ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡು ದೇಶಪ್ರೇಮಿಗಳಾಗಿ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಎಂ ಬಿ ಎ ವಿಭಾಗದ ಮುಖ್ಯಸ್ಥರಾದ ಡಾ. ಗಿರಿಧರ್ ಕೆ.ವಿ ನುಡಿದರು.

ಅವರು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಹಾಲಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಶಕ್ತಿಯಿಂದ ದೇಶವನ್ನು ಉತ್ತಮ ಹಾದಿಯಲ್ಲಿ ನಿರ್ಮಾಣ ಮಾಡಬಹುದು ಯುವಶಕ್ತಿ ದೇಶದ ಆಸ್ತಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆ ನಮ್ಮ ವಿದ್ಯಾಭ್ಯಾಸದ ಜೊತೆಗೆ ನಮ್ಮನ್ನು ಸೃಜನಶೀಲರನ್ನಾಗಿಸುವುದರ ಜೊತೆಯಲ್ಲಿ ದೈಹಿಕವಾಗಿ ಮಾನಸಿಕವಾಗಿ ಸದೃಢನಾಗಿಸುವುದು, ಪರಸ್ಪರ ಓಡನಾಟ ಹೆಚ್ಚುವುದು ಮತ್ತು ಜೊತೆಗೆ ಗ್ರಾಮೀಣ ಬದುಕಿನ ಪರಿಚಯವಾಗುತ್ತದೆ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿ ರಾಜ್ಯ ಪ್ರಶಸ್ತಿಗೆ ಬಾಜಿನರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ
ಜಿ ವಿಜಯ್ ಕುಮಾರ್ ರವರು ಮಾತನಾಡುತ್ತಾ
ರಾಷ್ಟ್ರೀಯ ಸೇವಾ ಯೋಜನೆಯೆಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಪ್ರಪಂಚಜ್ಞಾನ ವೃದ್ಧಿಯಾಗುವುದು ಜೊತೆಗೆ ಸೇವಾ ಮನೋಭಾವನೆಗೆ ಹಾಗೂ ಮನುಕುಲದ ಸೇವೆಯಲ್ಲಿ ನಮ್ಮನ್ನು ನಾವು ಹೇಗೆ ತೊಡಗಿಸಿಕೊಳ್ಳಬಹುದೆಂದು ತಿಳಿಯುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪ್ರೊ. ಹೆಚ್ ಎಮ್ ಸುರೇಶ್ ಪ್ರಾಂಶುಪಾಲರು ಆಚಾರ್ಯ ತುಳಿಸಿ ವಾಣಿಜ್ಯ ಕಾಲೇಜು ಇವರು ಕಾರ್ಯಕ್ರಮನ ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿ ಗ್ರಾಮೀಣ ಬದುಕಿನ ಪರಿಸ್ಥಿತಿಗಳು ಹಾಗೂ ಸೇವೆಗಳನ್ನು ಮಾಡಲು ಒಳ್ಳೆಯ ಅವಕಾಶವಾಗಿದೆ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ದಿನಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ನಾಯಕನಾಗುವ ಗುಣಗಳು ಬೆಳೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಿಗೆ ಹಾಗೂ ಎನ್ ಎಸ್ ಎಸ್ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಪ್ರೊ ಕೆ ಎಮ್ ನಾಗರಾಜ್, ಪ್ರೊ ಖಾಜಿಮ್ ಶೆರಿಫ್,
ಪ್ರೊ ಎಸ್ ಜಗದೀಶ್, ಪ್ರೊ ಎನ್ ಮಂಜುನಾಥ್
ಹಾಗೂ ಉಪನ್ಯಾಸಕರು ಸಿಬ್ಬಂದಿಗಳು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ…