ಶಿವಮೊಗ್ಗ: ರೈತರ ಉತ್ಪನ್ನಗಳಿಗೆ ಬೆಲೆ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಇಂದು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿದ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದೇಶ 76 ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗಿದೆ. ರೈತರನ್ನು ಬಿಟ್ಟು ರಾಜಕಾರಣಿಗಳು, ರಾಜಕೀಯ ಕೃಪಾಪೆÇೀಷಿತರು, ಕೈಗಾರಿಕೆಗಳ ಮಾಲೀಕರು, ವರ್ತಕರು, ನೌಕರ ಶಾಹಿಗಳು ಸಂಭ್ರಮಿಸುತ್ತಿದ್ದಾರೆ. ಅವರಿಗೆಲ್ಲ ರೈತ ಅಗ್ಗದ ಬೆಲೆ ಯಲ್ಲಿ ಅವರ ಅಗತ್ಯಗಳನ್ನು ಪೂರೈಸಿ ಸಾಲದ ಸುಳಿಗೆ ಸಿಲುಕಿ ದ್ದಾನೆ. ರೈತರಿಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿಲ್ಲ. ಹಾಗಾಗಿಯೇ ನಮ್ಮ ಬೆಳೆಗಳಿಗೆ ಬೆಲೆಯಾದರೂ ಬರಲಿ ಎಂಬ ನಿಟ್ಟಿನಲ್ಲಿ ಬೆಲೆ ಸ್ವಾತಂತ್ರ್ಯ ಚಳವಳಿ ಆರಂಭಿಸಿದ್ದೇವೆ ಎಂದರು.
ಕಾರ್ಖಾನೆಯ ಉತ್ಪಾದನೆಗಳಂತೆ ರೈತರ ಉತ್ಪನ್ನಗಳಿಗೂ ಬೆಲೆ ಭದ್ರತೆ ಕಾಯ್ದೆ ಜಾರಿಯಾಗಬೇಕು. ಕೃಷಿ ಬೆಲೆ ಆಯೋಗದ ಮಾರ್ಗದರ್ಶಿಯಲ್ಲಿಯೇ ಬೆಲೆ ಭದ್ರತೆ ಕಾಯ್ದೆ ಇರಬೇಕು. ಇಲ್ಲಿವರೆಗೂ ಬೆಲೆಯ ಮೋಸದಿಂದಾಗಿ ರೈತರ ಮೇಲೆ ಬಂದಿರುವ ಎಲ್ಲಾ ಸಾಲಗಳ ಹೊಣೆಗಾರಿಕೆಯನ್ನು ಸರ್ಕಾರಗಳೇ ಹೊರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪ್ರಮುಖರಾದ ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಬಿ.ಎಂ. ಚಿಕ್ಕಸ್ವಾಮಿ, ಕೆ. ರಾಘವೇಂದ್ರ, ಎಸ್. ಶಿವಮೂರ್ತಿ, ರುದ್ರೇಶ್, ಸಿ. ಚಂದ್ರಪ್ಪ, ಪಿ.ಡಿ. ಮಂಜಪ್ಪ, ರಾಮಚಂದ್ರಪ್ಪ, ಪಂಚಾಕ್ಷರಿ, ಜ್ಞಾನೇಶ್ ಸೇರಿದಂತೆ ಹಲವರು ಇದ್ದರು.