ಕೇಂದ್ರ ಬಿಜೆಪಿ ಸರ್ಕಾರದ ದ್ವಿಮುಖ ನೀತಿಗೆ ಮತ್ತು ಬಾಂಗ್ಲಾ ದೇಶದ ರೊಹಿಂಗ್ಯಾ ಗಳಿಗೆ ಉಚಿತ ಮನೆ ಹಾಗೂ ಭದ್ರತೆ ಬೇಡ ಕೊಟ್ಟಿರುವುದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕಿರಣ್ ಖಂಡಿಸಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ದ್ವಿಮುಖ ನೀತಿಯನ್ನು ಪ್ರದರ್ಶಿಸುತ್ತಿದೆ 1 ಕಡೆಯಿಂದ ಬಾಂಗ್ಲಾ ದೇಶಿಯ ರೊಹಿಂಗ್ಯಾಗಳಿಗೆ ಭಾರತದಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಬಹಿರಂಗ ಹೇಳಿಕೆ ಯಲ್ಲಿ ಹೇಳುತ್ತದೆ. ಆದರೆ ರೊಹಿಂಗ್ಯಾ ಮುಸಲ್ಮಾನರಿಗೆ ದೆಹಲಿಯಲ್ಲಿ ಉಚಿತ ಮನೆ ಹಾಗೂ ಭದ್ರತೆಯನ್ನು ನೀಡುವುದಕ್ಕೆ ಕೇಂದ್ರದ ಬಿಜೆಪಿ ಸರ್ಕಾರದ ನಿಲುವು ಖಂಡನೀಯವಾಗಿದೆ.

ಕಾಶ್ಮೀರಿ ಪಂಡಿತರನ್ನು ರಕ್ಷಿಸಲಾಗದ ಕೇಂದ್ರದ ಬಿಜೆಪಿ ಸರ್ಕಾರ ರೊಹಿಂಗ್ಯಾ ಮುಸಲ್ಮಾನರಿಗೆ ಮನೆ ಹಾಗೂ ಪೊಲೀಸ್ ಭದ್ರತೆ ನೀಡಲು ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ ಮತ್ತೊಂದು ಪ್ರಮುಖ ವಿಷಯವೆಂದರೆ ಕೇಂದ್ರ ಸರ್ಕಾರದ ಈ ನಿಲುವನ್ನು, ಕೇಂದ್ರ ನಗರ ವಿತ್ತ ಸಚಿವಾಲಯದ ಮಂತ್ರಿಗಳಾದ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮುಖೇನಾ ಸಮರ್ಥಿಸಿಕೊಂಡಿರುವುದು ನಿಜಕ್ಕೂ ಖಂಡನೀಯವಾಗಿದೆ.

ಭಾರತದಲ್ಲಿ ಇರುವಂತಹ ಲಕ್ಷಾಂತರ ಜನರಿಗೆ ಇದುವರೆಗೂ ಮನೆಗಳಿಲ್ಲದೆ ಸಂಕಟದಲ್ಲಿದ್ದಾರೆ.ಇಂಥ ಸಮಯದಲ್ಲಿ ವಿದೇಶಿ ಜನರನ್ನು ದೆಹಲಿಯಲ್ಲಿ ನೆಲೆಸಿರುವ ಉದ್ದೇಶವನ್ನು ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ಹೊಂದಿದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಯೋಚಿಸಿದರೆ ದೆಹಲಿಯಲ್ಲಿ ತಮ್ಮ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಸರ್ಕಾರ ಈ ತರಹದ ಹುನ್ನಾರ ನಡೆಸಿರಬಹುದು ಎಂದು ಅನುಮಾನಿಸಬಹುದಾಗಿದೆ.ಕೇಂದ್ರ ಸರ್ಕಾರದ ಇಂತಹ ಕ್ರಮವನ್ನು ಆಮ್ ಆದ್ಮಿ ಪಾರ್ಟಿ ಖಂಡಿಸುತ್ತದೆ

ವರದಿ ಪ್ರಜಾಶಕ್ತಿ…