ಬೆಳಕೇ ನಿನ್ನೊಲುಮೆಯಿಂದ
ಹೃದಯದೊಳು ಒಲುಮೆಯ ಗೀತೆ
ಮೂಡಿ ಬರಲಿ…
ಎದೆಯಿಂದ ಎದೆಗೆ
ನಿನ್ನ ಪ್ರೀತಿಯ ಗಾಳಿ ಸೋಕಿ
ಅಂಧಕಾರವ ಹೊರಗೆ ನೂಕಲಿ

ಓ ಬೆಳಕೇ..ಹಣತೆಯ ತಳದಲ್ಲಿ
ಕತ್ತಲೆ ಇರಿಸಿಕೊಂಡರೂ
ದೀಪ ತಾ ಉರಿದು ಬೆಳಕು
ನೀಡುವಂತೆ…..ದೀಪದ ಗುಣವು
ಮಾನವನಲ್ಲಿ ಮೂಡಿ
ಬೆಳಗಲಿ ಮಾನವತೆಯ ಜ್ಯೋತಿ

ನಮ್ಮಿ.. ನಿತ್ಯದ ಬದುಕು
ದೀಪಾವಳಿ ಯಾಗಲಿ
ದ್ವೇಷಾಂಧಕಾರವು ಕಳೆದು
ಪ್ರೀತಿ…ಸಹೋದರತೆಯ
ದೀಪ ಬೆಳಗಲಿ…
ಪ್ರತಿ ಮನೆ ಮನಗಳಲ್ಲಿ ದೀಪ
ಬೆಳಗುವುದರೊಂದಿಗೆ…
ನಾವು ದೀಪ ವಾಗೋಣ ಬನ್ನಿ.

*ಶ್ರೀಮತಿ.ಅನಿತಕೃಷ್ಣ* *ಶಿಕ್ಷಕಿ.ತೀರ್ಥಹಳ್ಳಿ*.