ಶಿವಮೊಗ್ಗ: ಆರೋಗ್ಯವು ಎಲ್ಲ ಸಂಪತ್ತುಗಳಿಗಿAತಲೂ ಮಿಗಿಲಾದುದು ಎಂದು ಸರ್ಜಿ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಹಾಗೂ ಸಾಯಿ ಮಹಿಳಾ ಗೃಹ ನಿರ್ಮಾಣ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಹಾಗೂ ಸರ್ಜಿ ಆಸ್ಪತ್ರೆಗಳ ಸಹಯೋಗದೊಂದಿಗೆ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಕ್ಯಾನ್ಸರ್ ಕುರಿತು ಹಮ್ಮಿಕೊಂಡಿದ್ದ ಅರಿವು ಕರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಆರೋಗ್ಯವೇ ಮಹಾಭಾಗ್ಯ. ಆರೋಗ್ಯವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಹೇಳಿದರು.

ಮಹಿಳೆಯರು ಕುಟುಂಬದ ಬೆನ್ನೆಲುಬು. ಜೀವನದ ಪ್ರತಿ ಹಂತದಲ್ಲೂ ಮಹಿಳೆ ತ್ಯಾಗ ಮಯಿ. ಕುಟುಂಬ ಒಳಗು , ಹೊರಗು ಎಲ್ಲವನ್ನು ಜವಾಬ್ದಾರಿಯಿಂದ ನಿಭಾಯಿಸುವ ಶಕ್ತಿ ಆಕೆಗಿದೆ. ಹಾಗಾಗಿ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು. ಈ ನಿಟ್ಟಿನಲ್ಲಿ ಸರ್ಜಿ ಸಮೂಹ ಸಂಸ್ಥೆಯು ಮಹಿಳೆಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಗಳನ್ನು ನೀಡುತ್ತಿದೆ. ಇದರ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭ ರೋಟರಿ ೧೧ ರ ವಲಯದ ಮಾಜಿ ಸಹಾಐಕ ಗರ‍್ನರ್ ಜಿ.ವಿಜಯ ಕುಮಾರ್ ಮಾತನಾಡಿ,ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಒತ್ತಡ ಮುಕ್ತ ಜೀವನ ನಡೆಸಬೇಕು. ಕಾಯಿಲೆಯ ಲಕ್ಷöಣಗಳು ಕಂಡ ತಕ್ಷöಣ ವೈದ್ಯರ ಬಳಿ ತೋರಿಸಿಕೊಳ್ಳಬೇಕು. ಬದಲಾದ ಕಾಲಘಟ್ಟದಲ್ಲಿ ನಾವು ನಿತ್ಯವೂ ಯೋಗ, ವ್ಯಾಯಾಮ, ವಾಕಿಂಗ್ ರೂಢಿಸಿಕೊಳ್ಳುವ ಮೂಲಕ ಉತ್ತಮ ಜೀವನ ಶೈಲಿಯನ್ನು ಹೊಂದಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.


ಕರ‍್ಯಕ್ರಮದ ಅಧ್ಯಕ್ಷöತೆಯನ್ನು ರೋಟರಿ ಪೂರ್ವದ ಅಧ್ಯಕ್ಷೆö ಸುಮತಿ ಕುಮಾರ ಸ್ವಾಮಿ ಮಾತನಾಡಿ, ರೋಟರಿ ಪೂರ್ವ ಹಾಗೂ ಸರ್ಜಿ ಸಂಸ್ಥೆ ವತಿಯಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಶಿಬಿರದಲ್ಲಿ ಡಾ.ಗೀತಾ ಲಕ್ಷಿö್ಮ,ಡಾ.ಮಂಜುನಾಥ್, ಗಣೇಶ್, ಚಂದ್ರಹಾಸ, ಸತೀಶ್ ರಾಯ್ಕರ್, ಗುಡದಪ್ಪ ಕಸಬಿ ಹಾಜರಿದ್ದರು.

ಫೋಟೊ ಮಾಹಿತಿ
ರೋಟರಿ ಶಿವಮೊಗ್ಗ ಪೂರ್ವ ಹಾಗೂ ದುರ್ಗಿಗುಡಿ ಸಾಯಿ ಮಹಿಳಾ ಗೃಹ ನಿರ್ಮಾಣ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಹಾಗೂ ಸರ್ಜಿ ಆಸ್ಪತ್ರೆಗಳ ಸಹಯೋಗದೊಂದಿಗೆ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

ವರದಿ ಪ್ರಜಾಶಕ್ತಿ…