PFI ಸಂಘಟನೆ ದೇಶಾದ್ಯಂತ 5 ವರ್ಷ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.PFI ಸಂಘಟನೆಯ ಜೊತೆಗೆ 7 ಸಂಘಟನೆಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ. ದೇಶದ್ರೋಹಿ ಕೆಲಸ ನಿರ್ವಹಿಸುತ್ತಿರುವ ಸಂಘಟನೆಗಳ ಆರೋಪದಡಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಕೇಂದ್ರ ಸರ್ಕಾರ PFI ಸಂಘಟನೆಯ ವಿಷಯದಲ್ಲಿ ದೇಶಾದ್ಯಂತ 5 ವರ್ಷ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದು ಇತಿಹಾಸಿಕ ನಿರ್ಧಾರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾತನಾಡಿ PFI ಸಂಘಟನೆಯ ಜೊತೆಗೆ 7 ಸಂಘಟನೆಗಳು 5 ವರ್ಷ ಬ್ಯಾನ್ ಮಾಡಿರೋದು ಮಹತ್ವದ ನಿರ್ಧಾರ ಜೊತೆಗೆ ಎಲ್ಲಾ ಸ್ವಾತಂತ್ರ್ಯ ಹೋರಾಟಗರಿಗೆ ಸಿಕ್ಕಂತ ಐತಿಹಾಸಿಕ ಜಯ ಎಂದರು.