ರಕ್ತದಾನಕ್ಕಿಂತ ಬೇರೆ ದಾನ ಇನ್ನೊಂದಿಲ್ಲ, ರಕ್ತದಾನ ಮಾಡುವುದರಿಂದ ನಮ್ಮ ದೇಹ, ಮನಸ್ಸು ಸದೃಢರಾಗುವದರೊಂದಿಗೆ ಉತ್ತಮ ಆರೋಗ್ಯ ಸಿಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್.ಆರ್.ಎನ್.ಎಂ. ಕಾಲೇಜಿನಿನ ಪ್ರಾಂಶುಪಾಲರಾದ ಡಾ|| ಕೆ.ಎಲ್.ಅರವಿಂದ ನುಡಿದರು.
ಇಂದು ಬೆಳಿಗ್ಗೆ ರಾಷ್ಟಿçÃಯ ಶಿಕ್ಷಣ ಸಮಿತಿಯ ಎಸ್.ಆರ್.ಎನ್.ಎಂ. ಕಾಲೇಜಿನ ಗ್ರಂಥಾಲದ ಆವರಣದಲ್ಲಿ ೭೫ನೇ ವರ್ಷದ ಸ್ವತಂತ್ರö್ಯ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ೭೫ ನೇ ವರ್ಷದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಇಂದು ಬೆಳಿಗ್ಗೆ ಎನ್.ಎಸ್.ಎಸ್. ಘಟಕ ಹಾಗೂ ಯೂತ್ ರೆಡ್‌ಕ್ರಾಸ್‌ವತಿಯಿಂದ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವರ್ಷದಲ್ಲಿ ನಮ್ಮ ಕಾಲೇಜುವತಿಯಿಂದ ಎರಡು-ಮೂರು ಬಾರಿ ರಕ್ತದಾನ ಶಿಬಿರ ಹಾಗೂ ರಕ್ತದ ಗುಂಪು ತಪಾಸಣೆ ಹಾಗೂ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಇಂದು ೭೫ನೇ ವರ್ಷಕ್ಕೆ ೭೫ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ರಕ್ತದಾನ ಮಾಡಲು ಆಯೋಜಿಸಿದ್ದೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡುತ್ತಾ ರಕ್ತದಾನದಿಂದ ಹೃದಯಾಘತ ಕಡಿಮೆ ಆಗುವುದರಜೊತೆಗೆ ಹಾಗೂ ದೇಹದಲ್ಲಿ ರಕ್ತದಾನದಿಂದ ಕೊಬ್ಬಿನಾಂಶ ಹೊರಹೋಗುವುದರಿಂದ ಸದಾ ಲವಲವಿಕೆಯಿಂದ ಇರುವುದರಜೊತೆಗೆ ದೀರ್ಘಾಷ್ಯುವುಳ್ಳವರಾಗಿರುತ್ತಾರೆ. ಜಿಲ್ಲೆಯಲ್ಲಿ ರಕ್ತದಕೊರತೆ ತುಂಬಾ ಹೆಚ್ಚಾಗಿದ್ದು ಇದನ್ನು ನೀಗಿಸಲು ಯುವಕರು ರಕ್ತದಾನ ಮಾಡುವುದರಲ್ಲಿ ಮುಂದಾಗಬೇಕು ಹಾಗೂ ಮೂಢನಂಬಿಕೆಯಿAದ ಹೊರ ಬಂದು ರಕ್ತದಾನ ಮಾಡಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಈ ರಕ್ತದಾನ ಶಿಬಿರದಲ್ಲಿ ೧೦೮ಕ್ಕೂ ಹೆಚ್ಚುಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, ಎನ್.ಎಸ್.ಎಸ್.ಘಟಕದ ಡಾ|| ಮುಕುಂದ ಎಸ್., ಹಾಗೂ ಲಕ್ಷö್ಮಣ್ ಕೆ, ಡಾ. ಪ್ರಶಾಂತ್ ಕೆ ಕೊಡ ಟಿ.ಆರ್., ಹೆಚ್.ಎಸ್.ದತ್ತಾತ್ರಿ, ಜಿ.ವಿಜಯಕುಮಾರ್ ಹಾಗೂ ಎನ್.ಎಸ್.ಎಸ್.ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.