ಶಿಕಾರಿಪುರ ನ್ಯೂಸ್…

ಶಿಕಾರಿಪುರ ಸೆ.21: ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಇವರು ಯಾವುದೇ ಪದಾಧಿಕಾರಿಗಳು ಚುನಾವಣೆವರೆಗೆ ವಿಶ್ರಮಿಸುವಾಗಿಲ್ಲ. ಆ ರೀತಿ ವಿಶ್ರಾಂತಿ ಬೇಕಿದ್ದರೆ ತಮಗೆ ನೀಡಿರುವ ಹುದ್ದೆಯಿಂದ ಕೆಳಗಿಳಿಯಿರಿ ಎಂಬ ಕಟ್ಟುನಿಟ್ಟಿನ ಕಟ್ಟಪ್ಪಣೆಯನ್ನು ಹೊರಡಿಸಿದ ಹಿನ್ನಲೆಯಲ್ಲಿ ರಾಜ್ಯದ ಬಹುತೇಕ ಪದಾಧಿಕಾರಿಗಳು ಕ್ಷೇತ್ರ ಸುತ್ತಲು ಆರಂಭಿಸಿದ್ದಾರೆ.

ಆ ಹಿನ್ನಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನಕಾರ್ಯದರ್ಶಿಗಳಾದ ಪಿ.ಓ.ಶಿವಕುಮಾರ್ ಇವರಿಗೆ ಶಿಕಾರಿಪುರ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ನೀಡಿ ಪಕ್ಷದ ಬಲವರ್ಧನೆಯ ಜವಾಬ್ದಾರಿಯನ್ನು ನೀಡಲಾಗಿದೆ. ಶಿಕಾರಿಪುರ ಕೆಲವೊಂದು ನಾಯಕರುಗಳಿಗೆ ಎಷ್ಟೇ ಸೂಚನೆ ಕೊಟ್ಟರು ಕ್ಯಾರೆ ಎನ್ನದೇ ಇರುವ ಹಿನ್ನಲೆಯಲ್ಲಿ ಸ್ವತ: ಶಿವಕುಮಾರ್ ರವರೇ ಪ್ರತಿಗ್ರಾಮಗಳಿಗೂ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡು ಜನರು ಯಾಕೆ? ಕಾಂಗ್ರೆಸ್ ಗ ಮತ ಹಾಕಬೇಕು ಎನ್ನುವ ಬಗ್ಗೆ ಮತದಾರರಲ್ಲಿ ಜಾಗೃತೆ ಮೂಡಿಸುವ ಹಾಗೂ ಈ ತಿಂಗಳ ಕೊನೆಯ ಭಾಗದಲ್ಲಿ ಕರ್ನಾಟಕದಲ್ಲಿ ಆರಂಭವಾಗಲಿರುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಪ್ರಧಾನಕಾರ್ಯದರ್ಶಿಗಳು ಈಗಾಗಲೇ ಶಿಕಾರಿಪುರ ವಿಧಾನಸಭಾ ಕ್ಷೇತ್ರ ಪ್ಯಾಪ್ತಿಯ ಶಿರಾಳಕೊಪ್ಪ ಬ್ಲಾಕ್ ಗೆ ಒಳಪಡುವ ಗ್ರಾಮಗಳಾದ ಹಿರೇಜಂಬೂರು, ತಡಸನಹಳ್ಳಿ, ಮಲ್ಲೇನಹಳ್ಳಿ, ಬಿದರಕೊಪ್ಪ ತಾಂಡ್ಯ, ಕೊರಟಗೆರೆ, ಕರ್ನಳ್ಳಿ, ರಾಗಿಕೊಪ್ಪ ತಾಂಡ್ಯ, ಮಳವಳ್ಳಿ, ಕುಸ್ಕೂರು, ಬೋಗಿ, ಹುಲಿಗಿನಕೊಪ್ಪ, ಕೋಡಿಕೊಪ್ಪ, ಕಾನಳ್ಳಿ, ಬಿಳಿಕಿ, ತಡುಗುಣಿ. ತೊಗರ್ಸಿ ಹಾಗೂ ಇನ್ನಿತರ ಗ್ರಾಮಗಳ ವಿವಿಧ ಮನೆಗಳಿಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾದರಪ್ಪ, ಕೆಪಿಸಿಸಿ ಸದಸ್ಯರಾದ ಎನ್. ಚಂದ್ರಶೇಖರ್, ಮುಖಂಡರುಗಳಾದ ನಾಗರಾಜ್, ನಾಗನಗೌಡ ಮತ್ತಿತರರು ಪಕ್ಷದ ಪ್ರಮುಖರು ಇವರ ಪ್ರವಾಸದ ಜೊತೆಯಲ್ಲಿದ್ದರು.