ಭಾರತ ದೇಶದ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಕೋಮು ಗಲಭೆ ಸೃಷ್ಟಿ ಮಾಡಿಸುತ್ತದೆ ಅದರಿಂದ ಸಾರ್ವಜನಿಕರು ವ್ಯಾಪಾರಸ್ಥರ ಮೇಲೆ ಪರಿಣಾಮ ಬೀರುತ್ತದೆ ಎಂದು ಜಾತ್ಯತೀತ ಜನತಾದಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರಸ್ಥರ ಬದುಕು ತುಂಬಾ ಕಷ್ಟಕರವಾಗಿತ್ತು.ಈಗ ಕೋಮುಗಲಭೆ ಹಿನ್ನೆಲೆಯಲ್ಲಿ ದಿನನಿತ್ಯದ ವ್ಯಾಪಾರಸ್ಥರು ಸಾರ್ವಜನಿಕರ ಮೇಲೆ ತುಂಬಾ ಪರಿಣಾಮ ಬೀರಿದೆ. ಕೋಮು ಗಲಭೆಗೆ ಕಾರಣವಾದ ಕಿಡಿಗೇಡಿಗಳ ಮೇಲೆ ಕಾನೂನು ರೀತಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಿವಮೊಗ್ಗ ನಗರ ಜಾತ್ಯತೀತ ಜನತಾದಳ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ನಾಗರಾಜ್ ಕಂಕಾರಿ , ಪಾಲಾಕ್ಷಿ , ಭಾಸ್ಕರ್ , ನರಸಿಂಹ , ಜಗದೀಶ್ , ಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…