ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಅನೇಕ ಜನ ಅಧಿಕಾರಿಗಳು ಕೆಲಸವನ್ನು ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬರು ಅಧಿಕಾರಿಗಳು ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಶ್ರೀ ತಿಮ್ಮಪ್ಪನವರು ಆಡಿಟ್ ಆಫಿಸರ್ ಆಗಿ, ಶ್ರೀ ವಿಜಯ ಕುಮಾರ್ ಅವರು ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರತ್ನಾಕರ್ ಅವರು ಎ.ಜಿ.ಎಮ್ (ಅಡ್ಮಿನ್) ಆಗಿ ಈಗಾಗಲೇ ಕಳೆದ ಎರಡು ವರ್ಷದ ಹಿಂದೆ ಸರ್ಕಾರಿ ಹುದ್ದೆ ಇಂದ ನಿವೃತ್ತಿ ಆದರು, ಸ್ಮಾರ್ಟ್ ಸಿಟಿ ಎ.ಜಿ.ಎಮ್ (ಅಡ್ಮಿನ್) ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರದಿಂದ ಬರುತ್ತಿರುವ ಸಂಬಳ
- ವಿಜಯ್ ಕುಮಾರ್ ಇ.ಇ(ಸಿವಿಲ್) : ಸರ್ಕಾರಿ ವೇತನ : 1.03.000 ಪೆನ್ಷನ್ 60.000 ಎಸ್.ಎಸ್.ಸಿ.ಎಲ್ 70.000 ರಿಟೈರ್ಡ್ ದಿನಾಂಕ: 31-07-2021
- ತಿಮ್ಮಪ್ಪ ಆಡಿಟ್ ಆಫೀಸರ್ : ಸರ್ಕಾರಿ ವೇತನ : 72.000 ಪೆನ್ಷನ್ 40.000 ಎಸ್.ಎಸ್.ಸಿ.ಎಲ್ 51.000 ರಿಟೈರ್ಡ್ ದಿನಾಂಕ: 31-07-2021
- ರತ್ನಾಕರ್ ಎ.ಜಿ.ಎಮ್ (ಅಡ್ಮಿನ್) : ಸರ್ಕಾರಿ ವೇತನ : 50.000 ಪೆನ್ಷನ್ 30.000 ಎಸ್.ಎಸ್.ಸಿ.ಎಲ್. 70.000 ಐದು ವರ್ಷದ ಹಿಂದೆ ರಿಟೈರ್ಡ್ ಆಗಿದ್ದಾರೆ. ಮೂರು ವರ್ಷದಿಂದ ಎಸ್.ಎಸ್.ಸಿ.ಎಲ್ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿ.ಸೂ: ಕರ್ನಾಟಕ ಸಿವಿಲ್ ಸರ್ವಿಸ್ ರೂಲ್ಸ್ ನ ಅನುಪಾತಿನ ಅಡಿಯಲ್ಲಿ ಯಾವುದೇ ಸರ್ಕಾರದ ಯಾವುದೇ ಹುದ್ದೆಯಲ್ಲಿ ನಿವೃತ್ತಿ ಹೊಂದ ಮೇಲೆ ಸರ್ಕಾರದ ಇತರೆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಲ್ಲಿ ಅವರ ನಿವೃತ್ತಿಯ ತಿಂಗಳ ಹಣ ಹಾಗೂ ಅವರ ಸರ್ಕಾರಿ ಸಂಸ್ಥೆಯ ವೇತನದ ಹಣ ಎರಡು ಸೇರಿದರೆ ನಿವೃತ್ತಿ ಆದ ವ್ಯಕ್ತಿಯ ಕೊನೆಯ ತಿಂಗಳ ಸಂಬಳಕ್ಕಿಂತ ಹೆಚ್ಚು ಮೀರಬಾರದು.
ಇವರಲ್ಲಿ ಒಬ್ಬರು ನಿವೃತ್ತಿ ಹೊಂದಿ ಎರಡು ವರ್ಷ ಆಗಿದ್ದು, ಇನ್ನಿಬ್ಬರು 31-07-2021 ರಂದು ನಿವೃತ್ತಿ ಹೊಂದಲಿದ್ದಾರೆ ಸರ್ಕಾರಿ ಕೆಲಸದಿಂದ ನಿವೃತ್ತಿ ಆದ ಮೇಲೆ ಪ್ರತಿ ತಿಂಗಳು ಸರ್ಕಾರದ ಮತ್ತೊಂದು ಸಂಸ್ಥೆಯಾದ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ವೇತನವನ್ನು ಪಡೆಯುತ್ತಾರೆ. ದಿನಾಂಕ : 21-06-2021 ರಂದು ನಡೆದ ಮಂಡಳಿಯ ಸಭೆಯಲ್ಲಿ ಇವರನ್ನು ಮುಂದುವರೆಸಲು ತಿರ್ಮಾನಿಸಲಾಗಿದೆ. ಈ ಸಭೆಯಲ್ಲಿ ಡಾ|| ಎನ್ ಸೆಲ್ವ ಕುಮಾರ್ ರವರು ಛೇರ್ಮನ್ ಸ್ಮಾರ್ಟ್ ಸಿಟಿ ಲಿಮಿಟೆಡ್, ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ, ನಾಲ್ಕು ಜನಾ ಆಡಳಿತ ಪಕ್ಷದ (ಬಿ.ಜೆ.ಪಿ. ಪಕ್ಷದ) ಸದಸ್ಯರುಗಳಾದ ಪೂಜ್ಯ ಮಹಾಪೌರರಾದ ಶ್ರೀಮತಿ ಸುನೀತ ಅಣ್ಣಪ್ಪ ರವರು, ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಶ್ರೀ ಚನ್ನಬಸಪ್ಪ ರವರು, ಪಾಲಿಕೆ ಸದಸ್ಯರಾದ ಜ್ಞಾನೇಶ್ ರವರು, ವಿಶ್ವನಾಥ ರವರು ಇದ್ದರು. ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಮಸ್ತ ಯುವ ಜನತೆ ಪರವಾಗಿ ಕೆಲವು ಪ್ರಶ್ನೆಗಳು. - ನಿವೃತ್ತಿ ಹೊಂದುವವರಿಗೆ ಮತ್ತೆ ಏಕೆ ಮುಂದುವರೆಸುತ್ತೀರಿ ?
