÃಯ ಕ್ರೀಡಾಪಟು ಚನ್ನರಾಯಪಟ್ಟಣ ವಿಷನ್ ಕ್ಲಬ್‌ನ ಬರಾಳು ಪ್ರಕಾಶ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಾಲಿನ್ಯ ರಹಿತ, ಉತ್ತಮ ಪರಿಸರ ಹಾಗೂ ಆರೋಗ್ಯಯುತ ಜೀವನಕ್ಕೆ ಸೈಕಲ್ ಬಳಕೆ ಮಾಡಬೇಕು. ಕನಿಷ್ಠ 10 ಕೀಮಿ ವರೆಗಿನ ದಿನನಿತ್ಯದ ಕೆಲಸಗಳಿಗೆ ಹಾಗೂ ವ್ಯಾಯಮದ ಆಶಯದಿಂದ ಸೈಕಲ್ ಬಳಸಬೇಕು ಎಂದು ಹೇಳಿದರು.

ಅಂಗಾಂಗ ದಾನಗಳ ಬಗ್ಗೆ ಎಲ್ಲರೂ ಜಾಗೃತಿ ಮೂಡಿಸಿಕೊಳ್ಳಬೇಕು. ಸಮಾಜದ ಎಲ್ಲರಲ್ಲಿಯೂ ಅಂಗಾAಗ ದಾನಗಳ ಬಗ್ಗೆ ತಿಳವಳಿಕೆ ಮುಖ್ಯ ಎಂದು ತಿಳಿಸಿದರು. ರೇವಣಸಿದ್ದಪ್ಪ, ಜುಬಿಲಿ ಕ್ಲಬ್‌ನ ಸುರೇಶ್ ಎನ್.ಜೆ., ಕಾರ್ಯದರ್ಶಿ ವೆಂಕಟೇಶ್ ಎಸ್.ಗುತ್ತಲ್, ಸೆಂಟ್ರಲ್ ಕ್ಲಬ್‌ನ ಜೆ.ಪಿ.ಚಂದ್ರು, ಮಾಜಿ ಅಧ್ಯಕ್ಷ ಸುರೇಂದ್ರ ಬಿ, ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…