ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರೂ ಯುವ ಕೇಂದ್ರ, ಅರಣ್ಯ ಇಲಾಖೆ, ಸಕ್ರೆಬೈಲು ವನ್ಯಜೀವಿ ವಲಯ ಗಾಜನೂರು, ಶಿವಮೊಗ್ಗ ಜಿಲ್ಲೆ ಇವರ ಸಹಯೋಗದೊಂದಿಗೆ ವಿಶ್ವಪ್ರವಾಸೋದ್ಯಮ ದಿನಾಚರಣೆ, ಪ್ರವಾಸೋದ್ಯಮ ಪುನರಾವಲೋಕನ ಅಥವಾ ಮರುಚಿಂತನೆ ಎಂಬ ದ್ಯೇಯದೊಂದಿಗೆ ಸಕ್ರೆಬೈಲು ಆನೆ ಬಿಡಾರ ವನ್ಯಜೀವಿ ವಲಯ ಗಾಜನೂರು ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮದೊಂದಿಗೆ ಆಯೋಜಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಸೆಲ್ವಮಣಿ, ಜಿಲ್ಲಾಧಿಕಾರಿಗಳು ನೆರವೇರಿಸಿದರು.

ನಂತರ ಮಾತನಾಡಿದ ಯಾವುದೇ ರಾಜ್ಯ, ದೇಶದ ಆರ್ಥಿಕ ಅಭಿವೃದಿಯಲ್ಲಿ ಪ್ರವಾಸೋದ್ಯಮ ಕೊಡುಗೆ ಮಹತ್ತರವಾದುದು.ವಿಶ್ವದ ಅನೇಕ ದೇಶಗಳು ಪ್ರವಾಸೋದ್ಯಮದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಉತ್ತಮಸ್ಥಾನದಲ್ಲಿವೆ. ಆದರೆ ನಮ್ಮ ರಾಜ್ಯದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳಿದ್ದರೂ ಅವುಗಳನ್ನು ಉಪಯೋಗಿಸಿಕೊಂಡು ಪ್ರವಾಸೋದ್ಯಮ ಬೆಳೆಸುವ ಮಹತ್ತರ ಕಾರ್ಯವಾಗಬೇಕಾಗಿದೆ ಎಂದು ತಿಳಿಸಿದರು. ಸರ್ಕಾರವು ಈ ನಿಟ್ಟಿನಲ್ಲಿ ಹಲವಾರು ಪ್ರವಾಸೋದ್ಯಮ ಯೋಜನೆಗಳನ್ನು ಹಾಕಿಕೊಂಡು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಉದ್ಯೋಗಾವಕಾಶಗಳು ಅಭಿವೃದ್ದಿಯಾಗಿ ನಿರುದ್ಯೋಗ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು ಹೊರರಾಜ್ಯಗಳಿಂದ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಲಬ್‌ಗಳು, ಪ್ರವಾಸಿ ತಾಣಗಳು, ಧಾರ್ಮಿಕ, ಐತಿಹಾಸಿಕ ಆಶ್ರಮ ಕ್ಷೇತ್ರಗಳು, ಪ್ರಕೃತಿ ಸುಂದರ ರಮಣೀಯ ಪ್ರದೇಶಗಳು, ಸಹಾಸ ಕ್ರೀಡೆಗಳ ತಾಣಗಳು ಇದ್ದು ಪ್ರವಾಸಿಗರಿಗೆ ಉತ್ತಮ ಪರಿಸರದ ವಾತಾವರಣವಿರುತ್ತದೆ. ವಿಶ್ವಮಟ್ಟದಲ್ಲಿ ಬಾರತ ೫೪ನೇ ಸ್ಥಾನದಲ್ಲಿದ್ದು ಕನಾಟಕದಲ್ಲಿ ನಮ್ಮ ಜಿಲ್ಲೆ ೩ನೇ ಸ್ಥಾನದಲ್ಲಿದೆ ಇಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಿದ್ದು ಅವುಗಳ ಅಭಿವೃದ್ದಿಗೆ ಪ್ರವಾಸೋದ್ಯಮ ಇಲಾಖೆಯಿಂದ ಅನೇಕ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಅವುಗಳನ್ನು ಅಭಿವೃದ್ದಿಪಡಿಸುವ ಕಾರ್ಯವಾಗಬೇಕಾಗಿದೆ ಎಂದರು.

ಪ್ರವಾಸೋದ್ಯಮ ಉದ್ದಿಮೆ ಹೊರ ರಾಜ್ಯ ಹೊರದೇಶಗಳಿಂದ ಆಧಾಯವನ್ನು ಪಡೆದು ಆರ್ಥಿಕ ಸಬಲರು ಹಾಗೂ ನಿರುದ್ಯೋಗ ಸಮಸ್ಯಗೆ ಪರಿಹಾರೋಪಾಯದಲ್ಲಿ ಕಾರ್ಯನಿರ್ವಹಿಸುತ್ತದೆ. ಕೋವಿಡ್ ೨೦೧೯ರ ಪರಿಣಾಮ ಪ್ರವಾಸೋದ್ಯದಲ್ಲಿ ಆರ್ಥಿಕ ದುಷ್ಪರಿಣಾಮವನ್ನು ಎದುರಿಸಬೇಕಾಯಿತು. ಈಗ ಚೇತರಿಕೆ ಕಾಣುತ್ತಿರುವುದು ಆಶಾದಾಯಕ. ಪ್ರವಾಸೋದ್ಯಮವು ಗ್ರಾಮಾಂತರ ಪ್ರದೇಶಗಳ ಅಭಿವೃದ್ದಿ, ಖಾಸಗೀ ಮತ್ತು ರಾಷ್ಟಿçÃಯ ಅಂತರರಾಷ್ಟಿçÃಯ ಸಮುದಾಯಗಳ ಅಭಿವೃದ್ದಿಯಲ್ಲಿ ಹೆಚ್ಚಿನ ಮಹತ್ವದ ಸ್ಥಾನದಲ್ಲಿರುವುದು ಗಮನೀಯವಾಗಿದೆ.

ಕಾರ್ಯಕ್ರಮದಲ್ಲಿ ಹೆಚ್. ಎಸ್. ರಾಮಕೃಷ್ಣ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಶ್ರೀ ಸುರೇಶ್ ಬಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಉಮೇಶ್ ಹೆಚ್. ಸಹಾಯಕ ನಿರ್ದೆಶಕರು, ನೆಹರೂ ಯುವ ಕೇಂದ್ರ, ಶ್ರೀ ಉಲ್ಲಾಸ್ ಯುವ ಅಧಿಕಾರಿಗಳು, ನೆಹರೂ ಯುವಕೇಂದ್ರ, ಶ್ರೀ ಮುನುದೇವ್ ಉಪಾದ್ಯಕ್ಷರು ಹೋಂ ಸ್ಟೇ ಅಸೋಷಿಯೇಶನ್, ಡಾ. ಶ್ರೀನಿವಾಸ್ ಸಹಪ್ರಧ್ಯಾಪರು, ಜೆ.ಎನ್.ಎನ್.ಸಿ ಕಾಲೇಜು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ಛರ‍್ಮನ್ ಪ್ರದೀಪ್ ವಿ. ಯಲಿ,ಜಂಟಿ ಕಾರ್ಯದರ್ಶಿ ಜಿ.ವಿಜಯಕುಮಾರ್, ವನ್ಯಜೀವಿ ಶಿಕ್ಷಣಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…