ದೂರದರ್ಶಿತ್ವವನ್ನು ಹೊಂದಿದ್ದ ದೇಶಕಂಡ ಧೀಮಂತ ವಿಶ್ವಮಾನ್ಯ ಮೇಧಾವಿ ಡಾ. ಸರ್. ಎಂ. ವಿಶ್ವೇಶ್ವರಯ್ಯನವರು, ದೇಶಕಟ್ಟುವ, ಜೊತೆಗೆ ಅಭಿವೃದ್ದಿಯ ಕಾಯಕದಲ್ಲಿ ಮೌನಕ್ರಾಂತಿಯ ಹರಿಕಾರರು ಎಂದು ಎಫ್.ಐ.ಸಿ.ಸಿ.ಐ ಛರ‍್ಮನ್ ಕರ್ನಾಟಕ ರಾಜ್ಯ ಪರಿಷತ್ತು ಬೆಂಗಳೂರಿನ ಹೆಸರಾಂತ ಖ್ಯಾತ ಉದ್ಯಮಿ ಶ್ರೀಯುತ ಉಲ್ಲಾಸ್ ಕಾಮತ್‌ರವರು ನುಡಿದರು.

ಅವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಹಮ್ಮಿಕೊಳ್ಳಲಾದ “ಇಂಜಿನಿರ‍್ಸ್ ಡೇ” ಮತ್ತು ಭಾರತರತ್ನ ಡಾ.ಸರ್.ಎಂ. ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆಯನ್ನು ಕೈಗಾರಿಕಾ ಪ್ರಶಸ್ತಿ ಪ್ರಧಾನ, ೨೦೨೨ರ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಮತ್ತು ಸಂಘದ ನೂತನ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಯಾವುದೇ ಅತ್ಯಾಧುನಿಕ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಭಾರತರತ್ನ ಡಾ. ಸರ್. ಎಂ. ವಿಶ್ವೇಶ್ವರಾಯರವರು ದೇಶದಾದ್ಯಂತ ಹಲವಾರು ಅಭಿವೃದ್ದಿ ಯೋಜನೆಗಳನ್ನು ಹುಟ್ಟುಹಾಕಿದರು ಅವುಗಳು ಇಂದಿಗೂ ಪ್ರಸ್ತುತವಾಗಿವೆ. ಅದರಲ್ಲೂ ಕರ್ನಾಟಕಕ್ಕೆ ಅವರ ಕೋಡುಗೆ ಅಪಾರ. ಜಲ ವಿದ್ಯುತ್ ಯೋಜನೆಗಳು, ಭದ್ರಾವತಿ ಉಕ್ಕು-ಕಬ್ಬಿಣ ಮತ್ತು ಕಾಗದ ಕಾರ್ಖಾನೆ, ಮೈಸೂರು ಬ್ಯಾಂಕ್, ಮೈಸೂರು ಸಾಬೂನು ಕಾರ್ಖಾನೆ ಮುಂತಾದ ಕೃಷಿ ಮತ್ತು ಕೈಗಾರಿಕಾ ಯೋಜನೆಗಳನ್ನು ರೂಪಿಸಿ ಅಂದಿನ ಕಾಲದಲ್ಲೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದ ಮಾಹಾನ್ ಪುರುಷ. ಅವರ ಅನೇಕ ಯೋಜನೆಗಳು ಕರ್ನಾಟಕದಲ್ಲಿ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಇಂದಿನ ಅಭಿವೃದ್ದಿಗೆ ಅವರ ಸರ್ವಾಂಗೀಣ ಕೊಡುಗೆ ಅವಿಸ್ಮರಣೀಯ ಅವರ ಕಾರ್ಯ ಸೇವಾ ಬದ್ದತೆ, ಅವರು ನೀರಾವರಿ, ಕೃಷಿ, ವಿದ್ಯುತ್, ಕೈಗಾರಿಕಾ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಯೋಜನೆಗಳು ಅವಿಸ್ಮರಣೀಯ ಎಂದು ತಿಳಿಸಿದರು.

