ಕಾಂಗ್ರೆಸ್ ಅನವಶ್ಯಕವಾಗಿ ಲಸಿಕೆಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ. ದೇಶದಲ್ಲಿ ಕರೋನದಂತಹ ಮಹಾಮಾರಿ ಅಪ್ಪಳಿಸಿ ಜನ ಜೀವನ ಅಸ್ತವ್ಯಸ್ತಆಗಿದೆ. ಈ ಸಂಧರ್ಭದಲ್ಲಿ ಸೇವಾಕಾರ್ಯಗಳಲ್ಲಿ ತೊಡಗಿ ಕರೋನ ನಿರ್ಮೂಲನೆಗೆ ಶ್ರಮಿಸುವ ಬದಲು ಬರೀ ಮೋದಿಯನ್ನು ಹಾಗೂ ಭಾರತೀಯ ಜನತಾ ಪಕ್ಷವನ್ನು ಟೀಕಿಸುತ್ತ ರಾಜಕೀಯ ಮಾಡುತ್ತಲೇ ಬಂದಿದೆ ಎಂದು ಶಿವಮೊಗ್ಗ ಜಿಲ್ಲಾ ಲಸಿಕಾ ಅಭಿಯಾನದ ಪ್ರಮುಖ್ ಹಾಗು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ ಅವರು ಖಂಡಿಸಿದ್ದಾರೆ
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪ್ರಯತ್ನದಿಂದ ಭಾರತ ಲಸಿಕೆ ನೀಡುವುದರಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿದೆ. ಗರಿಷ್ಠ ಲಸಿಕೆ ನೀಡಿದ ರಾಷ್ಟ್ರಗಳ ಪೈಕಿ ಭಾರತ ಅಗ್ರಸ್ಥಾನದಲ್ಲಿದೆ.
ದೇಶದಲ್ಲಿ ಈವರೆಗೆ 32.90 ಕೋಟಿ ಲಸಿಕೆ ನೀಡಲಾಗಿದ್ದು, ಎರಡನೇ ಸ್ಥಾನದಲ್ಲಿರುವ ಅಮೆರಿಕ 32.33 ಕೋಟಿ ಡೋಸ್ ಲಸಿಕೆ ಹಾಕಿದೆ. ಅಲ್ಲದೆ ರಾಜ್ಯದಲ್ಲೂ ಕೂಡ ಇವರೆಗೆ 2.22 ಕೋಟಿ ಲಸಿಕೆ ನೀಡಲಾಗಿದೆ.ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ 5,41,118 ಲಸಿಕೆ ನೀಡಲಾಗಿದೆ.ಈ ಲಸಿಕಾಕಾರಣದ ಅಂಕಿಅಂಶಗಳು ಇನ್ನು ಹೆಚ್ಚಾಗಬೇಕಿತ್ತು. ಏಕೆಂದರೆ ಲಸಿಕೆಯ ಬಗ್ಗೆ ಪ್ರಾರಂಭದಲ್ಲೇ ಅಪಪ್ರಚಾರ ಮೂಡಿಸಿ, ಲಸಿಕೆ ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಿದ್ದು ಇದೇ ಕಾಂಗ್ರೆಸ್… ಈ ಕಾರಣದಿಂದ ಇನ್ನೂ ಎಷ್ಟೋ ಹಳ್ಳಿಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಜನತೆ ಮುಂದೆ ಬರುತ್ತಿಲ್ಲ… ಈ ಎಲ್ಲ ಅನಾಹುತಗಳಿಗೆ ಕಾರಣರಾದ ಕಾಂಗ್ರೆಸ್ ಈಗ ಮತ್ತೆ ಲಸಿಕೆಯ ಬಗ್ಗೆ ಗೊಂದಲ ಮೂಡಿಸುತ್ತಿದೆ…. ಲಸಿಕೆ ನೀಡಿದ ರಾಷ್ಟ್ರಗಳ ಪೈಕಿ ಭಾರತ ಅಗ್ರಸ್ಥಾನದಲ್ಲಿದ್ದರು ಲಸಿಕಾಕರಣದ ಬಗ್ಗೆ ಪ್ರಶ್ನಿಸುತ್ತದೆ….
ಜಿಲ್ಲೆಯಲ್ಲಿ ಸದ್ಯ ಸರ್ಕಾರದ ನಿರೀಕ್ಷೆಯಂತೆ ಶಾಲಾ-ಕಾಲೇಜುಗಳು ಆರಂಭವಾಗುವ ಪೂರ್ವದಲ್ಲೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಆಧ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೂ ಸಹ ಇನ್ನು ಹೆಚ್ಚು ಲಸಿಕೆಯನ್ನು ನೀಡಲು ಈಗಾಗಲೇ ಜಿಲ್ಲಾಆಡಳಿತ ತಯಾರಿ ನೆಡೆಸಿದೆ.. ಇದನ್ನೆಲ್ಲಾ ಅರಿತು ಅರಿಯದೆ ಲಸಿಕೆಯ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವುದು ದೊಡ್ಡ ದುರಂತವಾಗಿದೆ ಮತ್ತು ಖಂಡನೀಯವಾಗಿದೆ ಎಂದು ಎಸ್ ದತ್ತಾತ್ರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ….
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153