ಇಂದು ಶಿವಮೊಗ್ಗದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರವರು , ಲಸಿಕಾಕರಣ ದಲ್ಲಿ ತೀರ್ಥಹಳ್ಳಿಗೆ ಮೊದಲ ಆದ್ಯತೆ ನೀಡಿ ಮಳೆಗಾಲ ಶುರುವಾಯಿತೆಂದರೆ ತೀರ್ಥಹಳ್ಳಿಯ ಆಸುಪಾಸಿನ ಜನತೆಗೆ ಓಡಾಡಲು ತುಂಬಾ ಕಷ್ಟವಾಗುತ್ತದೆ ಎಂದು ಎಲ್ಲರ ಗಮನ ಸೆಳೆದರು. ಹಾಗೆಯೇ ಕಳೆದ ವರ್ಷ ಕೋವಿಡ ಬಂದಾಗ ಟಾಸ್ಕ್ ಫೋರ್ಸ್ ಗಳು ಕಾರ್ಯ ನಿರ್ವಹಿಸಿದಂತೆ ಈ ಬಾರಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು . ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಶಿವಮೊಗ್ಗದ ಶವಾಗಾರದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಿಲ್ಲಾಡಳಿತ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿ ಶವ ಸಾಗಣೆಗೆ ಪಡೆಯುತ್ತಿದ್ದು. ಗೂಂಡಾಗಿರಿ ಅನುಭವವೂ ಆಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು . ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ಕೂಡಲೇ ಶವಾಗಾರದ ಹತ್ತಿರ ಪೋಲೀಸರನ್ನು ನೇಮಿಸಿ ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಭರವಸೆ ನೀಡಿದರು. ಆರಗ ಜ್ಞಾನೇಂದ್ರ ಅವರು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರ ವೇತನ ತುಂಬಾ ಕಮ್ಮಿ ಇದೆ ಈ ಸಮಯದಲ್ಲಾದರೂ ಅವರಿಗೆ ಎಕ್ಸ್ಟ್ರಾ ಪ್ಯಾಕೇಜ್ ಘೋಷಿಸಿ ಎಂದು ಒತ್ತಾಯಿಸಿದರು . ಅದಕ್ಕೆ ಈಶ್ವರಪ್ಪರವರು ಜಿಲ್ಲಾಧಿಕಾರಿಗಳಿಗೆ ಈ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ ಯಾವುದಾದರೂ ಅನುದಾನದಿಂದ ಪ್ಯಾಕೇಜ್ ಘೋಷಣೆ ಮಾಡಿ ಎಂದು ಹೇಳಿದರು