- ಯುವಕರು ಈ ಕೆಲಸ ಮಾಡಲು ಸಾಮರ್ಥ್ಯವಿಲ್ಲವೆ ?
- ಹೊಸ ಯುವಕರಿಗೆ ಏಕೆ ಈ ಕೆಲಸ ಮಾಡಲು ಅವಕಾಶ ಕೊಡುತ್ತಿಲ್ಲ ?
- ಯುವಕರಿಗೆ ಸಂಪೂರ್ಣ ಕಡೆಗಣಿಸಲಾಗಿದೆ ಏಕೆ ?
- ಸರ್ಕಾರದಲ್ಲಿ ಬಹಳಷ್ಟು ಜನ ಯುವ ಅಧಿಕಾರಿಗಳು ಬಡ್ತಿ ಹೊಂದಿದ್ದು, ಅವರಿಗೇಕೆ ಈ ಹುದ್ದೆಯನ್ನು ಸೂಚಿಸುತ್ತಿಲ್ಲ ?
- ಕರೋನಾ ಸಂದರ್ಭದಲ್ಲಿ ಅನೇಕ ಯುವಕರು ಕೆಲಸವಿಲ್ಲದೆ ಇದ್ದು ಅವರಿಗೇಕೆ ಈ ಹುದ್ದೆಗಳಲ್ಲಿ ಅವಕಾಶ ಕೊಡುತ್ತಿಲ್ಲ ?
- ರಾಜಕೀಯ ಒತ್ತಡವೊ ಅಥವಾ ಯುವ ಜನತೆ ಮೇಲೆ ಧ್ವೇಶವೊ ?
- ನಿಮ್ಮಂತಹ ಪ್ರಮಾಣಿಕ ಅಧಿಕಾರಿಗಳಿಂದಲೆ ಈ ರೀತಿ ಆದಲ್ಲಿ ಯುವಜನತೆಗೆ ನ್ಯಾಯವೊದಗಿಸಿ ಕೊಡುವವರು ಯಾರು ?
ಮೇಲೆ ಎಲ್ಲಾ ಕೇಳಿರುವ ಪ್ರಶ್ನೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಉತ್ತರ ಕೊಡಬೇಕು. ಹಾಗೂ ಶಿವಮೊಗ್ಗ ನಗರದಲ್ಲಿ ಬಹಳಷ್ಟು ಯುವ ಜನತೆ ಪ್ರತಿ ನಿತ್ಯ ಕೆಲಸಕ್ಕಾಗಿ ಸರ್ಕಾರಿ ಕಛೇರಿಗಳಿಗೆ, ಖಾಸಗಿ ಸಂಸ್ಥೆಗಳಿಗೆ, ಕೆಲಸಕ್ಕಾಗಿ ತಮ್ಮ ಪದವಿ ಪ್ರಮಾಣ ಪತ್ರದೊಂದಿಗೆ ಅಲೆದಾಡುತ್ತಿದ್ದಾರೆ. ತಮ್ಮ ವಿದ್ಯೆಗೆ ತಕ್ಕಂತೆ ಕೆಲಸ ಸಿಗದೆ ಹೋದಾಗ ಹೊಟ್ಟೆ ಪಾಡಿಗಾಗಿ ಹಾಗೂ ಮುಂದಿನ ಭವಿಷ್ಯಕ್ಕಾಗಿ ತಾವು ಪಡೆದ ಪದವಿ ಪತ್ರವನ್ನು, ಪರೀತೋಷಕ ಸಹ ಬದಿಗಿಟ್ಟು ಬೇರೆ ಕೆಲಸವನ್ನು ( ಕೂಲಿ ಕೆಲಸ ಆಗಿರಬಹುದು, ವಾಚ್ ಮೆನ್ ಆಗಿರಬಹುದು, ಡ್ರೈವಿಂಗ್ ಆಗಿರಬಹುದು) ಈ ರೀತಿ ಅನೇಕ ಹುದ್ದೆಗಳಿಗೆ ಬಹಳ ದುಃಖದಿಂದ ಸೇರಿಕೊಂಡಿದ್ದಾರೆ. ಆದುದರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ವಿದ್ಯಾವಂತ ಯುವಪೀಳಿಗೆಯ ಪರವಾಗಿ ಕೇಳಿಕೊಳ್ಳುವುದೆನೆಂದರೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ಈ ಮೂರು ಹುದ್ದೆಗಳಿಗೆ ಹೊಸಬರನ್ನ (ಅರ್ಹ ಯುವಕರನ್ನ) ನೇಮಕಮಾಡಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.
ಈ ಪತ್ರಿಕಾಗೋಷ್ಠಿಯಲ್ಲಿ ಪದವೀಧರರಾದ ಭೂಮಿಕಾ (MBA), ಪೂಜಾ (BE), ಆದಿತ್ಯ (BE), ನಿಹಾರಿಕ (Bcom), ಅನುಪ್ (Bcom), ಅಮೃತ್ (BE), ಮೇಘ ಮಲ್ಲೇಶಪ್ಪ (BE) ಭಾಗವಹಿಸಿದರು.