ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ಮತ್ತು ಅಪರಾಧ ಹಿನ್ನೆಲೆಯನ್ನು ಗುರುತಿಸುವ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ವತಿಯಿಂದ ಹೊಸದಾಗಿ MCCTNS(Mobile-Crime & Criminal Tracking Network System ) ಎಂಬ ನೂತನ ಅಪ್ಲಿಕೇಶನ್ ಅನ್ನು ಸಿದ್ದಪಡಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.

ಈ ನೂತನ ಅಪ್ಲಿಕೇಶನ್ ಅನ್ನು ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ಗಳ ಮೊಬೈಲ್ ಫೋನ್ ಗಳಿಗೆ ಇನ್ಸ್ಟಾಲೇಶನ್ ಮಾಡಲಾಗಿದೆ. ರಾತ್ರಿ ಹೊತ್ತು ಕರ್ತವ್ಯ ನಿರ್ವಹಿಸುವ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸ್ಕ್ಯಾನರ್ ಗಳು ನೀಡುತ್ತೇವೆ ಎಂದರು.ಇದರಿಂದ ಕ್ರೈಂ ಲೋಕದ ಅಪರಾಧಿಗಳ ಸಂಖ್ಯೆ ಕಡಿಮೆಯಾಗಬಹುದು.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳನ್ನು ತಮ್ಮ ಮೊಬೈಲ್ ಗೆ ಅಳವಡಿಸಿಕೊಂಡು ಅನುಮಾನಸ್ಪದವಾಗಿ ಓಡಾಡುವ ವ್ಯಕ್ತಿಗಳ ಬೆರಳುಗಳನ್ನು ಸ್ಕ್ಯಾನ್ ಮಾಡಿ ಅವರ ಮೇಲೆ ಅಪರಾಧ ಇರುವುದನ್ನು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಿನ್ನೆಲೆ ಪರಿಶೀಲಿಸಿ, ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.ಮುಂದಿನ ದಿನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಪರಾಧ ತಡೆಗಟ್ಟುವಿಕೆಯಲ್ಲಿ ಈ ಹೊಸ ವಿಶೇಷ ಕಾನ್ಸೆಪ್ಟ್ ಸಹಕಾರಿಯಾಗಲಿದೆ ಎಂದರು.

ವರದಿ ಮಂಜುನಾಥ್ ಶೆಟ್ಟಿ…