ಶ್ರೀ ದೇಗುಲಮಠದ ಶ್ರೀ ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16 ನೇ ವರ್ಷದ ವಾರ್ಷಿಕ ಮಹಾ ಸಭೆಯ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ಬಿಲ್ವಪತ್ರೆ ಮಠದ ಪರಮಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಪರಮಪೂಜ್ಯ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿಗಳು ಈ ಸಂಘ ಪರಮಪೂಜ್ಯ ಡಾ|| ಶ್ರೀಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಮುಮ್ಮಡಿ ಮಹಾಲಿಂಗ ಮಹಾಸ್ವಾಮಿಗಳವರ ಕನಸಿನ ಕೂಸಾಗಿದ್ದು ಇದು ಹಿರಿಯ ವಿದ್ಯಾರ್ಥಿಗಳು ಮತ್ತು ನೌಕರರ ಎಲ್ಲರಿಗೂ ಅನುಕೂಲವಾಗಲೆಂದು ಸಂಘವನ್ನು ಸ್ಥಾಪಿಸಿದ್ದಾರೆ. ಇದನ್ನು ಉಳಿಸಿ ಬೆಳೆಸುವುದು ಸಂಘದ ಎಲ್ಲಾ ಹಾಗೆ ಸದಸ್ಯರ ಕರ್ತವ್ಯ ಹಾಗೆ ಎರಡು ಮೂರು ವರ್ಷಗಳಿಂದ ಆರ್ಥಿಕ ಹಿಂಜರಿಕೆಯಾಗಿದ್ದು ಕರೋನ ನಡುವೆಯೂ ಸಹ ಯಾರಿಗೂ ತೊಂದರೆಯಾಗದಂತೆ ನಮ್ಮ ಬ್ಯಾಂಕ್ ಮುಂದುವರೆದುಕೊಂಡು ಬಂದಿದೆ ಹಾಗೆ ಈ ವರ್ಷ ಆಡಳಿತ ಮಂಡಳಿ ಹಾಗೂ ನೌಕರವರ್ಗ ಹೆಚ್ಚು ಶ್ರಮವನ್ನು ವಹಿಸಿ ದಾಖಲೆ ಪ್ರಮಾಣದಲ್ಲಿ ಸಾಲ ಮರು ಸಂಗ್ರಹಿಸಿದ್ದಾರೆ ಅವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೆ ಸದಸ್ಯರು ಹೆಚ್ಚಿನ ರೀತಿಯಲ್ಲಿ ಸಾಲ ಮತ್ತು ಠೇವಣಿಯ ಅನುಕೂಲ ಪಡೆದು ಎಲ್ಲರೂ ಅಭಿವೃದ್ಧಿ ಹೊಂದಬೇಕು ಹಾಗೆ ಎಲ್ಲರೂ ಸಂಘವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಬೇಕೆಂದು ಎಲ್ಲರಿಗೂ ಕರೆ ನೀಡಿದರು ಆಡಳಿತ ಮಂಡಳಿ ವರದಿಯನ್ನು ಸಂಘದ ಅಧ್ಯಕ್ಷರಾದ ಪರಮೇಶಯ್ಯ ನವರು ಓದಿ ಅಂಗೀಕರಿಸಿದರು.

ಸೌಹಾರ್ದ ಸಹಕಾರಿಯ ಸಂಯೋಜನಾಧಿಕಾರಿಗಳಾದ ಶ್ರೀ ರಾಜೇಶ್ ರವರು ಸಹಕಾರಿಯ ಕಾರ್ಯನಿರ್ವಹಣೆ ಹಾಗೂ ಸದಸ್ಯರ ಕರ್ತವ್ಯದ ಬಗ್ಗೆ ತಿಳಿಸಿದರು‌. ಸಭೆಗೆ ಮುಖ್ಯ ಅತಿಥಿಗಳಾಗಿ ಮಂಜುನಾಥ್ ಬಸವರಾಜ್ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀನಿವಾಸ್ ಟಿ ನಿರ್ದೇಶಕರುಗಳಾದ ಎಚ್ಎಸ್ ಶಿವಮೂರ್ತಿ, ಜಗದೀಶ್, ಚನ್ನವೀರಯ್ಯ ,ರಾಜು ಎಂ, ಮಹದೇವ್ ಪ್ರಸಾದ್ , ಆರ್ ಎಂ ನಾಗೇಂದ್ರ ಸ್ವಾಮಿ, ಡಿ ಜೆ ಮಂಜುನಾಥ್, ಎ ಎಸ್ ಮಾದೇವ ಪ್ರಸಾದ್ , ಶ್ರೀ ಮತಿ, ನಾಗಮಣಿ, ಶ್ರೀಮತಿ ಅಕ್ಕಮಾದೇವಮ್ಮ ಕಾರ್ಯದರ್ಶಿ ಕೆ. ಎಂ ಹರ್ಷ ಮಹೇಶ್ ಕುಮಾರ್ ನಿಖಿಲ್ ರವರು ಹಾಗು ಸದಸ್ಯರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭ ಪುರಸ್ಕಾರವನ್ನು ಪರಮಪೂಜ್ಯರು ನೀಡಿ ಅಭಿನಂದಿಸಿದರು.

ವರದಿ ಪ್ರಜಾಶಕ್ತಿ…