ಒಂದು ದೇಶ ಅಭಿವೃದ್ದಿ ಹೊಂದಿ ಮುಂದೆ ಬರಲು ಉದ್ಯಮ ಮತ್ತು ಉದ್ಯಮಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ವ್ಯಪಾರಸ್ಥರ ಮಕ್ಕಳು ಹೊಸ ಹೊಸ ವ್ಯಾಪಾರವನ್ನೇ ಅವಲಂಬಿಸಿ ಅಭಿವೃದ್ದಿ ಸಾಧಿಸಬೇಕು ಮಕ್ಕಳುಗಳಿಗೆ ೨೧ನೇ ವಯಸ್ಸಿಗೆ ಕೈಗಾರಿಕೆಗಳು, ಉದ್ಯಮವನ್ನು ಪರಿಚಯಿಸಿ ೨೫ ವರ್ಷ ಬರುವಷ್ಟರಲ್ಲಿ ಸ್ವತಂತ್ರವಾಗಿ ಉದ್ದಿಮೆಯನ್ನು ಪ್ರಾರಂಭಿಸಿ ಹೊಸ ಉದ್ಯಮವನ್ನು ಪ್ರ‍್ರಾರಂಬಿಸಿ ನಡೆಸಲು ಅವಕಾಶ ಮಾಡಿಕೊಡಬೇಕು. ಅಲ್ಲಿಂದ ೪-೫ ವರ್ಷದವರೆಗೆ ಅವರ ನೋವು ಬೀಳುಗಳಿಗೆ ಆಧಾರಸ್ಥಂಬವಾಗಿ ನಿಂತು ಉದ್ಯಮ ಮುಂದುವರೆಸಲು ಸಹಕಾರ ನೀಡಬೇಕು ಎಂದು ಹೇಳಿದರು. ಉದ್ಯಮದಲ್ಲಿ ಹಿಂದಿನ ನೆಗೆಟೀವ್ ಅನುಭವಗಳನ್ನು ನೋಡದೆ ಮುಂದಿನ ಯೋಜನೆ, ಪ್ರಗತಿಯ ಬಗ್ಗೆ ಆಲೋಚಿಸಬೇಕು, ಉದ್ಯಮ ಒಂದು ಬಸ್ ಎಂದಾದರೆ ಉದ್ಯಮಿ ಬಸ್ ಚಾಲಕನಿದ್ದಂತೆ ಯಾವಾಗಲು ಬ್ಯಾಕ್ ಮಿರರ್ ನೋಡುತ್ತಿದ್ದರೆ ಅಪಘಾತವಾಗುವ ಸಂಭವವೇ ಹೆಚ್ಚು ಉದ್ಯಮದಲ್ಲಿ ಮುಂದೆ ಮುಂದೆ ನೋಡುವ ವಿಶನ್ ಇರಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಸ್ಟಾರ್ಟಪ್ ಇಂಡಿಯಾ, ಆತ್ಮನಿರ್ಭರ ನಂತ ಮುಂತಾದ ಯೋಜನೆಗಳು ಭಾರತವು ಬೇರೆ ದೇಶಗಳನ್ನು ಆಶ್ರಯಿಸುವ ಅಗ್ಯವಿಲ್ಲದೆ ಆರ್ಥಿಕ ಸದೃಡತೆಯತ್ತ ಮುನ್ನುಗುವ ದೇಶವಾಗಿದೆ. ಪ್ರಪಂಚಲ್ಲೇ ನಾವು ಕೈಗಾರಿಕಾ ಕ್ಷೇತ್ರದಲ್ಲಿ ೫ನೇ ಸ್ಥಾನದಲ್ಲಿದ್ದೇವೆ. ೨೦೩೦ನೇ ಇಸವಿಯೊಳಗೆ ವಿಶ್ವದಲ್ಲೆ ಎರಡನೆ ಸ್ಥಾನಕ್ಕೆ ಹೋಗುತ್ತೇವೆ. ಬಾರತ ಸೂಪರ್ ಪವರ್ ಆಗಲಿದೆ ಎಂದು ನುಡಿದರು. ಕೈಗಾರಿಕಾ ಬೆಳವಣಿಗೆಗೆ ಕನಾಟಕದಲ್ಲಿ ಉತ್ತಮ ಅವಕಾಶಗಳು, ವಾತಾವರಣ, ಇದ್ದು ದೇಶದ ಅತ್ಯುತ್ತಮ ಕೈಗಾರಿಕೆಗಳಲ್ಲಿ ೪೦೦ ಕೈಗಾರಿಕೆಗಳು ಕರ್ನಾಟಕದಲ್ಲೆ ಇವೆ ಇದು ಹೆಮ್ಮೆ ಅನಿಸುತ್ತದೆ ಎಂದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳಿರುವುದರಿಂದ ಯೋಜನೆಗಳನ್ನು ರೂಪಿಸಿ ಅನುಷ್ಟಾನಕ್ಕೆ ತರುವ ಅವಕಾಶಗಳು ಹೆಚ್ಚು ಸುಲಭ ನಾವು ಪ್ರಯತ್ನಶಿಲರಾಗಬೇಕು ಎಂದು ನುಡಿದರು.
ಶಿವಮೊಗ್ಗ ನಾನು ಹುಟ್ಟಿದ ಊರು ಶಿವಮೊಗ್ಗದ ಕೈಗಾರಿಕಾ ಸ್ಥಾಪನೆಗೆ ಒಳ್ಳೆಯ ಅವಕಾಶಗಳಿದ್ದು, ಇಲ್ಲಿನ ಉತ್ಪನ್ನಗಳು ದೇಶ ವಿದೇಶಗಳಿಗೆ ರಫ್ತಾಗುತ್ತಿದ್ದು ಶಿವಮೊಗ್ಗ ವಿಶ್ವದಲ್ಲೆ ಫೌಂಡ್ರಿ ಉದ್ಯಮದಲ್ಲಿ ಹೆಸರು ಮಾಡಿದೆ ಇದರಿಂದ ಉದ್ಯೋಗಗಳು ಸೃಷ್ಟಿಯಾಗಿ ಅಭಿವೃದ್ದಿ ಆಗುತ್ತದೆ ಎಂದು ಹೇಳಿದರು.

ಬೆಂಗಳೂರಿಗಿಂತ ನಮ್ಮ ನಮ್ಮ ಊರುಗಳಲ್ಲೆ ಉದ್ಯಮ ಪ್ರ‍್ರಾರಂಬಿಸಬೇಕು ಇದಕ್ಕೆ ಸ್ಥಳೀಯರ, ರಾಜಿಕೀಯ ಮುಖಂಡರ ಬೆಂಬಲ ತೆಗೆದುಕೊಳ್ಳಲು ಸೂಚಿಸಿದರು. ಕೆಲಸ ಕೇಳುವ ಬದಲು ನಾಲ್ಕು ಜನರಿಗೆ ಕೆಲಸ ಕೋಡುವ ಉದ್ಯಮ ಪ್ರರಂಬಿಸಿದರೆ ಅವನೇ ದೇಶದ ಶ್ರೇಷ್ಟ ಪ್ರಜೆ ಎಂದು ಇದರಿಂದ ದೇಶದ ಜಿ.ಡಿ.ಪಿ ಮಟ್ಟ ಏರುತ್ತದೆ ಎಂದು ತಿಳಿಸಿದರು.
ಸಮಾರಂಭದ ಆಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್ ರವರು ವಹಿಸಿ ಮಾತನಾಡುತ್ತಾ ವಿಶ್ವೇಶ್ವರಯ್ಯನವರ ಇಂಜಿನಿಯರ್, ದಿನಾನರು, ಮಾನವತಾವಾದಿ, ಹಲವು ಕ್ಷೇತ್ರಗಳಲ್ಲಿ ಸಾರ್ಥಕ ಸಾಧನೆ ಮಾಡಲು ಅವರ ಶಿಸ್ತು, ಕಾರ್ಯದಕ್ಷತೆ, ಆದರ್ಶಗಳು, ಅಳವಡಿಸಿಕೊಂಡು ಬಂದಿರುವ ತತ್ವ ಸಿದ್ದಾಂತಗಳೆ ಕಾರಣ. ಅಪಾರ ಯೋಜನೆಗಳು, ಇಂದಿನ ಮತ್ತು ಮುಂದಿನ ಪೀಳಿಗೆಗೆ ದಾರಿಧೀಪವಾಗಿದೆ. ಎಂದು ನುಡಿದರು. ಸರ್. ಎಂ. ವಿಯವರ ವಾಣಿಜ್ಯ ಕೃಷಿ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಿಂದ ಹೆಚ್ಚು ಅಭಿವೃದ್ದಿ ಸಾದಿಸಲು ಸಾದ್ಯವಾಗಿದೆ ಎಂದು ನುಡಿದರು. ಅಂತಹ ಮಹಾನ್ ವ್ಯಕ್ತಿಯ ಶಿಸ್ತು, ಆದರ್ಶಗಳನ್ನು ನಾವು ಅಳವಡಿಸಿಕೊಂಡಲ್ಲಿ ನಾವು ನಮ್ಮ ಕೈಗಾರಿಕೆಗಳು, ಉದ್ಯಮಗಳು ಅಭಿವೃದ್ದಿ ಹೊಂದಿ ದೇಶ ಅಭಿವೃಧ್ದಿಯತ್ತ ಸಾಗಲು ಸಾದ್ಯವಾಗುತ್ತದೆ ಎಂದು ತಿಳಿಸಿ ಇಂದಿನ ಸಮಾರಂಭಕ್ಕೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿಗಳಾದ ವಸಂತ್ ಹೋಬಳಿದಾರ್, ಕೈಗಾರಿಕಾಭಿವೃದ್ದಿ ಸಮಿತಿ ಛೇತ್ಮನ್ ಎಂ.ರಾಜು, ಕಾರ್ಯಕ್ರಮ ಅಭಿವೃದ್ದಿ ಸಮಿತಿ ಛರ‍್ಮನ್ ಬಿ. ಆರ್. ಸಂತೋಷ್, ಖಜಾಂಚಿಗಳಾದ ಮಧುಸೂದನ ಐತಾಳ್, ಜಂಟಿ-ಕಾರ್ಯದರ್ಶಿ ವಿಜಯಕುಮಾರ್ ಟಿ.ಎನ್. ಲಕ್ಷಿö್ಮಕಾಂತ್, ರಮೇಶ್ ಹೆಗ್ಗಡೆ, ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್. ವಾಸುದೇವ ನಿರ್ಧೇಶಕರುಗಳಾದ ಕೆ.ಎಸ್. ಸುಕುಮಾರ್, ಪ್ರದೀಪ್ ಎ.ಯಲಿ, ಇ.ಪರಮೇಶ್ವರ್, ಜಗದೀಶ್ ಮಾತನವರ್, ಗಣೆಶ ಎಂ. ಅಂಗಡಿ, ಮಂಜೇಗೌಡ, ಶರತ್ ಎಸ್. ಭೂಪಾಳಂ, ಮಾಜಿ ಅಧ್ಯಕ್ಷರುಗಳಾದ ಎ.ಆರ್.ಅಶ್ವಥ್‌ನಾರಾಯಣ ಶೆಟ್ಟಿ, ಕೆ.ವಿ. ವಸಂತ್‌ಕುಮಾರ್, ಡಿ.ಎಂ. ಶಂಕರಪ್ಪ ಸಂಘದ ಸಂಯೋಜಿತ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…