ಶಿವಮೊಗ್ಗದಲ್ಲಿ ಪಾರ್ಶ್ವ ಸೂರ್ಯಗ್ರಹಣದ ಪ್ರಾತ್ಯಕ್ಷತೆಯನ್ನು ಪ್ರೀಡಂ ಪಾರ್ಕಿನಲ್ಲಿ ಸಾರ್ವಜನಿಕರಿಗೆ ಪರಚಯಿಸುತ್ತ ಹಾರೊಹಳ್ಳಿ ಸ್ವಾಮಿಯವರು ಮಾತನಾಡಿದರು.
ಕೇವಲ ಶೇ.15% ಸೂರ್ಯಗ್ರಹಣವಾಗಿದೆ ಅದನ್ನು ಬರೀ ಕಣ್ಣಿನಿಂದ ನೋಡ ಬಾರದು, ಅವರು ತಂದ ಗ್ರಹಣದ ಕನ್ನಡಕ, ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತೋರಿಸಿದರು. ಇದು ಬೆಳಕು ನೆರಳಿನ ಪ್ರಕೃತಿಯ ಆಟ ಎಂದು ತಿಳಿಸಿದರು.
ಭೂಮಿಗೆ ಬೆಳಕು ಕೊಡುವ ಸೂರ್ಯನಿಗೆ ಅಡ್ಡವಾಗಿ ಚಂದ್ರ ಬಂದಾಗ ಸೂರ್ಯಗ್ರಹಣ ವಾಗುತ್ತದೆ ಎಂದು ವಿಜ್ಞಾನ ಪರಿಷತ್ ನ ಡಾ.ಎಲ್.ಕೆ.ಶ್ರೀಪತಿ ತಿಳಿಸಿದರು.
ಮೂಡ ನಂಬಿಕೆ ದೂರ ಮಾಡಿ, ಜ್ಯೋತ್ಯಷಿಗಳ ಮಾತು ಕೇಳಿ ಹಲವರು ಉಪವಾಸ ಇದ್ದಾರೆ, ದೇವಸ್ಥಾನದ ಬಾಗಿಲು ಹಾಕಿದೆ, ಹೋಟೆಲ್ ಗಳ ಬಾಗಿಲು ತೆಗೆದಿಲ್ಲ, ಪ್ರತಿ ಸಾರಿ ಗ್ರಹಣದಲ್ಲಿ ತಿಂಡಿ ತಿಂದಿದ್ದೇವೆ ಏನು ಆಗಿಲ್ಲ ಎಂದು ಜಿ.ವಿಜಯಕುಮಾರ್ ತಿಳಿಸಿದರು.
ಚಂದ್ರಗ್ರಹಕ್ಕೆ ಮಾನವ ಹೋಗಿ ಬಂದಾಗಿದೆ. ಮಂಗಳ ಗ್ರಹಕ್ಕೆ ಹೋಗಲು ತಯಾರಿನಡೆಸುತ್ತಿರುವ ಇಂದಿನ ದಿನ ಮಾನಸದಲ್ಲಿ ಗ್ರಹಣದಲ್ಲಿ ಊಟ ಮಾಡ ಬೇಡಿ ಎನ್ನುವುದು ಎಷ್ಟು ಸರಿ ಎಂದು ಹೇಳಿದ ಯೂತ್ ಹಾಸ್ಟೆಲ್ಸ್ ಛೇರ್ಮನ್ ವಾಗೇಶ್ ರವರು ಆಗಮಿಸಿದ ಎಲ್ಲರಿಗೂ ಮಂಡಕ್ಕಿ, ವಡೆ, ಸಿಹಿ ಹಂಚಿ ಮೂಡ ನಂಬಿಕೆ ಕೊನೆಗೊಳಿಸಿ ಎಂದರು.
ವಿಜ್ಞಾನದ ಸತ್ಯತೆಯನ್ನು ಎಲ್ಲರೂ ಒಪ್ಪಿಕೊಳ್ಳ ಬೇಕು, ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ರೋ. ಅಸಿಸ್ಟೆಂಟ್ ಗೌರ್ನರ್ ಡಾ.ಗುಡದಪ್ಪ ಕಸವಿ ಹೇಳಿದರು.
ಸತ್ಯಚಿಂತನ ಸಮಾಜ ಮೂಡಬೇಕು. ಮಾದ್ಯಮ ಮಿತ್ರರು ಈ ನಿಟ್ಟಿನಲ್ಲಿ ಹೆಚ್ಚನ ಪ್ರಚಾರ ಮಾಡುವ ಮೂಲಕ ಅನಿಷ್ಟ ಪದ್ದತಿಗಳಿಂದ ಜನ ದೂರ ಉಳಿಯುವಂತೆ ಮಾಡಬೇಕೆಂದು ಮೆಗಾನ್ ಆಸ್ವತ್ರೆ ವ್ಯದ್ಯರಾದ ಡಾ.ಶ್ರೀದರ್ ತಿಳಿಸಿದರು.
ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ವಿಜ್ಞಾನದ ಪಾಠಗಳೊಂದಿಗೆ ಕಂದಾಚಾರಗಳಿಂದ ದೂರವಿರಿ ಎಂದು ತಿಳಿಹೇಳಬೇಕಾಗಿದೆ ಎಂದು ಯೂತ್ ಹಾಸ್ಟೆಲ್ಸ್ ಕಾರ್ಯದರ್ಶಿ ಸುರೇಶ್ ಕುಮಾರ್ ನುಡಿದರು.
ಈ ಸಂದರ್ಭದಲ್ಲಿ ಲೋಕೇಶ್, ಯೋಗಿನಾಥ್, ಅಭಿಷೇಕ್, ಚಂದ್ರು, ಸುಮಾರವಿ ನೂರಾರು ಜನರು ಗ್ರಹಣ ವೀಕ್ಷಿಸಿದರು. ಆಗಮಿಸಿದ ಎಲ್ಲರಿಗೂ ರೋ.ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ ಸ್ವಾಗತಿಸಿದರು. ನಾಗರಾಜ್ ವಂದಿಸಿದರು.